ಕುಕನೂರ : ಸಾವ೯ತ್ರಿಕ ಚುನಾವಣೆ ಪಥ ಸಂಚಲನ


ಸಂಜೆವಾಣಿ ವಾರ್ತೆ  
ಕುಕನೂರು, ಏ.09: ಮುಂದಿನ ತಿಂಗಳು  ಮೇ ೧೦ರಂದು ನಡೆಯಲಿರುವ ವಿಧಾನಸಭಾ ಸಾವ೯ತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ಪೊಲೀಸ್ ಭದ್ರತಾ ಪಡೆಗಳ ಹಾಗೂ ಪೊಲೀಸ್ ಸಿಬ್ಬಂದಿ ನೇತೃತ್ವದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಭಾನುವಾರ ಬೆಳಿಗ್ಗೆ ಕುಕನೂರು ಪಟ್ಟಣದಲ್ಲಿ  ಜನ ಜಾಗೃತಿ ಪಥ ಸಂಚಲನ ನಡೆಸಲಾಯಿತು. ಚುನಾವಣಾಧಿಕಾರಿ ಕೇ.ವಿ. ಕಾವ್ಯ ರಾಣಿ, ತಹಸೀಲ್ದಾರ್ ನೀಲ ಪ್ರಭಾ, ಕುಕನೂರು ಪಿಎಸ್ಐ ಯು ಡಾಕೇಶ್ ನೇತೃತ್ವ ವಹಿಸಿದ್ದರು.