ಕುಕನೂರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜ್ಞಾನತಾಣ ಕಾರ್ಯಕ್ರಮ

ಕುಕನೂರು:ನ.10- ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಲ್ಲಿ ತಾಲ್ಲೂಕಿನ ಇಪ್ಪತ್ತು ಸಾವಿರಕ್ಕೂ ಹೆಚ್ಚು ಮಹಿಳೆಯರು ಈ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘದ ಸದಸ್ಯರಾಗಿದ್ದಾರೆ ಆರ್ಥಿಕವಾಗಿ ಸ್ವಯಂಉದ್ಯೋಗಕ್ಕಾಗಿ ಸಹಾಯ ಪಡೆದು ಜೀವನವನ್ನು ಉಜ್ವಲವಾಗಿಸಿ ಕೊಂಡಿದ್ದಾರೆ ಎಂದು ಶ್ರೀ ಅನ್ನದಾನೇಶ್ವರ ಶಾಖಾಮಠದ ಶ್ರೀಗಳಾದ ಮಹಾದೇವ ದೇವರು ಹೇಳಿದರು
ಪಟ್ಟಣದ ಅನ್ನದಾನೇಶ್ವರ ಶಾಖಾಮಠದಲ್ಲಿ ಸೋಮವಾರ ಹಮ್ಮಿಕೊಂಡ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜ್ಞಾನತಾಣ ಕಾರ್ಯಕ್ರಮ ಸಾನಿದ್ಯವಹಿಸಿ ಮಾತನಾಡಿದ ಅವರು,ಕುಕನೂರು ತಾಲ್ಲೂಕಿನಲ್ಲಿ ಸ್ವಸಹಾಯ ಸಂಘದ ಸದಸ್ಯರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಜ್ಞಾನತಾಣ ಎನ್ನುವ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು ಸುಮಾರು ರಾಜ್ಯದ 1ಲಕ್ಷ ವಿದ್ಯಾರ್ಥಿಗಳಿಗೆ ಈ ಯೋಜನೆ ತಲುಪಲಿದ್ದು ಸುಮಾರು 81 ಕೋಟಿ ಯನ್ನು ಈ ಸಂಸ್ಥೆ ವಿನಿಯೋಗ ಮಾಡಿದ್ದಾರೆ ಪ್ರತಿ ತಾಲ್ಲೂಕಿನಲ್ಲಿ ಐವತ್ತು ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ಹಾಗೂ 100ವಿದ್ಯಾರ್ಥಿಗಳಿಗೆ ಟ್ಯಾಬ್ ಕೊಡುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಸಾಂಕೇತಿಕವಾಗಿ ವಿದ್ಯಾರ್ಥಿಗಳಿಗೆ ಗಣ್ಯರು ಲ್ಯಾಪ್ ಟಾಪ ವಿತರಿಸಿದರು ಜತೆಗೆ ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷ ಶಂಭು ಜೋಳದ್ ಅವರಿಗೆ ಧರ್ಮಸ್ಥಳ ಸ್ವಸಹಾಯ ಸಂಘದ ಸಿಬ್ಬಂದಿಗಳಿಂದ ಸನ್ಮಾನಿಸಲಾಯಿತು ಕಾರ್ಯಕ್ರಮದಲ್ಲಿ ಮುಖಂಡರಾದ ಬಸವನಗೌಡ ತೊಂಡಿಹಾಳ ತಾಲ್ಲೂಕು ಯೋಜನಾ ಅಧಿಕಾರಿ ರಾಜೇಶ್ ಹಾಗೂ ಲಕ್ಷ್ಮಣ ಕಾಳಿ ರಾಜಶೇಖರ್ ದ್ಯಾಂಪುರ ಪತ್ರಕರ್ತ ರುದ್ರಪ್ಪ ಭಂಡಾರಿ ಕನಕರಾಯ ಭಜಂತ್ರಿ ಮಂಜುನಾಥ ಪ್ರಸಾದ ಕನ್ನಡ ಜಾನಪದ ಅಧ್ಯಕ್ಷ ಮುರಾರಿ ಭಜಂತ್ರಿ ಇತರರು ಉಪಸ್ಥಿತರಿದ್ದರು..
ಪೋಟೋ:ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷ ಶಂಭು ಜೋಳದ್ ಅವರಿಗೆ ಧರ್ಮಸ್ಥಳ ಸ್ವಸಹಾಯ ಸಂಘದ ಸಿಬ್ಬಂದಿಗಳಿಂದ ಸನ್ಮಾನಿಸಲಾಯಿತು