
ಸಂಜೆವಾಣಿ ವಾರ್ತೆ
ಕುಕನೂರು, ಮೇ.18: ಪಟ್ಟಣದ ವಿವಿಧ ಸ್ಥಳಗಳಲ್ಲಿ ಕಾರ್ಯನಿರ್ವಹಿ ಸುತ್ತಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಮಾಲೀಕರು ವಿದ್ಯುತ್ ದುಬಾರಿ ನೆಪದಲ್ಲಿ ಗ್ರಾಹಕರಿಗೆ ಬೆಲೆ ಏರಿಕೆ ಮಾಡಿದ್ದು ಸಾರ್ವಜನಿಕರು ಇದರಿಂದ ಚಿಂತಿತರಾಗಿದ್ದಾರೆ. ದೇಶದಲ್ಲಿ ಈಗಾಗಲೇ ಸಾಕಷ್ಟು ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದಾರೆ, ಈ ಕುರಿತು ಮೇ ಹತ್ತರಂದು ನಡೆದ ಚುನಾವಣೆಯು ಸಹ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಗೊಂಡು ಕಾಂಗ್ರೆಸ್ಸಿಗೆ ಮತ ನೀಡಿ ಬಹುಮತದಿಂದ ಆಯ್ಕೆ ಮಾಡಿದ್ದಾರೆ, ಆದರೆ ಕುಕುನೂರಿನ ಶುದ್ಧ ಕುಡಿಯುವ ನೀರಿನ ಘಟಕ ಮಾಲೀಕರು ಹಣದ ವ್ಯಾಮೋಹಕ್ಕೆ ಸಿಲುಕಿ ಜನಸಾಮಾನ್ಯರನ್ನು ಕತ್ತರಿಸುವoತೆ ಮಾಡಿದ್ದಾರೆ. ಜನಸಾಮನರು ವಿವಿಧ ಖಾಯಿಲೆಗಳಿಂದ ಮುಕ್ತಿ ಹೊಂದಲು ಶುದ್ಧ ಕುಡಿಯುವ ನೀರಿಗೆ ಮೊರೆ ಹೋಗಿದ್ದಾರೆ, ಆದರೆ ಶುದ್ಧ ಕುಡಿ ನೀರಿನ ಘಟಕ ಮಾಲೀಕರು ಆರಂಭದಲ್ಲಿ ಒಂದು ಕ್ಯಾನ್ಗೆ ಎರಡು ಪದ್ದಂತೆ ನಂತರ ಒಂದು ಕ್ಯಾನ್ಗೆ ನಿಗದಿಪಡಿಸಿ ಜನಸಾಮಾನ್ಯರಿಗೆ ನೀರು ಪೂರೈಕೆ ಮಾಡುತ್ತಿದ್ದರು, ಆದರೆ ಚುನಾವಣೆಯ ಗದ್ದಲದ ಒಳಗೆ ಹೋಗಿದೊಳಗೆ ಸಂಘವನ್ನು ಕಟ್ಟಿಕೊಂಡು ಸಾರ್ವಜನಿಕರ ಅಭಿಪ್ರಾಯ ಕೇಳದೆ ಏಕೈಕಾಗಿ ಐದು ರೂಪಾಯಿಯಿಂದ 7ರೂಪಾಯಿಗೆ ಏರಿಸಿದ್ದಾರೆ. ಇದು ಸಂಪೂರ್ಣ ಅ ವೈಜ್ಞಾನಿಕವಾಗಿದ್ದು, ಸಾರ್ವಜನಿಕರು ಸಂಬಂಧಪಟ್ಟ ಕಚೇರಿ ಮುಂದೆ ಶೀಘ್ರದಲ್ಲಿ ಪ್ರತಿಭಟನೆ ಮಾಡುವ ಮುನ್ಸೂಚನೆ ನೀಡಿದ್ದಾರೆ. ಪಟ್ಟಣ ಪಂಚಾಯತಿ ಅಧಿಕಾರಿಗಳು ಈ ಬಗ್ಗೆ ಎಲ್ಲಾ ಘಟಕಗಳ ಮಾಲೀಕರನ್ನು ಕರೆದು ಎಂದನಂತೆ ಒಂದು ಕ್ಯಾನಿಗೆ ಐದು ರೂಪಾಯಿ ದರವನ್ನು ಮುಂದುವರಿಸುವಂತೆ ಸೂಚಿಸಬೇಕು ಎಂದು ವೀರ ಸಂಘ ಸಂಸ್ಥೆಗಳ ಮುಖಂಡರು ಒತ್ತಾಯಿಸಿದ್ದಾರೆ.