ಕುಕನೂರು ತಾಲ್ಲೂಕು ಪಂಚಾಯಿತಿ ಕೆಡಿಪಿ ಸಭೆ

ಕುಕನೂರು, ಜ.04: ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿ 2017ರಿಂದ ಇಲ್ಲಿಯವರೆಗೂ ಮಂಜೂರಾದ ಅಂಗನವಾಡಿ ಹಾಗೂ ಶಾಲಾ ಕೊಠಡಿಗಳನ್ನು ಅವಧಿ ಮುಂಚಿತವಾಗಿ ಪೂರ್ಣಗೋಳಿಸಿ ಎಂದು ಕುಕನೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ್ ಬಿರಾದಾರ್ ಅಧಿಕಾರಿಗಳಿಗೆ ತಿಳಿಸಿದರು
ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಕುಕನೂರು ತಾಲ್ಲೂಕು ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು ತಾಲ್ಲೂಕಿನ ಹಳ್ಳಿಗಳಲ್ಲಿ ವಿವಿಧ ಅಂಗನವಾಡಿ ಹಾಗೂ ಶಾಲಾ ಕೊಠಡಿಗಳು ಕಳೆದ 3ವರ್ಷಗಳಿಂದ ಕಾಮಗಾರಿಗಳು ನೆನೆಗುದಿಗೆ ಬಿದ್ದಿದ್ದು ಗಮನಕ್ಕೆ ಬಂದಿದೆ ಆದಷ್ಟು ಬೇಗ ಎಲ್ಲ ಕಟ್ಟಡ ಪೂರ್ಣಗೊಳಿಸಿ ಅಂಗನವಾಡಿ ಹಾಗೂ ಶಾಲಾ ಮಕ್ಕಳಿಗೆ ಅನುಕೂಲವಾಗುವಂತೆ ಮಾಡಬೇಕು ಎಂದರು ,
ತಾಲ್ಲೂಕು ಪಂಚಾಯಿತಿ ಸದಸ್ಯ ವಿಶ್ವನಾಥ ಮರಿಬಸಪ್ಪನವರ್ ಮಾತನಾಡಿ ,ಸರ್ಕಾರಿ ಶಾಲೆಗಳಿಗೆ ಇಪ್ಪತ್ತ ರಿಂದ ಮೂವತ್ತು ಡೆಸ್ಕ್ ಗಳನ್ನು ನೀಡಿ ವರದಿಯಲ್ಲಿ ಐವತ್ತು ಡೆಸ್ಕ್ ನೀಡಿದೆ ಎಂದು ವರದಿ ಬರೆದುಕೊಡಿ ಎಂದು ಮುಖ್ಯಶಿಕ್ಷಕರಿಗೆ ಶೈಕ್ಷಣಿಕ ಅಧಿಕಾರಿಗಳು ಒತ್ತಾಯಿಸುತ್ತಿರುವುದು ಕಂಡುಬಂದಿದೆ ನಾನು ಮಂಗಳೂರಿನ ಒಂದು ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷನಾಗಿದ್ದು ನಮ್ಮ ಶಾಲೆಯಲ್ಲೂ ಕೂಡ ಈ ರೀತಿ ವರದಿ ಕೇಳಿದ್ದು ನನ್ನ ಗಮನಕ್ಕೆ ಬಂದಿದೆ ಎಂದು ಬಿಇಒ ಮೌನೇಶ್ ಬಡಿಗೇರ್ ಅವರ ವಿರುದ್ಧ ಕಿಡಿಕಾರಿದರು ,
ಆರೋಗ್ಯ ಅಧಿಕಾರಿ ಮಂಜುನಾಥ ಬಿ ಮಾತನಾಡಿ ಕುಕನೂರು ಹಾಗೂ ಯಲಬುರ್ಗಾ ತಾಲ್ಲೂಕಿನಲ್ಲಿ ಇಲ್ಲಿಯವರೆಗೂ 1600 ಕರೋನಾ ಕೇಸ್ ಪತ್ತೆಯಾಗಿವೆ ,35 ಸಾವು,ಸಕ್ರಿಯವಾಗಿ 3ಪ್ರಕರಣಗಳು ಇದ್ದು ಕುಕನೂರಿನ ದ್ಯಾಂಪೂರ ನಿಂಗಾಪುರ ಬೆಣಕಲ್ ಗ್ರಾಮದಲ್ಲಿ ತಲಾ ಒಂದೊಂದು ಪ್ರಕರಣಗಳು ಇವೆ ಎಂದರು .
ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಪ್ರಗತಿ ವರದಿಯನ್ನು ಸಲ್ಲಿಸಿದರು ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಗನ್ನಾಥಗೌಡ ಪಾಟೀಲ್ ಉಪಾಧ್ಯಕ್ಷೆ ದುರುಗವ್ವ ವೆಂಕಟೇಶ್ ಗಾದಿ ಶಿವಕುಮಾರ್ ಆದಾಪುರ ಸುಭಾಸ ಮಾದಿನೂರು ಗೌರಮ್ಮ ನಾಗನೂರು ರಾಮಣ್ಣ ಹೊಸ್ಮನಿ ಹಾಗೂ ಉಳಿದ ಸದಸ್ಯರು ವಿವಿಧ ತಾಲ್ಲೂಕು ಅಧಿಕಾರಿಗಳು ಉಪಸ್ಥಿತರಿದ್ದರು