ಕುಕನೂರು ಠಾಣೆವತಿಯಿಂದ ಸಂಚಾರಿ ಪೊಲೀಸ್ ಘಟಕಕ್ಕೆ ಚಾಲನೆ

ಕುಕನೂರು,ನ.20- ಸ್ಥಳೀಯ ಕುಕನೂರು ಠಾಣೆವತಿಯಿಂದ ಸಂಚಾರಿ ಪೊಲೀಸ್ ಘಟಕವನ್ನು ಗುರುವಾರ ಪ್ರಾರಂಭಿಸಲಾಯಿತು. ಸಿಪಿಐ ಎಂ.ನಾಗರೆಡ್ಡಿ ಉದ್ಘಾಟಿಸಿ ಮಾತನಾಡಿ, ಕುಕನೂರು ಪಟ್ಟಣವು ದಿನದಿಂದ ದಿನಕ್ಕೆ ಬೆಳೆಯುವ ಪಟ್ಟಣವಾಗಿದ್ದು, ಇಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಾಹನ ಸಂಚಾರ ದಟ್ಟಣೆ ಯಿಂದ ಕೂಡಿದೆ ಆದ ಕಾರಣ ಸ್ಥಳೀಯ ಪೊಲೀಸ್ ಠಾಣೆಯಿಂದ ಸಂಚಾರ ನಿಯಂತ್ರಣಕ್ಕಾಗಿ ಇದ್ದ ಸಿಬ್ಬಂದಿಗಳನ್ನೇ ಶಿಫ್ಟ್ ಆಧಾರದ ಮೇಲೆ ಕಾರ್ಯನಿರ್ವಹಿಸಲು ಸೂಚಿಸಿ ಪಟ್ಟಣದ ವಾಹನ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿದೆ, ಪಟ್ಟಣದಲ್ಲಿ ಯಾವುದೇ ರೀತಿಯಾಗಿ ಅಡ್ಡಾದಿಡ್ಡಿ ವಾಹನ ಚಲಾವಣೆ ಮತ್ತು ವಾಹನ ನಿಲುಗಡೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಇದಕ್ಕೆ ವಾಹನ ಚಾಲಕರು ಮತ್ತು ಮಾಲಕರು ಸಹಕರಿಸಬೇಕು. ಅಲ್ಲದೆ ಅಂಗಡಿ ಮುಗ್ಗಟ್ಟಿನ ಮಾಲೀಕರು ತಮ್ಮ ವ್ಯವಹಾರವನ್ನು ರಸ್ತೆ ಹೊರತು ಪಡಿಸಬೇಕು ಇಲ್ಲದಿದ್ದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಅಲ್ಲದೆ 15ರಿಂದ 20 ಸಾವಿರ ಜನಸಂಖ್ಯೆಯುಳ್ಳ ಪಟ್ಟಣಕ್ಕೆ ವಾಹನ ಚಾಲಕರು ಮತ್ತು ಭಾರೀ ವಾಹನಗಳ ಚಾಲಕರಿಗೆ ತೊಂದರೆಯುಂಟಾಗುತ್ತದೆ ಇದನ್ನು ನಿಷೇಧಿಸುವುದು ಪೊಲೀಸ್ ಇಲಾಖೆಯ ಕರ್ತವ್ಯವಾಗಿದೆ ಸಾರ್ವಜನಿಕರ ಸಹಕಾರವೂ ಮುಖ್ಯವಾಗಿದೆ ಅದಕ್ಕೆ ಸೂಕ್ತವಾಗಿ ಕೈಜೋಡಿಸಿ ಸಹಕರಿಸಬೇಕೆಂದರು. ಕುಕನೂರು ಅಂಬೇಡ್ಕರ್ ಸರ್ಕಲ್ ನಿಂದ ಕೋಳಿಪೇಟೆ ರಸ್ತೆವರೆಗೆ ಭಾರಿ ವಾಹನಗಳ ಸಂಚಾರಕ್ಕೆ ಜಿಲ್ಲಾಧಿಕಾರಿಗಳು ನಿಷೇಧ ಮಾಡಿದ್ದಾರೆ, ಭಾರೀ ವಾಹನಗಳು ಪೊಲೀಸ್ ಕಚೇರಿ ಪಕ್ಕದ ಮೂಲಕ ಕೋಳಿಪೇಟೆ ರಸ್ತೆಗೆ ಚಲಾಯಿಸಬಹುದು ಇಲ್ಲವೇ ಮಸಬಹಂಚಿನಾಳ ಇಟಗಿ ಮಾರ್ಗವಾಗಿ ಅಥವಾ ಭಾನಾಪುರ ಮಾರ್ಗವಾಗಿ ಬನ್ನಿಕೊಪ್ಪಕ್ಕೆ ಸೇರಬಹುದು ಎಂದು ಆದೇಶವಿದೆ ಚಾಲಕರು ಗಮನಿಸಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಪಿ.ಎಸ್.ಐ ಎನ್. ವೆಂಕಟೇಶ್ ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.