ಕುಕನೂರು. ಕಲ್ಯಾಣ ಶ್ರಿಗಳಿಗೆ ಸನ್ಮಾನ


ಸಂಜೆವಾಣಿ ವಾರ್ತೆ
ಕುಕನೂರು, ಮಾ.14:   ತಾಲೂಕಿನ ಬೇಡಜಂಗಮ ಸಮಾಜದ ಪ್ರಮುಖರಿಂದ  ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಸತ್ಯ ಪ್ರತಿಪಾದನಾ ಹೋರಾಟದ ನೇತೃತ್ವ ವಹಿಸಿರುವ  ಪೂಜ್ಯ ಕಲ್ಯಾಣ ಶ್ರೀ ರವರನ್ನು ಕುಕನೂರು ಪಟ್ಟಣದ ಶ್ರೀ ವೀರಭದ್ರಪ್ಪ  ಶಿರೂರ  ವೃತ್ತದಲ್ಲಿ  ಗೌರವಿಸಿ ಭಕ್ತಿಪೂರ್ವಕ ಪ್ರಣಾಮಗಳನ್ನು  ಸಲ್ಲಿಸಲಾಯಿತು.ಸದರಿ ಕಾರ್ಯಕ್ರಮದಲ್ಲಿ ಕುಕನೂರು ತಾಲೂಕಿನ ಬೇಡಜಂಗಮ ಸಮಾಜದ ಅಧ್ಯಕ್ಷ  ಸಿದ್ದಯ್ಯ ಕಳ್ಳಿಮಠ , ಉಪಾಧ್ಯಕ್ಷ  ಈಶ್ವರಯ್ಯ ಶಿರೂರಮಠ , ಪ್ರಧಾನ ಕಾರ್ಯದರ್ಶಿ ಸಿದ್ಲಿಂಗಯ್ಯ ಚೌಡಿ , ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಶ್ರೀ ಸೋಮಲಿಂಗಯ್ಯ ಹಿರೇಮಠ , ಶರಣಯ್ಯ ಸಾಲಿಮಠ , ಮಲ್ಲಯ್ಯ  ಕಕ್ಕಿಹಳ್ಳಿ  , ಬಸವರಾಜ ಮೂಘಂಡಮಠ  ಹಾಗೂ ಅನೇಕ ಬೇಡಜಂಗಮ ಸಮಾಜದ ಬಂಧುಗಳು ಉಪಸ್ಥಿತರಿದ್ದರು . ಪೂಜ್ಯ ಶ್ರೀಗಳು ಇಂದು ಗದಗ ಜಿಲ್ಲೆಯ ರೋಣ ಪಟ್ಟಣಕೆ ಪ್ರಯಾಣ ಬೆಳೆಸಿದರು.