ಕುಕನೂರಿನಲ್ಲಿ ವಿಶ್ವ ಸಂಗೀತ ದಿನ ಆಚರಣೆ


ಸಂಜೆವಾಣಿ ವಾರ್ತೆ
ಕುಕನೂರು, ಜೂ.22: ವಿಶ್ವದಲ್ಲಿ ಸಂಗೀತಕ್ಕೆ ತೆಲೆದೂಗದ ವ್ಯಕ್ತಿಗಳಿಲ್ಲ ಸಂಗೀತ ಶಾಂತಿ ನೆಮ್ಮದಿ ನೀಡುತ್ತದೆ ಎಂದು ಡಾ. ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಬಾಬಣ್ಣ ಕಲ್ಮನಿ ಹೇಳಿದರು.
ಪಟ್ಟಣದ ಶ್ರೀ ಪಂಚಾಕ್ಷರಿ ಸಂಗೀತ ಮಹಾವಿದ್ಯಾಲಯದಲ್ಲಿ ಬುಧವಾರ ದಿವಸ ಶ್ರೀ ಪಂಚಾಕ್ಷರಿ ಸಾಹಿತ್ಯ ಸಂಗೀತ ಶಿಕ್ಷಣ ಕ್ರೀಡೆ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ಶ್ರೀ ಪಂಚಾಕ್ಷರಿ ಸಂಗೀತ ಮಹಾವಿದ್ಯಾಲಯದಿಂದ ನಡೆದ ವಿಶ್ವ ಸಂಗೀತ ದಿನದ ನಿಮಿತ್ಯ ನಡೆದ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿದವರು. ಸಂಗೀತಕ್ಕೆ ತನ್ನದೇ ಆದ ಶಕ್ತಿ ಇದೆ ಎಂದರು.
ನಂತರ ಖಾದಿ ಗ್ರಾಮೋದ್ಯೋಗದ ಕಾರ್ಯದರ್ಶಿ ಭೀಮಸೇನ್ ರಾವ್ ತಾಸಿನ್ ಮಾತನಾಡಿ,
 ವಿವಿಧ ಪ್ರಕಾರದ ಸಂಗೀತ ವಿಶ್ವ ಮಣ್ಣನೆ ಪಡೆದಿದೆ. ಜನಪದ, ಶಾಸ್ತ್ರೀಯ ಸಂಗೀತ, ಸುಗಮ ಸಂಗೀತವನ್ನು ಸಾಕಷ್ಟು ಕಲಾವಿದರು ತಮ್ಮದೇ ರೀತಿಯಲ್ಲಿ ಜ್ಞಾನ ಸಂಪಾದನೆ ಮಾಡಿ ಸಂಗೀತ ರಸಿಕರ ಮನ ಗೆದ್ದಿದ್ದಾರೆ. ರಾಜ ಮಹಾರಾಜರ ಕಾಲದಲ್ಲಿ ಕೂಡ ಅವರವರ ಆಸ್ಥಾನದಲ್ಲಿ ದಿಗ್ಗಜ ವಿದ್ವಾಂಸರು ಇರುತ್ತಿದ್ದರು, ಅವರಿಗೆ ರಾಜ್ಯ ಸತ್ಕಾರ ಸನ್ಮಾನ ಬಿರುದುಗಳು ಕೂಡ ಕೊಡಲ್ಪಟ್ಟಿತ್ತು. ಸಂಗೀತ ವಿದ್ವಾಂಸರು ಪ್ರಕೃತಿಯೊಂದಿಗೆ ಸಂಗೀತ ಹಾಡುತ್ತಿದ್ದರು. ಅವರ ಗಾಯನ ಹಾಗೂ ರಾಗಗಳಿಂದ ಮಳೆ ತರಿಸುತ್ತಿದ್ದ ಉದಾರಣೆಗಳಿವೆ ಎಂದರು.
ಈ ಸಂದರ್ಭದಲ್ಲಿ ಹಿರಿಯರಂಗಭೂಮಿ ಕಲಾವಿದ ಬಾಬಣ್ಣ ಕಲ್ಮನಿಯವರಿಗೆ ಸನ್ಮಾನ ಮತ್ತು ಅಭಿನಂದನ ಸಮಾರಂಭ ನೆರವೇರಿತು.
ವೇದಿಕೆಯಲ್ಲಿ ಜಿ ಪಂ ಮಾಜಿ ಅಧ್ಯಕ್ಷ ರಾಮಣ್ಣ ಭಜಂತ್ರಿ, ಕುಕನೂರು ಅಗ್ನಿಶಾಮಕ ಠಾಣೆಯ ಜನಾರ್ದನ ರಾವ್, ಡಾ. ಜಂಬಣ್ಣ ಅಂಗಡಿ, ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ಬೆಣಕಲ್ಲ್, ಯುವ ಮುಖಂಡ ವೀರೇಶ್ ಸಬರದ್, ಹಿರಿಯ ಪತ್ರಕರ್ತ ರುದ್ರಪ್ಪ ಭಂಡಾರಿ, ವಕೀಲರಾದ ಸಂಗಮೇಶ್ ಅಂಗಡಿ,  ನಿಂಗಾಪುರ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ನಿಂಗಪ್ಪ ಕೊಪ್ಪದ್, ರಮೇಶ್ ದೇಶಪಾಂಡೆ, ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳು, ಸಂಗೀತ ಶಿಕ್ಷಕ ಕಾರ್ಯಕ್ರಮ ಆಯೋಜಕ ಮುರಾರಿ ಭಜಂತ್ರಿ ಸೇರಿದಂತೆ ಇತರರು ಇದ್ದರು