ಕುಕನೂರಿನಲ್ಲಿ  ನಾಳೆ. ಪುನೀತ್ ರಾಜಕುಮಾರ್   ಜನ್ಮ ದಿನ, ಶ್ರೀಗಳಿಗೆ ತುಲಾಭಾರ


ಸಂಜೆವಾಣಿ ವಾರ್ತೆ
ಕುಕನೂರು, ಮಾ.16: ಕುಕನೂರು ತಾಲೂಕು ರೈತ ಹಿತ ರಕ್ಷಣಾ ವೇದಿಕೆಯಿಂದ ಕರ್ನಾಟಕ ರತ್ನ ದಿವಂಗತ ಪುನೀತ್ ರಾಜಕುಮಾರ್ ಅವರ 48ನೇ ಜನ್ಮದಿನ ಪ್ರಯುಕ್ತ ಮಾರ್ಚ್ 17ರಂದು ಎಪಿಎಂಸಿ ಆವರಣದಲ್ಲಿ ಗದುಗಿನ ವೀರೇಶ್ವರ ಪುಣ್ಯಶ್ರಮದ ಕಲ್ಲಯ್ಯಜ್ಜನವರಿಗೆ ತುಲಾಭಾರ ಕಾರ್ಯಕ್ರಮ ಹಾಗೂ ಸಾಮೂಹಿಕ ವಿವಾಹ, ಸಿದ್ದೇಶ್ವರ ಶ್ರೀಗಳ ಹಾಗೂ ದಿವಂಗತ ಶರಣಯ್ಯ ಬಂಡಿಮಠ ಅವರ ನುಡಿ ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ರಾಜ್ಯಗೌರವಾಧ್ಯಕ್ಷ ರಾಮಣ್ಣ ಭಜಂತ್ರಿ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಬುಧವಾರ ದಿವಸ ಕರ್ನಾಟಕ ರೈತ ರಕ್ಷಣಾ ವೇದಿಕೆಯ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪುನೀತ್ ರಾಜಕುಮಾರ್ ಅವರು ಜೀವನದುದ್ದಕ್ಕೂ  ಸಾಮಾಜಿಕ ಸೇವೆ, ದಾನ ಧರ್ಮ , ಚಲನಚಿತ್ರದಲ್ಲಿ ನಟನೆ ಹಾಗೂ ಸರಳತೆಯ ಮೂಲಕ ಹೆಸರುವಾಸಿಯಾಗಿದ್ದಾರೆ, ಅಂತ ಮಹನೀಯರು ಸಾಕಷ್ಟು ವರ್ಷ ನಮ್ಮ ಜೊತೆ ಇರಬೇಕಿತ್ತು ಆದರೆ ಅವರ ನೆನಪು ಸದಾ ಕಾಲ ಕರುನಾಡಿನ ಜನರ ಹೃದಯ ಮಂದಿರದಲ್ಲಿ ನೆಲೆಸಿದ್ದಾರೆ ಅಂತ ಮಹನೀಯರ ಜನ್ಮದಿನದ ಪ್ರಯುಕ್ತ ನಮ್ಮ ಸಂಘಟನೆಯಿಂದ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷ ಕೃಷ್ಣ ಗಾವರಾಳ, ಸಂಘಟನೆಯ ರಾಜ್ಯ ಸಂಚಾಲಕ ಸಿದ್ದಯ್ಯ ಕಡಿಮಠ, ಶ್ರೀಕಾಂತ್ ಚಲವಾದಿ, ಶಿವು ಆದಿ ಸೇರಿದಂತೆ ಇತರರು ಇದ್ದರು..