ಕುಂ.ವೀ.ಗೆ ಬೆದರಿಕೆ ಪತ್ರ


ಸಂಜೆವಾಣಿ ವಾರ್ತೆ
ಕೊಟ್ಟೂರು, ಜೂ.01: ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕೃತರು ಮತ್ತು ಸಾಹಿತಿಗಳಾದ ಕುಂಬಾರ ವೀರಭದ್ರಪ್ಪ ಅವರಿಗೆ ಈಚೆಗೆ ಬೆದರಿಕೆ ಪತ್ರ ಬಂದಿದೆ.
ಈ ಪತ್ರದಲ್ಲಿ ಕರ್ನಾಟಕ ರಾಜ್ಯದಲ್ಲಿ ಕಂಪನ ಆಡಳಿತ ಪ್ರಾರಂಭಗೊಂಡು ಹಿಂದೂ ಸಜ್ಜನರಿಗೆ ಇದು ಸಂಕಷ್ಟದ ಸರ್ಕಾರ, ನಿಮ್ಮಂತಹ ದುರ್ಜನ ದೇಶದ್ರೋಹಿಗಳಿಗೆ ಮತ್ತು ಮತಾಂಧ ಮುಸ್ಲಿಂರಿಗೆ ಮತಾಂತರಿ ಕ್ರೈಸ್ತರಿಗೆ ಸಂಪ್ರಿಯ ಸರ್ಕಾರ, ಇಂದಲ್ಲ ನಾಳೆ ಅಧರ್ಮದಿಂದ ತುಂಬಿರುವ ನಿಮ್ಮ ಜೀವ ಅಜ್ಞಾನದ ದೀಪ ಹಾರುವುದು ನಿಶ್ಚಿತ ಎಂದು ಬರೆಯಲಾಗಿದೆ. ಈ ಪತ್ರದ ಕೆಳಗಡೆ ಜೈ ಹಿಂದೂ ರಾಷ್ಟ್ರ ಎಂದು  ಸಹ ಬರೆಯಲಾಗಿದೆ.