ಕುಂಭಮೇಳ ೪೮ ದಿನಕ್ಕೆ ಮೊಟಕು

ಹರಿದ್ವಾರ್ (ಉತ್ತರಾಖಂಡ), ಡಿ. ೨೭- ಮೂರುವರೆ ತಿಂಗಳಕಾಲ ನಡೆಯುತ್ತಿದ್ದ ಕುಂಭಮೇಳ ಈ ಬಾರಿ ೪೮ ದಿನಗಳ ಮಾತ್ರ ನಡೆಯಲಿದೆ ಎಂದು ರಾಜ್ಯ ನಗರಾಭಿವೃದ್ಧಿ ಸಚಿವ ಮದನ್ ಕೌಶಿಕ್ ತಿಳಿಸಿದ್ದಾರೆ.
ಉತ್ತರಾಖಂಡ ಸರ್ಕಾರ ಜನವರಿ ೧ ರ ಬದಲಾಗಿ ಫೆಬ್ರವರಿಯಲ್ಲಿ ಕುಂಭಮೇಳಕ್ಕೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಕೋವಿಡ್ ೧೯ ಸಾಂಕ್ರಾಮಿಕ ರೋಗದಿಂದಾಗಿ ಮಾರ್ಚ್ ಹಾಗೂ ಏಪ್ರಿಲ್‌ನಲ್ಲಿ ಮುಖ್ಯ ಸ್ನಾನಕ್ಕೆ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಈ ೪೮ ದಿನಗಳಲ್ಲಿ ಭಕ್ತರು ಸ್ನಾನ ಮಾಡಬಹುದಾಗಿದೆ ಎಂದು ಸಚಿ ಕೌಶಿಕ್ ಸುದ್ಧಿಸಂಸ್ಥೆಗೆ ತಿಳಿಸಿದ್ದಾರೆ.”
ಕುಂಭ ಮೇಳಕ್ಕೆ ಬರುವ ಭಕ್ತರಿಗೆ ಸ್ನಾನ ಮಾಡುವವರೆಗೂ ಅವಕಾಶ ನೀಡಲಾಗುವುದು. ಕುಂಭ ಮೇಳ ಮೂರುವರೆ ತಿಂಗಳು ನಡೆಯುತ್ತಿದ್ದರೂ ಈ ಬಾರಿ ಅವಧಿಯನ್ನು ಒಂದೂವರೆ ತಿಂಗಳಿಗೆ ಕಡಿತಗೊಳಿಸಲಾಗಿದೆ. ಅಖಿಲ ಭಾರತೀಯ ಅಖಾರ ಪರಿಷತ್ ಅಸಮಾಧಾನ ವ್ಯಕ್ತಪಡಿಸಿದ ಒಂದು ದಿನದ ನಂತರ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಕುಂಭಮೇಳಕ್ಕೆ ಅಗತ್ಯವಿರುವ ವಿವಿಧ ಯೋಜನೆಗಳಿಗೆ ಹಣ ಮಂಜೂರು ಮಾಡಿದ್ದಾರೆ. ಪ್ರಸ್ತುತ ಆಡಳಿತದಿಂದ ಕುಂಭಮೇಳ ಸಿದ್ಧತೆಗಳನ್ನು ಆರಂಭಿಸಲಾಗಿಲ್ಲ ಎಂದು ಆರೋಪಿಸಲಾಗಿದೆ.
ಕುಂಭಮೇಳ ಕಣ್ಗಾವಲು ವ್ಯವಸ್ಥೆಗಾಗಿ ಮುಖ್ಯಮಂತ್ರಿ ರಾವತ್ ೧೭.೩೪ ಕೋಟಿ ವೆಚ್ಚಕ್ಕೆ ಅನುಮೋದಿಸಿದ್ದಾರೆ. ಆರಂಭಿಕ ಕಂತಾಗಿ ೬.೯೪ ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗುವುದು. ಉಳಿದಂತೆ ತಾತ್ಕಾಲಿಕ ಸಾವಿರ ಹಾಸಿಗೆಗಳ ಕೋವಿಡ್ ಆರೈಕೆ ಕೇಂದ್ರ ಸ್ಥಾಪಿಸಲು ಅಗತ್ಯವಿರುವ ಸಾಮಾಗ್ರ ಖರೀದಿಗಾಗಿ ೧೫.೪೬ ಕೋಟಿ ನಿಗದಿತ ಪಡಿಸಲಾಗಿದ್ದು, ಮೊದಲ ಕಂತಾಗಿ ೬.೧೮ ಕೋಟಿ ಹಣ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.