ಕುಂಭಮೇಳದಲ್ಲಿ ೧೦೦ಕ್ಕೂ ಹೆಚ್ಚು ಮಂದಿಗೆ ಕೊರೊನಾ

ಹರಿದ್ದಾರ್,ಏ.೧೪- ಹರಿದ್ವಾರದ ಮಹಾ ಕುಂಭಮೇಳದಲ್ಲಿ ನೂರಕ್ಕೂ ಹೆಚ್ಚು ಮಂದಿಗೆ ಕೊರೊನಾ ಸೋಂಕು ತಗುಲಿದೆ. ಪವಿತ್ರ ಶಾಹಿ ಸ್ನಾನ ಮತ್ತು ಕುಂಭ ಮೇಳದಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿದ ಬೆನ್ನಲ್ಲೆ ನೂರಕ್ಕೂ ಹೆಚ್ಚು ಮಂದಿಗೆ ತಗುಲಿದೆ.
ಕುಂಭಮೇಳದಲ್ಲಿ ಭಾಗವಹಿಸಿದ್ದ ೧೦೨ ಮಂದಿ ಯಾತ್ರಾರ್ಥಿಗಳು ಹಾಗೂ ೨೦ ಮಂದಿ ಸ್ವಾಮೀಜಿಗಳಿಗೆ ಸೋಂಕು ತಗುಲಿದೆ ಎಂದು ಅಧಿಕಾರಿಗಳು ವಿವರ ನೀಡಿದ್ದಾರೆ.,
ಪ್ರಸ್ತುತ ನಡೆಯುತ್ತಿರುವ ಕುಂಭಮೇಳದಲ್ಲಿ ೧ ಲಕ್ಷಕ್ಕೂ ಅಧಿಕ ಮಂದಿ ಯಾತ್ರಾರ್ಥಿಗಳು ಪಾಲ್ಗೊಂಡಿದ್ದಾರೆ. ಹೀಗಾಗಿ ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಕುಂಭಮೇಳದಲ್ಲೂ ದೆಹಲಿಯ ನಿಜಾಮುದ್ದೀನ್ ಮರ್ಕಜ್ ಸಂತೆ ಅತಿ ಸೋಂಕಿತರು ಹೊಂದುವ ಭೀತಿ ವ್ಯಕ್ತವಾಗುತ್ತಿದೆ.
ಈ ಟೀಕೆಗಳಿಗೆ ತಿರುಗೇಟು ನೀಡಿರುವ ಉತ್ತರಾಖಂಡ ಮುಖ್ಯಮಂತ್ರಿ ತಿರತ್‌ಸಿಂಘ್ ರಾವತ್ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳವನ್ನು ಮುಚ್ಚಿದ ಜಾಗದಲ್ಲಿ ನಡೆಸಿದ ಮತ್ತು ವಿದೇಶಿಯರು ಹಾಜರಾಗಿದ್ದ ನಿಜಾಮುದ್ದೀನ್ ಮರ್ಕಜ್‌ಗೆ ಹೋಲಿಸಬಾರದು ಎಂದು ಹೇಳಿದ್ದಾರೆ.
ಈ ಮಧ್ಯೆ ಹರಿದ್ವಾರದಲ್ಲಿ ೩ನೇ ಪವಿತ್ರ ಶಾಹಿಸ್ನಾನ ನಡೆದಿದೆ. ಕುಂಭಮೇಳದ ಪ್ರಯುಕ್ತ ಈ ಶಾಹಿಸ್ನಾನ ನಡೆದಿದ್ದು, ಕೋವಿಡ್ ನಡುವೆ ಲಕ್ಷಾಂತರ ಮಂದಿ ಪವಿತ್ರ ಪುಣ್ಯಸ್ನಾನದಲ್ಲಿ ಪಾಲ್ಗೊಂಡಿದ್ದಾರೆ.
ಈ ತಿಂಗಳ ೩೦ರವರೆಗೂ ಈ ಐತಿಹಾಸಿಕ ಕುಂಭಮೇಳ ನಡೆಯಲಿದೆ.