ಕುಂಭಕ್ಕೋಡು ಭಾರಿ ಮಳೆಗೆ ಬರೇ ಕುಸಿತ

ಸುಳ್ಯ, ಮೇ ೧೬- ನಾರ್ಕೋಡು ಕೋಲ್ಚಾರು ಕನ್ನಡಿತೋಡು ಪಿ ಡಬ್ಲ್ಯೂ ಡಿ ರಸ್ತೆಯ ಕುಂಭಕ್ಕೋಡು ಬಳಿ ಶುಕ್ರವಾರ ರಾತ್ರಿಯಿಂದ ಸುರಿದ ಭಾರಿ ಮಳೆಗೆ ಬರೆ ಕುಸಿದಿದೆ.
ನಾರ್ಕೋಡು – ಕೋಲ್ಚಾರು ರಸ್ತೆ ಕಾಮಗಾರಿಯ ಸಂದರ್ಭ ಕುಂಭಕ್ಕೋಡು ಮಸೀದಿಯ ಬಳಿ ರಸ್ತೆ ಅಗಲೀಕರಣಕ್ಕಾಗಿ ಮಣ್ಣು ತೆಗೆಯಲಾಗಿತ್ತು. ರಸ್ತೆಗೆ ತಾಗಿಕೊಂಡಿರುವ ಬರೆಯ ಮೇಲೆ ೩,೪ ಮನೆಗಳಿದೆ. ರಸ್ತೆ ಅಗಲೀಕರಣಕ್ಕೆ ಜಾಗ ಅಗೆದಿದ್ದು ಇದರಿಂದಾಗಿ ಸುಮಾರು ೧೦೦ ಮೀಟರ್ ನಷ್ಟು ಉದ್ದಕ್ಕೆ ನಾಲ್ಕು ಮನೆಗಳು ಅಪಾಯದ ಪರಿಸ್ಥಿತಿಯಲ್ಲಿದೆ. ಇದೀಗ ಭಾರಿ ಮಳೆಗೆ ಉಂಬಾಯಿ ಎಂಬವರ ಮನೆಯ ಬಳಿ ಬರೆ ಕುಸಿತ ಉಂಟಾಗಿದೆ. ಕೆಲವು ದಿನಗಳ ಹಿಂದೆ ಇದೇ ಭಾಗದಲ್ಲಿ ಬರೆ ಕುಸಿದು ಇದೀಗ ಇಂದು ಪುನಃ ಬರೆ ಕುಸಿತಕ್ಕೆ ಒಳಗಾಗಿರುವುದರಿಂದ ಸ್ಥಳೀಯರು ಆತಂಕದಲ್ಲಿದ್ದಾರೆ.