ಕುಂಬಾರಿಕೆ ಯಂತ್ರೋಪಕರಣಗಳ ವಿತರಣೆ

ಬೀದರ,ಏ.4- ಗ್ರಾಮೋದ್ಯೋಗ ವಿಕಾಸ ಯೋಜನೆಯಡಿ ಗಾದಗಿ ಗ್ರಾಮದಲ್ಲಿ ಆಯೋಜಿಸಿದ್ದ ಕುಂಬಾರಿಕೆ ಕೌಶಲ್ಯ ತರಬೇತಿ ಶಿಬಿರದಲ್ಲಿ ತರಬೇತಿ ಪಡೆದ 20 ಜನರಿಗೆ ಕುಂಬಾರಿಕೆ ಯಂತ್ರೋಪಕರಣಗಳನ್ನು ವಿತರಣೆ ಮಾಡಲಾಯಿತು.
ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆ.ವಿ.ಐ.ಸಿ) ಹುಬ್ಬಳ್ಳಿ ಇವರ ಸಹಯೋಗದಲ್ಲಿ ಕುಂಬಾರಿಕೆಯ ಯಂತ್ರೋಪಕರಣಗಳನ್ನು ಹಾಗೂ ತರಬೇತಿ ಪಡೆದ ಬಗ್ಗೆ ಪ್ರಮಾಣಪತ್ರವನ್ನು ಪ್ರಾಚಾರ್ಯರು ವಿ.ಪಿ.ಐ. ಖಾನಾಪೂರ ಪ್ರಭಾಕರ ಅವರು ವಿತರಿಸಿದರು.
ಸಮಾರಂಭದಲ್ಲಿ ಆಯೋಗ ಅಧಿಕಾರಿಗಳಾದ ಸಹಾಯಕ ನಿರ್ದೆಶಕರಾದ ಮುರಲಿಧರ ಹಾಗೂ ರಾಮದಾಸ ಸಹಾಯಕ ನಿರ್ದೆಶಕರು ಉಪಸ್ಥಿತರಿದದರು.
ಖಾದಿ ಮತ್ತು ಗ್ರಾಮದ್ಯೋಗ ಸಂಘ ಬೀದರಿನ ಅಧ್ಯಕ್ಷರಾದ ಡಿ.ವಿ. ಸಿಂದೋಲ ಮಾತನಾಡಿ ತರಬೇತಿ ಪಡೆದ ಕುಂಬಾರರು ಹೊಸ ಹೊಸ ಬಗೆ ಮಡಿಕೆಗಳನ್ನು ತಯಾರಿಸಿ ಆದಾಯವನ್ನು ಹೆಚ್ಚಿಸಿಕೊಳ್ಳಲು ಸೂಚಿಸಿದರು. ಕಾರ್ಯಕ್ರಮದಲ್ಲಿ ನೌಬಾದ ಕುಂಬಾರರ ಕರಕುಶಲ ಕೈಗಾರಿಕಾ ಸಂಘದ ಅಧ್ಯಕ್ಷರಾದ ಬಾಬುರಾವ ಕುಂಬಾರ ಕೋಳಾರ ಇವರು ಮಾತನಾಡಿ ದೇಶ ಜಿಲ್ಲೆಯ ಇನ್ನು ಹೆಚ್ಚಿನ ತರಬೇತಿ ಶಿಬಿರನವನ್ನು ನಿರ್ದರಿಸುವಂತೆ ಆರೋಗ ಅಧಿಕಾರಿಗಳಿಗೆ ಕೊರಿದರು. ಜಿ.ಎಸ್. ಪಾಟೀಲ ಕಾರ್ಯದರ್ಶಿಹಾಗೂ ಗ್ರಾಮೋದ್ಯೋಗ ಸಂಘ ಬೀದರ ನಬಿಖೂರುಷಿ ಸಿ.ಎಂ.ಸಿ. ಕೌಂಶಲರ, ಬಸವರಾಜ ಕುಂಬಾರ ರಘುನಾಥ ಕುಂಬಾರ, ಶಿವಕುಮಾರ ಕುಂಬಾರ ಹಾಗೂ ಮಲ್ಲಕಾರ್ಜುನ ಎಡೆ ಹಾಜರಿದ್ದರು.