ಕುಂಬಾರವಾಡ ಭವಾನಿ ಮಂದಿರದಲ್ಲಿ ನವರಾತ್ರಿ ಉತ್ಸವ ಅದ್ಧೂರಿ ಆಚರಣೆ

ಬೀದರ:ಅ.16:ಪ್ರತಿ ವರ್ಷದಂತೆ ಈ ವರ್ಷವು ಬೀದರನ ಕುಂಬಾರವಾಡಾದ ಮಾತಾ ಕಾಳಿಕಾದೇವಿ ಭವಾನಿ ಮಂದಿರದಲ್ಲಿ ಅಕ್ಟೋಬರ್ 15 ರಿಂದ 24 ರವರೆಗೆ ನವರಾತ್ರಿ ಉತ್ಸವವು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಪ್ರತಿದಿನ ಮುಂಜಾನೆ ಹಾಗೂ ಸಂಜೆ ದೇವರ ಪೂಜೆ ಹಾಗೂ ಆರತಿ ಕಾರ್ಯಕ್ರಮ ನಡೆಯುವುದು. ಅಕ್ಟೋಬರ್ 19 ರಂದು ಪುಣ್ಯವತಿಬಾಯಿ ಕೊಂಡಿಯವರು ಅಮೃತ ಹಸ್ತದಿಂದ ಘಟಸ್ಥಾಪನೆ ನಡೆಯಲಿದ್ದು.ಇವರು ತಮ್ಮ ಕೈಯಲ್ಲಿಯೇ ಘಟಸ್ಥಾಪಿಕೊಂಡು ಅಕ್ಟೋಬರ್ 23 ರ ರಾತ್ರಿ 12 ಗಂಟೆಯವರೆಗೆ ಅನುಷ್ಠಾನ ಕೈಗೊಳ್ಳುವರು. ಅಕ್ಟೋಬರ್ 20 ರಂದು ಮಧ್ಯಾನ್ನ 2 ಗಂಟೆಯಿಂದ ಸಂಜೆ 8 ಗಂಟೆಯವರೆಗೆ ಸಿದ್ದ ಸಾಯಿ ಗೆಳೆಯ ಬಳಗದಿಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ. ಅಕ್ಟೋಬರ್ 21 ರಂದು ಸಂಜೆ 6 ಗಂಟೆಗೆ ರಾಣಿ ಸತ್ಯಮೂರ್ತಿ ನೇತೃತ್ವದಲ್ಲಿ ಭರತ ನಾಟ್ಯ ಕಾರ್ಯಕ್ರಮ ಜರುಗಲಿದೆ. ಅಕ್ಟೋಬರ್ 22 ರಂದು ನಮೋ ಬ್ರಿಗೇಡ್ ವತಿಯಿಂದ ಮಹಾಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ. ಅಕ್ಟೋಬರ್ 24 ರಂದು ವಿಜಯ ದಶಮಿ ದಿನದಂದು ಶ್ರೀ ಮಾತಾ ಕಾಳಿಕಾದೇವಿ ಪಲ್ಲಕ್ಕಿ ಉತ್ಸವವು ಮಧ್ಯಾಹ್ನ 2 ಗಂಟೆಗೆ ಕುಂಬಾರವಾಡ ಮಂದಿರದಿಂದ ಆರಂಭವಾಗಿ ಹೂಗೇರಿ, ಎಸ್.ಪಿ ಬಂಗಲಾ ಮಾರ್ಗವಾಗಿ ಹನುಮಾನ ಮಂದಿರದ ದರ್ಶನ ಪಡೆದು ಪುನ: ಲಾವಾಡಿ ಮಾರ್ಗವಾಗಿ ಕುಂಬರವಾಡ ಮಂದಿರಕ್ಕೆ ಬಂದು ಸೇರಲಿದೆ. ಅಕ್ಟೋಬರ್ 29 ರಂದು ಕೋಜಗಿರಿ ಪೂರ್ಣಿಮಾ ದಿವಸ ಮುಂಜಾನೆ 5 ಗಂಟೆಯಿಂದ 11 ಗಂಟೆಯವರೆಗೆ ಮಾತೆಯ ಅಭಿಷೇಕ ನಡೆಯಲಿದ್ದು. ಭಕ್ತಾದಿಗಳಿಗೆ ತಮ್ಮ ಅಮೃತ ಹಸ್ತದಿಂದ ಗರ್ಭಗುಡಿಯ ಒಳಗೆ ತೆರಳು ಅಭಿಷೇಕ ಮಾಡಲು ಈ ಒಂದೆ ದಿನ ಅವಕಾಶ ಇದ್ದು. ಮಾತೆಯ ಸಮಸ್ತ ಸದ್ಭಕ್ತರು ಇದರಲ್ಲಿ ಭಾಗವಹಿಸಿ ಮತೆಯ ದರ್ಶನ ಪಡೆದು ಪುನಿತರಾಗಬೇಕು. ಅಂದು ಸಂಜೆ 5 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಝೀರಾ ವಾಟರ್ ಮಾಲೀಕರಿಂದ ಪ್ರಸಾದ ವ್ಯವಸ್ಥೆ ಇರಲಿದೆ ಎಂದು ಮಂದಿರದ ಆಡಳಿತ ಮಂಡಳಿಯ ಅಧ್ಯಕ್ಷ ವಿಜಯಕುಮಾರ ವೀರಶೇಟ್ಟಿ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದೆ.