ಕುಂಬಾರವಾಡಾ ಭವಾನಿ ಮಂದಿರದಲ್ಲಿ ಸೆ.25 ರಿಂದ ನವರಾತ್ರಿ ಉತ್ಸವ

ಬೀದರ: ಸೆ 23: ಪ್ರತಿ ವರ್ಷದಂತೆ ಈ ವರ್ಷವು ಕುಂಬಾರವಾಡಾ ಕ್ಷೇತ್ರದಲ್ಲಿ ಶ್ರೀ ಮಾತಾ ಕಾಳಿಕಾದೇವಿ ಭವಾನಿ ಮಂದಿರದಲ್ಲಿ ನವರಾತ್ರಿ ಉತ್ಸವವನ್ನು ಸೆಪ್ಟೆಂಬರ್.25 ರಿಂದ ಅಕ್ಟೋಬರ್.5 ರವರೆಗೆ ಆಚರಿಸಲಾಗುತ್ತಿದೆ.

ಸೆ.30 ರಂದು ಪುಣ್ಯಾವತಿಬಾಯಿ ಕೊಂಡಿ ಇವರು ತಮ್ಮ ಅಮೃತ ಹಸ್ತದಲ್ಲಿ ಘಟಸ್ಥಾಪನಾ ಮಾಡಿ ಅಂದಿನಿಂದ ಅವರು ಅಕ್ಟೋಬರ್.4 ರ ರಾತ್ರಿ 12 ಗಂಟೆಯವರೆಗೆ ಶ್ರೀ ಮಾತಾ ಕಾಳಿಕಾದೇವಿ ಭವಾನಿ ಮಂದಿರದಲ್ಲಿ ಅನುಷ್ಠಾನಕ್ಕೆ ಕುಳಿತುಕೊಳ್ಳಲಿದ್ದಾರೆ.

ನವರಾತ್ರಿ ಉತ್ಸವದ ಕಾರ್ಯಕ್ರಮಗಳ ವಿವರ: ಸೆಪ್ಟೆಂಬರ್.30 ರಿಂದ ಅಕ್ಟೋಬರ್.4 ರವರೆಗೆ ರಾತ್ರಿ 10 ರಿಂದ ಭಜನ ಸಂಗೀತ ಕಾರ್ಯಕ್ರಮ, ಅಕ್ಟೋಬರ್.2 ರಂದು ಸಾಯಂಕಾಲ 4 ಗಂಟೆಯಿಂದ 9 ರವರೆಗೆ ಶ್ರೀ ಸಾಯಿ ಗೆಳೆಯರ ಬಳಗದಿಂದ ಮಹಾಪ್ರಸಾದ ಕಾರ್ಯಕ್ರಮ, ಅಕ್ಟೋಬರ್.3 ರಂದು ರಾಣಿ ಸತ್ಯಮೂರ್ತಿ ನಿರ್ದೇಶನ ಇವರ ನೇತೃತ್ವದಲ್ಲಿ ರಾತ್ರಿ 6 ಗಂಟೆಗೆ ಭರತನಾಟ್ಯ ಕಾರ್ಯಕ್ರಮ, ಅಕ್ಟೋಬರ್.5 ರಂದು ವಿಜಯದಶಮಿ (ದಸರಾ) ದಿನದಂದು ಶ್ರೀ ಮಾತಾ ಕಾಳಿಕಾದೇವಿ ಪಲ್ಲಕಿ, ಮಧ್ಯಾಹ್ನ 2 ಗಂಟೆಗೆ ಕುಂಬಾರವಾಡಾ ಮಂದಿರದಿಂದ ಮೆರವಣಿಗೆ ಪ್ರಾರಂಭವಾಗಿ ಹೂಗೇರಿ ಕ್ಷೇತ್ರದಿಂದ ಎಸ್.ಪಿ.ಬಂಗಲಾ, ಹೈದ್ರಾಬಾದ ರೋಡ್, ಶ್ರೀ ಹನುಮಾನ ದೇವಾಲಯ ದರ್ಶನ ಪಡೆದು, ಪುನಃ ಲಾಲವಾಡಿ ಕ್ಷೇತ್ರದಿಂದ ಹಾಯುತ್ತ ರಾತ್ರಿ 10 ಗಂಟೆಗೆ ಕುಂಬಾರವಾಡ ಕ್ಷೇತ್ರಕ್ಕೆ ತಲುಪಲಿದೆ.

ಅಕ್ಟೋಬರ್.9 ರಂದು ಕೋಜಗಿರಿ ಪೂರ್ಣಿಮಾ ದಿವಸ ಬೆಳಿಗ್ಗೆ 5 ಗಂಟೆಯಿಂದ 11 ಗಂಟೆಯವರೆಗೆ ಹಾಲು, ಮೊಸರು, ಸಕ್ಕರೆ, ತುಪ್ಪ ಇವುಗಳಿಂದ ಶ್ರೀ ಮಾತಾ ಅಭಿಷೇಕ ನಡೆಯಲಿದ್ದು, ಭಕ್ತಾದಿಗಳೂ ತಮ್ಮ ಅಮೃತ ಹಸ್ತದಿಂದ ಅಭಿಷೇಕ ಮಾಡಲು ಇದು ಒಂದೇ ದಿನ ತಮಗೆ ಗರ್ಭಗುಡಿಯಲ್ಲಿ ಅವಕಾಶ ಇರುತ್ತದೆ. ಸಮಸ್ತ ಸದ್ಭಕ್ತರು ಇದರಲ್ಲಿ ಭಾಗವಹಿಸಿ ಶ್ರೀ ಮಾತಾ ದರ್ಶನ ಪಡೆದು ಪುನಿತರಾಗಿರಿ. ಸಾಯಂಕಾಲ 5 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಮಹಾಪ್ರಸಾದ ವ್ಯವಸ್ಥೆ ಇರುತ್ತದೆ. ಇಡಿ ರಾತ್ರಿ ಭಜನ, ಸಂಗೀತ ದರ್ಬಾರ ನಡೆಯಲಿದೆ ಎಂದು ಬೀದರ ಕುಂಬಾರವಾಡಾದ ಶ್ರೀ ಮಾತಾ ಕಾಳಿಕಾದೇವಿ ಸಮಸ್ತ ಮಂಡಳಿ ಅಧ್ಯಕ್ಷರಾದ ವಿಜಯಕುಮಾರ ವೀರಶೆಟ್ಟಿ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.