ಕುಂಬಾರರ ಹಾಸ್ಟೆಲ್‌ಗೆ ಅಗತ್ಯ ಸೌಲಭ್ಯ:ಕೆಎನ್‌ಆರ್ ಭರವಸೆ

ತುಮಕೂರು, ಜು. ೨೭- ಇತ್ತೀಚೆಗೆ ಶ್ರೀಕುಂಬಾರರ ಸಂಘದ ಆಡಳಿತ ಮಂಡಳಿಗೆ ಮುಂದಿನ ೩ ವರ್ಷಗಳ ಅವಧಿಗೆ ಚುನಾವಣೆ ನಡೆದು ಪದಾಧಿಕಾರಿಗಳು ಆಯ್ಕೆಯಾದ ಹಿನ್ನೆಲೆಯಲ್ಲಿ ನಿಯೋಗ ತೆರಳಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರನ್ನು ಭೇಟಿ ಮಾಡಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆ.ಎನ್.ರಾಜಣ್ಣ, ಕುಂಬಾರರ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸದಾ ಸಿದ್ಧನಾಗಿರುತ್ತೇನೆ. ಕುಂಬಾರ ಸಮಾಜ ಇಂದಿಗೂ ಹಿಂದುಳಿದಿದೆ. ಆದ ಕಾರಣ ಸಮಾಜದಲ್ಲಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಕೊಡಿಸುವ ಮೂಲಕ ಸಮಾಜದ ಅಭಿವೃದ್ದಿಗಾಗಿ ಶ್ರಮಿಸಿದರೆ ಸಮಾಜ ಬಲಿಷ್ಠವಾಗಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಎಸ್.ಎನ್.ಅಶ್ವತ್ಥ್‌ನಾರಾಯಣ, ಗುರುಮೂರ್ತಿ, ಬಿ.ಅಶ್ವತ್ಥಪ್ಪ, ಹೆಚ್.ಎಲ್. ಮಂಜುನಾಥ್, ಎಸ್.ಜಯಮ್ಮನಾಗರಾಜು, ಎಸ್.ಸಿ.ಪುಟ್ಟರಾಜು, ಸಿ.ರಘು, ಕೆ.ಎನ್. ಮಂಜುನಾಥ್, ಗೋವಿಂದರಾಜು, ಎನ್.ಶ್ರೀನಿವಾಸ್, ಬಿ.ಆರ್.ಪುಟ್ಟಸಿದ್ದಯ್ಯ, ಹೆಚ್.ಎಸ್.ಯಶೋಧ, ಆರ್.ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.