ಕುಂಬಾರಗೆ ಕನ್ನಡ ರತ್ನ ಪ್ರಶಸ್ತಿ ಪ್ರದಾನ

ಕಲಬುರಗಿ:ನ.30: ವೀರ ಕನ್ನಡಿಗರ ಸೇನೆಯ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಅಮೃತ ಪಾಟೀಲ ರವರ ನೆತೃತ್ವದಲ್ಲಿ ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಹೆಸರಾಂತ ಜನಪದ ಕಲಾವಿದ ನಿರೂಪಕ ಎಸ್.ಎಮ್.ಭಕ್ತ ಕುಂಬಾರರಿಗೆ “ಕನ್ನಡ ರತ್ನ” ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಕವಿ ಕಲಾವಿದರನ್ನು ಗುರುತಿಸಿ ಗೌರವ ಪುರಾಸ್ಕಾರ ನಿಡುವುದರಿಂದ ಜನಪದ ಕಲೆ ಸಾಹಿತ್ಯ ಸಂಸ್ಕøತಿ ಬೆಳೆಯತ್ತದೆ ಹಾಗೆ ನಾವು ಕಂಡಂತೆ ಒಂದು ದಶಕದಿಂದ ಕನ್ನಡ ತಾಯಿಯ ಸೇವೆಯ ಜೊತೆಗೆ ಜನಪದ ಯಕ್ಷಣಿ ಪ್ರದರ್ಶನ, ನಿರೂಪಣೆಯ ನುಡಿಗಳೊಂದಿಗೆ ಸಮಾಜಕ್ಕೆ ಸುಂದರ ಸಂದೇಶಗಳನ್ನು ಸಾರುವ ಕೆಲಸವನ್ನು ಮಾಡುತ್ತಿದ್ದಾರೆ ಭಕ್ತ ಕುಂಬಾರ ರವರು ಎಂದು ಷ.ಬ್ರ.ಡಾ.ಗುರುಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಹರುಶ ವ್ಯಕ್ತ ಪಡಿಸಿ ಆಶಿರ್ವಚನ ನಿಡಿದರು,
ಇದೆ ವೇಳೆ ದಂಡಗುಂಡದ ಶ್ರೀಗಳು, ಮಂಗಲಗಿಯ ಶ್ರೀಗಳು ಉಪಸ್ಥಿತರಿದ್ದರು ಮರ್ದಿನಿ ಚಿತ್ರ ನಟಿ ರಿತನ್ಯ ಹೂವಣ್ಣ ಬೆಂಗಳೂರು, ನಿರ್ದೇಶಕ ಕಿರಣ, ನಿರ್ಮಾಪಕ ಜಗದೀಶ್ ಭಾರತಿ ಬೆಂಗಳೂರು ಸೆರಿದಂತೆ ಅನೇಕ ಗಣ್ಯರು ಸೆರಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.