ಕುಂಬಳಗೋಡು ಗ್ರಾಪಂ: ಗ್ರಾಮ ಸಭೆಗೆ ಚಾಲನೆ

ಕೆಂಗೇರಿ.ಸೆ೨೭:ಯಶವಂತಪುರ ವಿಧಾನಸಭಾ ಕ್ಷೇತ್ರದ ಕುಂಬಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ೨೦೨೩-೨೪ನೇ ಗ್ರಾಮ ಸಭೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಣ್ಣಿನ ಮಗ ರಾಮಕೃಷ್ಣ, ಉಪಾಧ್ಯಕ್ಷ ಗೋಪಾಲಕೃಷ್ಣ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಬಸವರಾಜುರವರ ನೇತೃತ್ವದಲ್ಲಿ ಅಂಚೆಪಾಳ್ಯ ಸರ್ಕಾರಿ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದರು.
ರಾಮಕೃಷ್ಣ ಮಾತನಾಡಿ ನನ್ನನ್ನು ಅಧ್ಯಕ್ಷನಾಗಿ ಆಯ್ಕೆ ಮಾಡಿರುವ ಪಂಚಾಯತಿ ಸದಸ್ಯರು ಹಾಗೂ ಕಾರ್ಯಕರ್ತರಿಗೆ ತುಂಬು ಹೃದಯದ ಧನ್ಯವಾದಗಳು. ನಮ್ಮ ಪಂಚಾಯತಿಯಲ್ಲಿ ಉತ್ತಮ ಮಟ್ಟದ ಸಭೆಯನ್ನು ಆಯೋಜಿಸಿದ್ದೇವೆ. ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದೇವೆ. ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಗ್ರಾಮಗಳಲ್ಲಿ ಕೊಳವೆ ಬಾವಿಗಳನ್ನು ಹಾಕಿಸಿ ಕೊಡುವುದರ ಮೂಲಕ ಹಾಗೆಯೇ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಿದ್ದೇವೆ. ನಮ್ಮ ಗ್ರಾಮ ಪಂಚಾಯತಿಯ ೭೨ ಗ್ರಾಮಗಳಿಗೆ ಶಾಶ್ವತ ನೀರಾವರಿಯನ್ನು ನೀಡಬೇಕೆಂಬ ದೃಷ್ಟಿಯಿಂದ ಶಾಸಕರಾದ ಸೋಮಶೇಖರ್ ಅವರು ಅನುದಾನವನ್ನು ಬಿಡುಗಡೆಗೊಳಿಸಿದ್ದಾರೆ ಎಂದರು.
ಉಪಾಧ್ಯಕ್ಷ ಗೋಪಾಲಕೃಷ್ಣ ಮಾತನಾಡಿ ಈ ಗ್ರಾಮ ಸಭೆ ಆಯೋಜಿಸಿರುವುದು ಸಂತೋಷ ಪಡುವಂತಹ ಒಂದು ಕಾರ್ಯಕ್ರಮ. ಏಕೆಂದರೆ ಗ್ರಾಮ ಸಮಯ ಮೂಲಕ ನಮ್ಮ ಕುಂಬಳಗೂಡು ಗ್ರಾಮ ಪಂಚಾಯಿತಿಗೆ ಒಳಪಡುವ ಎಲ್ಲಾ ಗ್ರಾಮಗಳ ಕುಂದು ಕೊರತೆಗಳನ್ನು ಮತ್ತು ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು.
ನಿಕಟಪೂವ೯ ಅಧ್ಯಕ್ಷ ಚಿಕ್ಕರಾಜು, ಗ್ರಾಮ ಪಂಚಾಯತಿ ಸದಸ್ಯರುಗಳಾದ ನರಸಿಂಹಮೂತಿ೯.ಎನ್ . ದೇವರಾಜು ,ಅನ್ನಿಸ್, ನರಸಿಂಹಮೂತಿ೯, ವೆಂಕಟೇಗೌಡ,ಧಮ೯ಯ್ಯ ,ನಾಗೇಶ್, ಇಲಿಯಾಸ್ , ಕೃಷ್ಣಪ್ಪ , ಮಹೇಶ್ , ನಂದಕುಮಾರ್ ,ಲೋಕೇಶ್ ,ಧನಂಜಯ ,ಪ್ರಕಾಶ್, ವೆಂಕಟಾಚಲ,ಬಾಲು,ಲಕ್ಷ್ಮಣ್,ಸೋಮು, ನವೀನ್, ಅಸೀಫ್,ಸಲೀಂ,ಸನಾವುಲ್ಲಾ, ಹಾಗೂ ಬೆಂ. ದ. ತಾಲ್ಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಇದ್ದರು.