ಕುಂದುವಾಡ ಕೆರೆ ಅಭಿವೃದ್ಧಿ ಕಾಮಗಾರಿ ಅವೈಜ್ಞಾನಿಕ

ದಾವಣಗೆರೆ.ಏ.೨೯; ಸ್ಮಾರ್ಟ್ ಸಿಟಿ ಅಧಿಕಾರಿಗಳಿಂದ ಕುಂದುವಾಡ ಕೆರೆ ಅಭಿವೃದ್ಧಿ ಕಾಮಗಾರಿ ಅವೈಜ್ಞಾನಿಕವಾಗಿ,  ಎಲ್ಲಾ ನಿಯಮಗಳನ್ನು ಉಲ್ಲಂಘನೆ ಮಾಡಿ ಕಾಮಗಾರಿಯನ್ನು ನಡೆಸುತ್ತಿರುವುದರ ಕುರಿತು ಯುವ ಭಾರತ ಗ್ರೀನ್ ಬ್ರಿಗೇಡ್  ಸಂಘದವತಿಯಿಂದ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಮೊಕ್ಕದ್ದಮೆ ದಾಖಲಿಸಲಾಗಿದೆ. ನಮ್ಮ ಮನವಿಯನ್ನು ಪುರಸ್ಕರಿಸಿರುವ  ಕರ್ನಾಟಕ ಹೈ ಕೋರ್ಟ್‍ನ ಮುಖ್ಯ ನ್ಯಾಯ ಮೂರ್ತಿಗಳ ಪೀಠ, ತತಕ್ಷಣದಿಂದ ಮುಂದಿನ ಆದೇಶದವರೆಗೂ ಕೆರೆಯ ಎಲ್ಲಾ ಕಾಮಕಾರಿಗಳನ್ನು ಸ್ಥಗಿತಗೊಳಿಸುವಂತೆ  ತಡೆಯಾಜ್ಞೆ ನೀಡಿದ್ದು, ಈ ಕೂಡಲೆ ಕೆರೆಯಲ್ಲಿ ನಡೆಸುತ್ತಿರುವ ಎಲ್ಲಾ ಕಾಮಗಾರಿಗಳನ್ನು ನಿಲ್ಲಿಸಬೇಕೆಂದು ಮನವಿ ಸಲ್ಲಿಸಲಾಗಿದೆ ಎಂದುಬ್ರೀಗೆಡ್ ಅಧ್ಯಕ್ಷ ನಾಗರಾಜ್ ಸುರ್ವೆ ಹೇಳಿದರು.ಕುಂದುವಾಡ ಕೆರೆಯ ಉತ್ತರ-ಪಶ್ಚಿಮ ಭಾಗದಲ್ಲಿ ಇರುವ ಒಬ್ಬ ಪ್ರಭಾವಿ ಉದ್ಯೋಮಿ ರವರ ಲೇವೌಟ್ ಗೆ ಅನುಕೂಲವಾಗಲು ನೀರು ಸೋರಿಕೆ ನೆಪದಲ್ಲಿ ಕಾಮಗಾರಿ ಮಾಡಲಾಗುತ್ತಿದೆ.ನಿಯಮದಂತೆ ಎನ್ವಿರಾಂನ್ಮೆಂಟಲ್ ಇಂಪ್ಯಾಕ್ಟ್ ಅಸೆಸ್ಮೆಂಟ್ ಮಾಡಸಿ ನಂತರ, ಅನುಮತಿ ದೊರಕಿದ ನಂತರವೇ ಈ ಕಾಮಗಾರಿಯನ್ನು ನಡೆಸಬೇಕಿದ್ದು. ಆದರೆ, ಸ್ಮಾರ್ಟ್ ಸಿಟಿ ಅಧಿಕಾರಿಗಳು, ಕುಂದುವಾಡ ಕೆರೆ ಒಂದು ಕೆರೆಯಲ್ಲಾ, ಇದೊಂದು ಕೇವಲ ನೀರು ಸಂಗ್ರಹಿಸುವ ಟ್ಯಾಂಕ್ ಎಂದು ಸುಳ್ಳು ದಾಖಲೆಗಳನ್ನು ಶೃಷ್ಟಿಸಿ, ಈ ಕಾಮಗಾರಿಗೆ ಇ.ಐ.ಎ ನಡೆಸುವ ಪ್ರಶ್ನೆ ಉದ್ಭವಿಸುವುದಿಲ್ಲಾ ಎಂದು ನೆಪ ಒಡ್ಡಿ ಈ ಕಾಮಗಾರಿಯ ಗುತ್ತಿಗೆಯನ್ನು ಕಾನೂನು ಬಾಹಿರವಾಗಿ ನೀಡಿದ್ದಾರೆ.
ಈ ಕಾಮಗಾರಿ ನಡೆಯುವ ಕಾಲವಧಿ 15 ತಿಂಗಳು ಎಂದು ನಿಗದಿಯಾಗಿದೆ. ಕಾಮಗಾರಿ ಪೂರ್ಣ ಗೊಳ್ಳುವವರೆಗೂ ನಗರಕ್ಕೆ ಕುಡಿಯುವ ನೀರಿಗೆ ಬದಲೀ ವ್ಯವಸ್ಥೆ ಮಾಡಲಾಗಿದೆ, ಎಂದು ಸ್ಮಾರ್ಟ್ ಸಿ.ಟಿ ವತಿಯಿಂದಲೇ ದಿನಾಂಕ: 27-01-2021 ರ ಪತ್ರಿಕಾ ಪ್ರಕಟಣೆ ನೀಡಲಾಗಿದೆ. ಆದ್ದರಿಂದ, ಕುಡಿಯುವ ನೀರಿನ ಸಮಸ್ಯೆ ಉದ್ಭಸುವ ಪ್ರಶ್ನೆಯೇ ಇಲ್ಲಾ.

ಎಂ.ಪಿ ಮತ್ತು ಎಂ.ಎಲ್.ಎ ಗಳಿಂದ ಕಾಮಗಾರಿಗಳನ್ನು ವೀಕ್ಷಣೆ ಮಾಡಿಸಿ, ಅವರಿಂದ ಎಲ್ಲಾ ಸರಿಯಿದೆ ಎಂದು ಪತ್ರಿಕಾ ಹೇಳಿಕೆ ನೀಡಿದ ತಕ್ಷಣ, ಎಲ್ಲವೂ ಸರಯಾಗಿ ಬಿಡುವುದಿಲಾ. ಅವರು ವೀಕ್ಷಿಸಿ ಎಲ್ಲಾ ಸರಿಯಿದೆ ಎಂದು ಪ್ರಮಾಣ ಪತ್ರ ನೀಡಿರುವ ಸ್ಮಾರ್ಟ್ ಸಿ.ಟಿಯ ಎಲ್ಲಾ ಕಾಮಗಾರಿಗಳೂ, ಅವೈಜ್ಞಾನಿಕ ಹಾಗು ಭ್ರಷ್ಟಾಚಾರದಿಂದ ಕೂಡಿದೆ. 
ಎಲ್.ಡಿ.ಪಿ.ಇ ಪ್ಲಾಸ್ಟಿಕ್ ಲೇಪನ ಮಾಡಿ ಕೆರೆಯನ್ನು ಮಾಲೀನ್ಯ ಮಾಡಲಾಗುತ್ತಿದೆ, ಮುಂದಿನ ದಿನಗಳಲ್ಲಿ ಕೆರೆಯಲ್ಲಿನ ನೀರಿನೊಳಗೆ ಪ್ಲಾಸ್ಟಿಕ್ ಮಿಶ್ರಣವಾಗಲೀದೆ, ಇದು ಜನ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರಲಿದೆ, ಎಂಬುದು ನಮ್ಮ ಕಾಳಜಿ.
ಈ ಕಾಮಗಾರಿಯು ಸಂಪೂರ್ಣ ಭ್ರಷ್ಟಾಚಾರದಿಂದ ಕೂಡಿದ್ದು ಇದರ ಸೂಕ್ತ ತನಿಖೆಯಾಗಬೇಕು ಮತ್ತು ಸ್ಮಾರ್ಟ್ ಸಿ.ಟಿ ಯ ಭ್ರಷ್ಟ, ಬೇಜವಾಬ್ದಾರಿ ಅಧಿಕಾರಿಗಳ ವಿರುಧ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ದಾಖಲಿಸಲಾಗಿದೆ, ಈ ನಮ್ಮ ಮನವಿಯನ್ನು ಪರಿಗಣಿಸಿರುವ ಮಾನ್ಯ ನ್ಯಾಯಾಲಯವು, ಕುಂದುವಾಡ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ನಡೆಸುತ್ತಿರುವುದನ್ನು ತತಕ್ಷಣದಿಂದ ಮುಂದಿನ ಆದೇಶದ ಎಲ್ಲಾ ಕಾಮಕಾರಿಗಳನ್ನು ಸ್ತಗಿತಗೊಳಿಸುವಂತೆ ಮಾನ್ಯ ಕರ್ನಾಟಕ ಹೈ ಕೋರ್ಟ್‍ನ ಮುಖ್ಯ ನ್ಯಾಂiÀiಮೂರ್ತಿಗಳ ಪೀಠ ತಡೆಯಾಜ್ಞೆ ನೀಡಿದ್ದು ಮತ್ತು ಕೆರೆ ಸುತ್ತ ಮುತ್ತಲೂ 30 ಮೀ ವ್ಯಾಪ್ತಿಯಲ್ಲಿ ಬಫರ್ ಜೋನ್ ನಲ್ಲೂ ಸಹ ಯಾವುದೇ ಕಾಮಗಾರಿಗಳನ್ನು ನಡೆಸದಿರಲು ಆದೇಶ ನೀಡಿದೆ. ಆದ್ದರಿಂದ ಈ ಕೂಡಲೆ ಕೆರೆ ಅಂಗಳದಲ್ಲಿನ ಹಾಗೂ ಕೆರೆ ಸುತ್ತ 30 ಮೀ ಬಫರ್ ಜೋನ್ ನಲ್ಲೂ ಸಹ ನಡೆಸುತ್ತಿರುವ ಕಾನೂನು ಬಾಹೀರ ಮಳೆ ನೀರು ಚರಂಡಿ ಕಾಮಗಾರಿಗಳನ್ನು ಸೇರಿ ಎಲ್ಲಾ ಕಾಮಗಾರಿಗಳನ್ನು ನಿಲ್ಲಿಸಬೇಕೆಂದು ಮಾನ್ಯ ಎಂ.ಡಿ ಸ್ಮಾರ್ಟ್ ಸಿ.ಟಿ ಹಾಗು ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.