ಕುಂದುಕೊರತೆ, ಅಹವಾಲು ಸ್ವೀಕಾರ

ಲಕ್ಷ್ಮೇಶ್ವರ,ಮಾ14: ಪಟ್ಟಣದ ಪುರಸಭೆಯ ಸಭಾಭವನದಲ್ಲಿ ಬುಧವಾರ ಕರ್ನಾಟಕ ಲೋಕಾಯುಕ್ತದ ಗದಗ ಜಿಲ್ಲೆಯ ಲೋಕಾಯುಕ್ತ ಅಧಿಕಾರಿಗಳು ಸಾರ್ವಜನಿಕ ಕುಂದು ಕೊರತೆ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮ ಜರುಗಿತು.
ಸಭೆಯಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು. ಸಭೆಯಲ್ಲಿ ಪ್ರಮುಖವಾಗಿ ಸರ್ವೆ ಇಲಾಖೆ ಗಣಿ ಮತ್ತು ಭೂಗರ್ಭ ಇಲಾಖೆ ಕಂದಾಯ ಇಲಾಖೆ ಮತ್ತು ಸ್ಲಂ ಬೋರ್ಡ್ ನಿಂದ ನಿರ್ಮಾಣಗೊಳ್ಳುತ್ತಿರುವ ಕಳಪೆ ಮನೆಗಳ ನಿರ್ಮಾಣ ಕುರಿತು ಅಧಿಕಾರಿಗಳ ಎದುರು ದೂರುಗಳು ಕೇಳಿ ಬಂದವು.
ಸರ್ವೇ ಇಲಾಖೆಯವರು ಸಾರ್ವಜನಿಕರಿಗೆ ಅನವಶ್ಯಕ ಕಿರುಕುಳ ಮತ್ತು ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂಬ ಆರೋಪವನ್ನು ಲೋಕಾಯುಕ್ತ ಅಧಿಕಾರಿಗಳು ಹೇಳಿದರು. ಆಗ ಲೋಕಾಯುಕ್ತದ ಡಿವೈಎಸ್ಪಿ ವಿಜಯ ಬಿರಾದಾರ್ ಅವರು ಮೌಖಿಕವಾಗಿ ಹೇಳಬೇಡಿ ನೇರವಾಗಿ ನನಗೆ ಲಿಖಿತವಾಗಿ ದೂರು ಕೊಡಿ ಎಂದು ಹೇಳಿದರು. ಪಟ್ಟಣದಲ್ಲಿ ಟಿಪ್ಪರ್ ಗಳು ಖಡಿ ಎಂ ಸ್ಯಾಂಡುಗಳನ್ನು ಮಿತಿಮೀರಿ ಹೇರಿಕೊಂಡು ವೇಗವಾಗಿ ಚಲಿಸುತ್ತಿದ್ದರು. ಸಂಬಂಧ ಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ದೂರಿದರು. ಆಗ ಲೋಕಾಯುಕ್ತ ಡಿವೈಎಸ್ಪಿ ವಿಜಯ ಬಿರಾದಾರ್ ಅವರು ಇದಕ್ಕಾಗಿಯೇ ಒಂದು ಸಮಿತಿ ಇದೆ ಸಮಿತಿಯ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬುದು ತಿಳಿಯುತ್ತದೆ, ಲೋಕೋಪಯೋಗಿ ಪೆÇಲೀಸ್ ಇಲಾಖೆ ಕಂದಾಯ ಇಲಾಖೆ ಗಣಿ ಮತ್ತು ಭೂಗರ್ಭ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದರು.
ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ಪಡೆದ ಡಿವೈಎಸ್ಪಿ ವಿಜಯ ಬಿರಾದಾರ್ ಅವರು ಅಧಿಕಾರಿಗಳು ಕಚೇರಿಗೆ ಸರಿಯಾದ ವೇಳೆಗೆ ಬರಬೇಕು ಮತ್ತು ಕರ್ತವ್ಯದ ಅವಧಿ ಮುಗಿದ ನಂತರ ಕಚೇರಿಯಿಂದ ಹೋಗಬೇಕು ಅನೇಕ ದೂರುಗಳು ಅಧಿಕಾರಿಗಳು ಸಿಗುತ್ತಿಲ್ಲ ಎಂಬುದು ಸಾರ್ವಜನಿಕರಾಗಿದೆ. ಕಚೇರಿಯಿಂದ ಹೊರಗಡೆ ಹೋಗಬೇಕಾದರೆ ಚಲನವಲನ ರಿಜಿಸ್ಟರ್‍ನಲ್ಲಿ ಕಡ್ಡಾಯವಾಗಿ ಹೋಗುವ ಮತ್ತು ಬರುವ ವೇಳೆಯನ್ನು ನಮೂದಿಸಬೇಕು ಎಂದು ತಾಕೀತು ಮಾಡಿದರು.
ಪಟ್ಟಣದ ಪುರಸಭೆಯ ವ್ಯಾಪ್ತಿಯಲ್ಲಿ ನಿರ್ಮಿಸುತ್ತಿರುವ ಸ್ಲಂ ಬೋರ್ಡಿನ ಮನೆಗಳು ಕಳಪೆಯಾಗಿದ್ದು ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸದಾನಂದ ನಂದಣ್ಣನವರ ಲೋಕಾಯುಕ್ತರಿಗೆ ಮನವಿ ಸಲ್ಲಿಸಿದರು.
ಸಭೆಯಲ್ಲಿ ಕೃಷಿ ಇಲಾಖೆ ಆರೋಗ್ಯ ಇಲಾಖೆ ಕಂದಾಯ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳ ಮುಖ್ಯಸ್ಥರು ಹಾಜರಿದ್ದರು.
ಲೋಕಾಯುಕ್ತದ ಸಿಪಿಐ ರವಿ ಪುರುಷೋತ್ತಮ ಸಾವುಬಾಯಿ ತೇಲಿ ಮುಖ್ಯ ಅಧಿಕಾರಿ ಮಹೇಶ ಹಡಪದ ಇದ್ದರು.