ಕುಂದಾ ನಗರಿಯಲ್ಲಿ ಮಂಗಳಾಗೆ ಗೆಲುವಿನ ಸಿಂಚನ ಪೈಪೋಟಿ ನೀಡಿದ ಸತೀಶ್ ಗೆ ಸೋಲು

ಬೆಳಗಾವಿ, ಮೇ ,2- ಜಿದ್ದಾಜಿದ್ದಿನ ಅಖಾಡವಾಗಿದ್ದ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಕಡೆಗೂ ಬಿಜೆಪಿ ಅಭ್ಯರ್ಥಿ ಮಂಗಳಾ ಅವರಿಗೆ ಗೆಲುವಿನ ಅದೃಷ್ಡ ಒಲಿದಿದೆ.
ಸತತ ಹಾವು ಏಣಿ ಆಟದ ನಡುವೆ ಸತೀಶ್ ಜಾರಕಿ ಹೊಳಿ ಎದುರು ಮಂಗಳಾ ಅಂಗಡಿ 2903 ಕಡಿಮೆ‌ ಅಂತರದಿಂದ ಜಯದ ನಗೆ ಬೀರಿದ್ದಾರೆ.
ಒಟ್ಡು 81 ಸುತ್ತಿನ ಮತ ಎಣಿಕೆಯಲ್ಲಿ ಪ್ರತಿ ಕ್ಷಣವೂ ಕೌತುಕಕ್ಕಾಗಿ ಕಾರಣವಾಗಿತ್ತು.‌ಅಷ್ಟೇ ಅಲ್ಲ ಗೆಲುವಿನ ಮಾಲೆ‌ ಯಾರಿಗೆ ಎಂಬುದು ಯಕ್ಷ ಪ್ರಶ್ನೆ ಯಾಗಿತ್ತು.
ಆರಂಭದಲ್ಲಿ ಬಿಜೆಪಿ 40 ಸುತ್ತುಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿತ್ತು. 75 ನೇ ಸುತ್ತಿನ ಬಳಿಕ ಕಾಂಗ್ರೆಸ್ ನ ಸತೀಶ್ ಜಾರಕಿಹೊಳಿ ಮುನ್ನಡೆ ಸಾಧಿಸಿದ್ದರು. ಹೀಗೆ ಪ್ರತಿಯೊಂದು ಸುತ್ತಿನಲ್ಲೂ ಏರಿಳಿತವಾಗಿ ಫಲಿತಾಂಶ ಕುತೂಹಲ ಕೆರಳಿಸಿತ್ತು.
ಆದರೆ 80ನೇ ಸುತ್ತಿನಲ್ಲಿ ‌ಮಂಗಳಾ 3101 ಮತಗಳಿಂದ ಮುನ್ನಡೆ ಸಾಧಿಸಿ ಕಾಂಗ್ರೆಸ್ ಗೆ ಮಂಗಳಾ ಆಘಾತ ನೀಡಿದರು.
ಅಂತಿಮವಾಗಿ ಕೊನೆಯ ನಾಲ್ಕು ಸುತ್ತಿನಲ್ಲಿ ಮುನ್ನಡೆ ಗಳಿಸಿ ಅಂತಿಮ ಮಂಗಳಾ ಅವರಿಗೆ‌‌ ಗೆಲುವಿನ ಸಿಹಿ ಲಭಿಸಿತು.
ಸುರೇಶ್ ಅಂಗಡಿ ಅವರ ನಿಧನದಿಂದ ತೆರವಾದ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿತ್ತು. ಕಾಂಗ್ರೆಸ್ ನಿಂದ ಸತೀಶ್ ಜಾರಕಿಹೊಳಿ ಮತ್ತು ಬಿಜೆಪಿಯಿಂದಸುರೇಶ್ ಅಂಗಡಿ ಅವರ ಪತ್ನಿ ಮಂಗಳಾ ಅಂಗಡಿ ಸ್ಪರ್ಧಿಸಿದ್ದರು.
ಗೆಲುವು ಸಾಧಿಸುತ್ತಿದ್ದಂತೆ ಪತಿಯ ಭಾವಚಿತ್ರಕ್ಲೆ ಪೂಜೆ ಸಲ್ಲಿಸಿದರು. ಬಳಿಕ ಪ್ರತಿಕ್ರಿಯಿಸಿದ ಅವರು, ಇದು ಜನರ ಗೆಲುವು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರದ ಸಾಧನೆಯಿಂದ ಗೆಲುವು ಲಭಿಸಿದೆ ಎಂದರು.