ಕುಂದಾಪುರ ಎಗ್ ಕರಿ

ಬೇಕಾಗುವ ಸಾಮಾಗ್ರಿಗಳು
ಗುಂಟೂರು ಒಣ ಮೆಣಸು
ಒಣ ಮೆಣಸು
ಕೊತ್ತಂಬರಿ ಬೀಜ
ಕಾಳು ಮೆಣಸು
ಜೀರಿಗೆ
ಮೆಂತ್ಯ ಬೀಜ
ಹಳದಿ ಪುಡಿ
೧ ಈರುಳ್ಳಿ
ಬೆಳ್ಳುಳ್ಳಿ ಎಸಳುಗಳು
ಹುಣಸೆ ಹಣ್ಣಿನ ರಸ
ಹಸಿ ತೆಂಗಿನಕಾಯಿ ತುರಿ
೪ ಮೊಟ್ಟೆಗಳು
ಉಪ್ಪು ರುಚಿಗೆ ತಕ್ಕಷ್ಟುಮಾಡುವ ವಿಧಾನ
ಸಣ್ಣ ಉರಿಯಲ್ಲಿ ಗುಂಟೂರು ಮೆಣಸು ಹಾಗು ಬ್ಯಾಡ್ಗಿ ಮೆಣಸುಗಳನ್ನು ಹುರಿಯಿರಿ.
ಇದಕ್ಕೆ ಕೊತ್ತಂಬರಿ ಬೀಜ,ಕಾಳು ಮೆಣಸು,ಜೀರಿಗೆ, ಮೆಂತ್ಯ ಬೀಜಗಳನ್ನು ಸೇರಿಸಿ ಎಲ್ಲವು ಗರಿಯಾಗುವ ತನಕ ಹುರಿಯಿರಿ.
ನಂತರ ಇವುಗಳನ್ನು ಹಳದಿ ಪುಡಿ, ಈರುಳ್ಳಿ(೧/೨),ಬೆಳ್ಳುಳ್ಳಿ ಎಸಳುಗಳು, ಹುಣಸೆ ಹಣ್ಣಿನ ರಸ, ತೆಂಗಿನಕಾಯಿ ತುರಿ, ಬೇಕಾದಷ್ಟು ಪ್ರಮಾಣದ ನೀರಿನ ಜೊತೆ ಬೆರೆಸಿ ಗ್ರೈಂಡರ್ ನಲ್ಲಿ ನುಣ್ಣಗೆ ಪೇಸ್ಟ್ ಮಾಡಿ.
ತಯಾರಾದ ಮಸಾಲೆಯ ಹದ ಸ್ವಲ್ಪ ತೆಳುವಾಗಿರುವ ಹಾಗೆ ನೋಡಿಕೊಳ್ಳಿ.
ಇದಕ್ಕೆ ಉಳಿದ ಈರುಳ್ಳಿ,ಉಪ್ಪನ್ನು ಸೇರಿಸಿ ಮಧ್ಯಮ ಉರಿಯಲ್ಲಿ ೩ ನಿಮಿಷ ಕುದಿಯಲು ಬಿಡಿ.
ಇದಕ್ಕೆ ಒಂದೊಂದಾಗಿ ಮೊಟ್ಟೆಗಳನ್ನು ಒಡೆದು ಹಾಕಿ. ಮೊಟ್ಟೆ ಕದಡದೆ ಹಾಗೆಯೆ ಮತ್ತೆ ೩ ನಿಮಿಷ ಕುದಿಯಲು ಬಿಡಿ.
ನಿಧಾನವಾಗಿ ಮೊಟ್ಟೆಗಳನ್ನು ಮಗುಚಿ, ಮತ್ತೆ ೧ ನಿಮಿಷ ಕುದಿಯಲು ಬಿಟ್ಟರೆ ಕುಂದಾಪುರ ಮೊಟ್ಟೆ ಗ್ರೇವಿ ರೆಡಿ!