ಕುಂಟ ಮಾರೆಮ್ಮಗೆ ಶಾಸಕ ನಾಗೇಂದ್ರ ಪೂಜೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಮಾ,14- ತಾಲೂಕಿನ ಜೋಳದರಾಶಿ ಮತ್ತು ಪಿಡಿಹಳ್ಳಿ ನಡುವಿನ ರಾಷ್ಟ್ರೀಯ ಹೆದ್ದಾರಿ ಬಳಿಯ ಕುಂಟು ಮಾರೆಮ್ಮ ದೇವಸ್ಥಾನದಲ್ಲಿ ಇಂದು ಗ್ರಾಮೀಣ ಶಾಸಕ ಬಿ.ನಾಗೇಂದ್ರ   ವಿಶೇಷ ಪೂಜೆ ನೆರವೇರಿಸಿದ್ದಾರೆ.
ಸಮಾಜದಲ್ಲು ಉತ್ತಮ ಮಳೆ ಬೆಳೆ,ಸುಖ ಶಾಂತಿ‌ ನೆಮ್ಮದಿ ದೊರೆಯುವಂತಾಗಲಿ ಎಂದು ಈ ಪೂಜೆ ನೆರವೇರಿಸಿದ್ದಾಗಿ ಹೇಳಿದ್ದಾರೆ.
ಅವರೊಂದಿಗೆ ಸಹೋದರ ವೆಂಕಟೇಶ್, ಮಾವ ಕೌಲ್ ಬಜಾರ್ ಎರ್ರಿಸ್ವಾಮಿ, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಮತ್ತು ಬೆಂಬಲಿಗರು  ಪಾಲ್ಗೊಂಡಿದ್ದರು.
ಪೂಜೆ ಅಂಗವಾಗಿ ನೂರೊಂದು ಬ್ಯಾಟೆ ಮಾಡಿದ್ದಾಗಿ ಹೇಳಲಾಗುತ್ತಿದೆ.  ಕ್ಷೇತ್ರದ ಸಾವಿರಾರು ಜನತೆಗೆ ಈ ಪೂಜೆ ಮತ್ತು ಊಟ  ಚುನಾವಣಾ ಸಂದರ್ಭದಲ್ಲಿ ಹಮ್ಮಿಕೊಂಡಿದ್ದು ಹಲವಾರು ಅಭಿಪ್ರಾಯಗಳಿಗೆ ಎಡೆಮಾಡಿಕೊಟ್ಟಿದೆ.
ಇಂದು ಕಾರ್ಯಕ್ರಮಕ್ಕೆ ಪ್ರತಿ‌ಪಕ್ಷದ ನಾಯಕ‌ ಸಿದ್ದರಾಮಯ್ಯ ಬರುತ್ತಾರೆಂಬ ಮಾಹಿತಿ ಇತ್ತು ಆದರೆ ಕೆಲ ಕಾರಣದಿಂದ ಅವರು ಬರಲಿಲ್ಲ.