ಕುಂಟೆಯಲ್ಲಿ ಈಜಲು ಹೋದ ಬಾಲಕ ಮುಳುಗಿ ಸಾವು

ಬೆಂಗಳೂರು,ಏ.೫-ಸ್ನೇಹಿತರ ಜೊತೆ ಈಜಲು ಹೋದ ಬಾಲಕನೋರ್ವ ಕಲ್ಲು ಕ್ವಾರಿಯ ಕುಂಟೆಯಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ಘಟನೆ ದೇವನಹಳ್ಳಿಯ ಜ್ಯೋತಿಪುರದ ಬಳಿ ನಡೆದಿದೆ.
ಬೈರದೇನಹಳ್ಳಿಯ ಯಲ್ಲಪ್ಪ (೧೬)ಮೃತಪಟ್ಟವರು,
ಜ್ಯೋತಿಪುರದ ರಾಜೀವ್ ನಗರ ಸಮೀಪದ ಕಲ್ಲು ಕ್ವಾರಿಯ ಕುಂಟೆಯಲ್ಲಿ ಬಿಸಿಲಿನ ತಾಪದಿಂದ ಈಜಲು ಐವರು ಬಾಲಕರು ಹೋಗಿದ್ದಾರೆ.
ಅವರ ಜೊತೆಗಿದ್ದ ಯಲ್ಲಪ್ಪ (೧೬) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಉಳಿದವರ ಆತನ ರಕ್ಷಣೆಗೆ ಮಾಡಿದ ಪ್ರಯತ್ನ ವಿಫಲವಾಗಿದೆ.
ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಯಲ್ಲಪ್ಪನ ಮೃತದೇಹವನ್ನು ಹೊರತೆಗೆದಿದ್ದಾರೆ. ಸ್ಥಳದಲ್ಲಿ ಮೃತ ಯುವಕನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.