ಕುಂಟಿಮರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 77 ನೇ ಸ್ವಾತಂತ್ರೋತ್ಸವ ಸಂಭ್ರಮ

ಗುರಮಿಠಕಲ್:ಆ.17:ಗಡಿನಾಡ ಶಾಲೆಯಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಂಟಿಮರಿ ಗ್ರಾಮದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ಸಡಗರ ಸಂಭ್ರಮದಿಂದ ಆಚರಿಸಲಾಯಿತು ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಗುರುಗಳು ಶ್ರೀ ಬಸವರಾಜಪ್ಪ ಅವರು ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿ ಕೊಟ್ಟರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀ ತಮ್ಮರೆಡ್ಡಿ ಅವರು ವಹಿಸಿಕೊಂಡಿದ್ದರು ಮುಖ್ಯ ಅತಿಥಿಗಳಾಗಿ ಊರಿನ ಪ್ರಮುಖರಾದ ಶ್ರೀ ವಿರುಪಾಕ್ಷಪ್ಪ ಸಾಹುಕಾರ್ ಹಾಗೂ ಶ್ರೀ ಬಾಲ ರೆಡ್ಡಿ ಅವರು ಎಸ್ ಡಿ ಎಮ್ ಸಿ ಯ ಉಪಾಧ್ಯಕ್ಷರು ಸರ್ವ ಸದಸ್ಯರು ಭಾಗವಹಿಸಿದ್ದರು ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಗಂಗಯ್ಯ ಮಠಪತಿ ಹಿರಿಯ ಶಿಕ್ಷಕರು ನಡೆಸಿಕೊಟ್ಟರು ಈ ಕಾರ್ಯಕ್ರಮದಲ್ಲಿ ಮಕ್ಕಳಿಂದ ಭಾಷಣ ದೇಶಭಕ್ತಿ ಗೀತೆ ಹಾಗೂ ಜಾನಪದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು ಅತಿಥಿಗಳಾಗಿ ಆಗಮಿಸಿದ ಶ್ರೀ ವಿರೂಪಾಕ್ಷಪ್ಪ ಸಾಹುಕಾರರು ಶಾಲೆಯ ಪ್ರಗತಿಯನ್ನು ಕಂಡು ಬಹಳಷ್ಟು ಖುಷಿಯಿಂದ ಅವರು ಪ್ರತಿ ವರ್ಷ ಗ್ರಾಮದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪ್ರಥಮ 5,000 ಹಾಗೂ ದ್ವಿತೀಯ ಸ್ಥಾನ ಪಡೆದವರಿಗೆ 2500 ರೂಪಾಯಿ ಕಾಣಿಕೆಯಾಗಿ ನೀಡಿದರು ಇದೇ ರೀತಿಯಾಗಿ ಪ್ರತಿ ವರ್ಷ ಇನ್ನೂ ಹೆಚ್ಚು ಅಂಕ ಪಡೆದವರಿಗೆ ಹೆಚ್ಚು ರೂಪಾಯಿಗಳನ್ನು ನಾನು ಕಾಣಿಕೆಯಾಗಿ ನೀಡುತ್ತೇನೆ ಎಂದು ಮಕ್ಕಳಿಗೆ ಸ್ಪರ್ಧಾ ಮನೋಭಾವ ಹೆಚ್ಚಿಸುವ ಉದ್ದೇಶದಿಂದ ಈ ಕಾಣಿಕೆಯನ್ನು ನನ್ನ ತಂದೆ ತಾಯಿಯರಾದ ಶ್ರೀಮತಿ ಅನ್ನಪೂರ್ಣಮ್ಮ ಕೊಂ/ ಬಸವರಾಜ್ ಅವರ ಹೆಸರಲ್ಲಿ ಪ್ರತಿವರ್ಷ ನೀಡುತ್ತೇನೆಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು ಹಾಗೆ ಊರಿನ ಯುವಕರು ಕಾರ್ಯಕ್ರಮವನ್ನು ಕುರಿತು ನಿಂಗಪ್ಪ ಕುಂಬಾರ್ ಲಿಂಗ ರೆಡ್ಡಿ ಮಹೇಂದ್ರ ಸ್ವಾಮಿ ಇತರರು ಮಾತನಾಡಿದರು ಶ್ರೀ ಗಂಗಯ್ಯ ಮಠಪತಿ ಶಿಕ್ಷಕರು ಸ್ವತಂತ್ರ ದಿನಾಚರಣೆ ಕುರಿತು ಭಾರತ ದೇಶ 77 ವರ್ಷದಲ್ಲಿ ಜಗತ್ತಿನ ರಾಷ್ಟ್ರಗಳಲ್ಲಿ ಪ್ರಗತಿಯನ್ನು ಸಾಧಿಸುತ್ತಿರುವುದನ್ನು ಹೇಳುತ್ತಾ ಭಾರತ ದೇಶದಲ್ಲಿರುವರೆಲ್ಲರೂ ಯಾವುದೇ ಜಾತಿ ಭೇದ ಭಾವ ಲಿಂಗ ಭೇದ ಭಾವ ಮಾಡದೆ ನಾವೆಲ್ಲರೂ ಒಗ್ಗಟ್ಟಾಗಿ ಇರುವುದರಿಂದ ಭಾರತ ದೇಶವು ಜಗತ್ತಿನಲ್ಲೇ ಪ್ರಥಮ ಸ್ಥಾನವನ್ನು ಪಡೆದೆ ಪಡೆಯುತ್ತದೆ ಎಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು ಅತಿಥಿ ಶಿಕ್ಷಕಿಯರಾದ ಶ್ರೀಲತಾ ಅವರು ಮಕ್ಕಳಿಗೆ ಸ್ವತಂತ್ರ ದಿನಾಚರಣೆಯ ನಿಮಿತ್ಯ ವಿವಿಧ ಆಟ ಹಾಗೂ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು ಇದರಲ್ಲಿ ಪ್ರಥಮ ದ್ವಿತೀಯ ಸ್ಥಾನ ಪಡೆದವರಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು ಹಾಗೂ ನಮ್ಮ ಶಾಲೆಗೆ ಶ್ರೀ ನಾರಾಯಣ ಎಡಕಲ್ ಹಾಗೂ ನಿವೃತ್ತ ಗುರುಗಳಾದ ಶ್ರೀ ವೆಂಕಟರೆಡ್ಡಿ ಅನುಪುರ್ ಇವರು ಪ್ರತಿ ರಾಷ್ಟ್ರೀಯ ಹಬ್ಬದಂದು ನಮ್ಮ ಶಾಲೆಯ ಮಕ್ಕಳಿಗೆ ನೋಟ್ಬುಕ್ಕು ಪೆನ್ನುಗಳನ್ನು ಕಾಣಿಕೆಯಾಗಿ ನೀಡಿದರು ಶ್ರೀ ಚಂದ್ರಶೇಖರ್ ತಂದೆ ಬಸಲಿಂಗಪ್ಪ ಇವರು ನಮ್ಮ ಶಾಲೆಗೆ ರೂ.1001 ಕಾಣಿಕೆಯಾಗಿ ನೀಡಿದರು ಗಣಿತ ಪರೀಕ್ಷೆಯಲ್ಲಿ ಪ್ರಥಮ ಬಂಧ ವಿದ್ಯಾರ್ಥಿನಿಗೆ ಶ್ರೀ ವಿರುಪಾಕ್ಷಪ್ಪ ಸೌಕಾರ್ ಅವರು ರೂ.500 ಕಾಣಿಕೆಯನ್ನು ನೀಡಿದರು ಕಾರ್ಯಕ್ರಮದಲ್ಲಿ ಮಕ್ಕಳ ಸಂಸ್ಕೃತಿ ಕಾರ್ಯಕ್ರಮವು ಬಹಳ ಅಚ್ಚುಕಟ್ಟಾಗಿ ಎಲ್ಲರ ಮನಮುಟ್ಟುವಂತೆ ಮೂಡಿಬಂದಿತು ಕೊನೆಯದಾಗಿ ಮುಖ್ಯ ಗುರುಗಳಾದ ಶ್ರೀ ಬಸವರಾಜಪ್ಪ ಅವರು ವಂದನಾರ್ಪಣೆಯನ್ನು ಮಾಡಿದರು ಎಲ್ಲರೂ ಸಿಹಿಯಾದ ಪಾಯಸವನ್ನು ಸ್ವೀಕರಿಸಿ ತಮ್ಮ ತಮ್ಮ ಮನೆಗಳಿಗೆ ಹೋದರು