
ಚಿಂಚೋಳಿ,ಜು.20- ತಾಲೂಕಿನ ಕುಂಚವರಂ ಗ್ರಾಮದ ಡಾ: ಬಿ ಆರ್ ಅಂಬೇಡ್ಕರ್ ವಸತಿ ಶಾಲೆಗೆ ಭೇಟಿ ನೀಡಿದ ತಹಶೀಲ್ದಾರ ಅಂಜುಮ್ ತಬಸ್ಸುಮ್, ಅವರು, ಮಕ್ಕಳ ಯೋಗ ಕ್ಷೆಮ, ಕುಂದುಕೊರತೆ ಹಾಗೂ ಆರೋಗ್ಯ ವಿಚಾರಿಸಿದರು.
ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ಅಧಿಕಾರಿ ಬಾಲಾಜಿ, ಅವರನ್ನು ಕರೆಯಿಸಿ ಮಕ್ಕಳ ಆರೋಗ್ಯ ಬಗ್ಗೆ ಗಮನ ಹರಿಸುವಂತೆ ಸೂಚಿಸಿದರು, ಹಾಗೂ ಆರೋಗ್ಯ ಸಿಬ್ಬಂದಿಯನ್ನು ಇಲ್ಲಿ ನಿಯೋಜಿಸುವಂತೆ ಆದೇಶಿಸಿದರು.
ಶಾಲೆಯ ಮುಖ್ಯ ಗುರುಗಳನ್ನು ಕರೆಯಿಸಿ ಮಕ್ಕಳಿಗೆ ಕಡ್ಡಾಯವಾಗಿ ಶುದ್ದ ಕುಡಿಯಲು ಶುದ್ಧ ನೀರು ಕೊಡುವಂತೆ ಮತ್ತು ಪಾತ್ರೆ, ಅಡುಗೆ ಕೋಣೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ತಿಳಿಸಿದರು ಆದಷ್ಟು ಬೇಗ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸುವಂತೆ ವ್ಯವಸ್ಥೆ ಮಾಡಲು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಪ್ರಭುಲಿಂಗ, ಅವರಿಗೆ ತಹಶೀಲ್ದಾರ ಅಂಜುಮ್ ತಬಸ್ಸುಮ್, ಸೂಚಿಸಿದರು.
ಈ ಸಂದರ್ಭದಲ್ಲಿ ಕಂದಾಯ ನಿರಿಕ್ಷಕರಾದ ರವಿಕುಮಾರ್ ಚಿಟ್ಟ ಗ್ರಾಮ ಲೆಕ್ಕಾಧಿಕಾರಿ ಅಮೀರ್ ಬಾಬಾ, ಕುಂಚವರಂ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ವಸತಿ ಶಾಲೆ ಸಿಬ್ಬಂದಿಗಳು ಇದ್ದರು.