ಕೀಲುನೋವಿಗೆ ಮನೆ ಮದ್ದು

೧.ತುಳಸಿ ರಸವನ್ನು ಜೇನು ತುಪ್ಪದೊಡನೆ ಸೇವಿಸುತ್ತಿದ್ದರೆ ಅಂಗಾಂಗಗಳ ನೋವು ಕಡಿಮೆ ಆಗುವುದು.ಬಾಹ್ಯವಾಗಿಯೂ ರಸವನ್ನು ಲೇಪಿ ಸುವುದರಿಂದ ಕೀಲುನೋವು ನಿವಾರಣೆಯಾಗುತ್ತದೆ.
೨. ಬೆಳಗ್ಗೆ ಸಂಜೆ ೧-೧ ನಿಂಬೆಹಣ್ಣನ್ನು ಕಿತ್ತಲೆ ಹಣ್ಣಿನ ರೀತಿ ಬಿಡಿಸಿಕೊಂಡು ತಿಂದರೆ ಕೀಲುನೋವು ಕಡಿಮೆ ಆಗುತ್ತದೆ.
೩.ಎಳೆಯದಾದ ನಿಂಬೆ ಎಲೆಯನ್ನು ಚೆನ್ನಾಗಿ ಜಜ್ಜಿ ರಸ ತೆಗೆದು ಸಮಪಾಲು ಎಳ್ಳೆಣ್ಣೆಯಲ್ಲಿ ಹಾಕಿ ಚೆನ್ನಾಗಿ ಕುದಿಸಿ ನೀರಿನ ಅಂಶ ಹೋದ ಮೇಲೆ ಆರಿಸಿ ಒಂದು ಸೀಸೆಗೆ ಹಾಕಿಟ್ಟುಕೊಂಡು ನೋವಿರುವ ಜಾಗಕ್ಕೆ ಹಚ್ಚುತ್ತಾ ಬಂದರೆ ಕ್ರಮೇಣ ನೋವು ನಿವಾರಣೆಯಾಗುತ್ತದೆ.
೪.ನುಗ್ಗೆಸೊಪ್ಪು ಹಾಗೂ ನುಗ್ಗೆಕಾಯಿಯನ್ನು ಅಡುಗೆಯಲ್ಲಿ ಜಾಸ್ತಿ ಬಳಸುವುದರಿಂದ ಕೀಲುನೋವು ನಿವಾರಣೆಯಾಗುತ್ತದೆ.
೫.ಕೀಲುನೋವು ಇದ್ದಾಗ ನುಗ್ಗೇಸೊಪ್ಪನ್ನು ಬಿಸಿ ಮಾಡಿ ಬಟ್ಟೆಯಲ್ಲಿ ಹಾಕಿ ಕಟ್ಟಿ ಬಿಸಿ ಬಿಸಿ ಶಾಖ ಕೊಡುವುದರಿಂದ ಕೀಲುನೋವು ನಿವಾರಣೆಯಾಗುತ್ತದೆ.
೬.ಕೀಲು ನೋವಿದ್ದಾಗ ಒಣ ಶುಂಠಿ ಹಾಗೂ ಕೊತ್ತಂಬರಿ ಬೀಜವನ್ನು ಪುಡಿ ಮಾಡಿಟ್ಟುಕೊಂಡು ನೀರಿಗೆ ಹಾಕಿ ಕುದಿಸಿ ಶೋಧಿಸಿ ಹಾಲು ಸಕ್ಕರೆ ಬೆರೆಸಿಕೊಂಡು ಕುಡಿಯುವುದರಿಂದ ಕೀಲುನೋವಿಗೆ ಅನುಕೂಲವಾಗುತ್ತದೆ.
೭.ಒಣ ಶುಂಠಿಯನ್ನು ತೇಯ್ದು ಬಿಸಿ ಮಾಡಿ ನೋವಿರುವ ಜಾಗಕ್ಕೆ ಲೇಪ ಕೊಡುವುದರಿಂದಲೂ ಅನುಕೂಲವಾಗುತ್ತದೆ.
೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧.