ಕೀರ್ತಿ ಹರಡಿದವರು ಸ್ವಾಮಿ ವಿವೇಕಾನಂದರು – ಬಿರಾದಾರ

ರಾಯಚೂರು,ಜ.೧೪- ಭಾರತದ ಸಂಸ್ಕ್ರತಿಯನ್ನು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹರಡಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಶಿಕ್ಷಣ ವಿಭಾಗದ ಜಿಲ್ಲಾ ಸಂಚಾಲಕರು ಹಾಗೂ ಪ್ರೌಢ ಶಾಲಾ ಶಿಕ್ಷಕರಾದ ದಂಡಪ್ಪ ಬಿರಾದಾರ ಅವರು ಅಭಿಪ್ರಾಯಪಟ್ಟರು.
ಅವರು ಜ.೧೨ರ ಮಂಗಳವಾರ ತಾಲೂಕಿನ ಉಡಮಗಲ್ ಖಾನಾಪೂರ ಪ್ರೌಢ ಶಾಲೆಯಲ್ಲಿ ನಡೆದ ಸ್ವಾಮಿ ವಿವೇಕಾನಂದರ ಜಯಂತಿಯಲ್ಲಿ ವಿವೇಕಾನಂದರ ೧೫೮ನೇ ಜಯಂತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ರಾಮಕೃಷ್ಣ ಪರಮಹಂಸರ ಅಚ್ಚುಮೆಚ್ಚಿನ ಶಿಷ್ಯ ಸ್ವಾಮಿ ವಿವೇಕಾನಂದ. ಗುರುಗಳು ತಮ್ಮ ಜ್ಞಾನವನ್ನು ಶಿಷ್ಯನಿಗೆ ದಾರಿಯೆರೆದರು. ಚಿಕಾಗೋ ಸಮ್ಮೇಳನಕ್ಕೆ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿ “ಅಮೇರಿಕದ ಸಹೋದರ, ಸಹೋದರಿಯರೇ ಎಂಬ ವಿವೇಕರ ವಾಣಿಯು, ಸಭಾಂಗಣದಲ್ಲಿನ ಸಭಿಕರ ಹೃದಯಕ್ಕೆ ಮುಟ್ಟಿ ಚಪ್ಪಾಳೆ ತಟ್ಟುವಂತೆ ಮಾಡಿತು.
ಶಿಕ್ಷಕಿ ಲಕ್ಷ್ಮಿದೇವಿ ಹಾಗೂ ಶಾಲೆಯ ಮುಖ್ಯೋಪಾಧ್ಯಯ ವಿರೇಶ ಅಂಗಡಿ ಮಾತನಾಡಿದರು.
ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ವಿದ್ಯಾರ್ಥಿಗಳು ಪೂಜಾ ಮತ್ತು ಮಾಲಾರ್ಪಣೆ ನೆರವೇರಿಸಲಾಯಿತು.
ಶಿಕ್ಷಕ ಶರಣಪ್ಪ ನಾಯಕ ಸ್ವಾಗತಿಸಿ, ನಿರೂಪಿಸಿದರು. ಶಿಕ್ಷಕ ಶಿವಾನಂದ ವಂದಿಸಿದರು.