ಕೀರ್ತಿಶೇಷ ಪಿ.ಆರ್.ತಿಪ್ಪೇಸ್ವಾಮಿ ಜನ್ಮ ಶತಮಾನೋತ್ಸವದ ಪೂರ್ವ ಸಿದ್ಧತಾ ಸಭೆ

ದಾವಣಗೆರೆ-ಏ.2; 

ಕರ್ನಾಟಕ ಕಂಡ ಅಪ್ರತಿಮ ಕಲಾವಿದರು, ನಾಡಿನ ಸಮಕಾಲೀನ ಚಿತ್ರಕಲಾ ಜಗತ್ತಿನ ಮೇರುಶಿಖರಗಳಲ್ಲೊಬ್ಬರಾದ ಹಿರಿಯ ಚೇತನ ಕೀರ್ತಿಶೇಷ ಪಿ.ಆರ್.ತಿಪ್ಪೇಸ್ವಾಮಿ ಜನ್ಮ ಶತಮಾನೋತ್ಸವ ದಾವಣಗೆರೆಯಲ್ಲಿ ಶೀಘ್ರದಲ್ಲಿ ವಿಜೃಂಭಣೆಯಿAದ ಆಚರಿಸಲು ಮೈಸೂರಿನ ಪಿ.ಆರ್.ತಿಪ್ಪೇಸ್ವಾಮಿ ಪ್ರತಿಷ್ಠಾನದಿಂದ ಇತ್ತೀಚಿಗೆ ದಾವಣಗೆರೆಯ ವಿಶ್ವವಿದ್ಯಾನಿಲಯದ ದೃಶ್ಯ ಕಲಾ ಕಾಲೇಜಿನ ಸಭಾಂಗಣದಲ್ಲಿ ಸಮಾರಂಭದ ಪೂರ್ವಭಾವಿ ಸಿದ್ಧತೆಗೆ ಸಭೆ ಕರೆಯಲಾಗಿದ್ದು ದಾವಣಗೆರೆಯ ಪತ್ರಕರ್ತರು, ಸಂಘಟಕರು, ಕಲಾವಿದರು ಎಲ್ಲಾ ಸೇರಿ ಅರ್ಥಪೂರ್ಣವಾಗಿ ಈ ಸಮಾರಂಭ ನಡೆಸಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು.

ಪ್ರತಿಷ್ಥಾನದ ಅಧ್ಯಕ್ಷರಾದ ರಾಜಶೇಖರ ಕದಂಭರವರ ಅಧ್ಯಕ್ಷತೆಯಲ್ಲಿ ನಡೆದ ಈ ಮಹತ್ವದ ಸಭೆಯಲ್ಲಿ ಕಾರ್ಯದರ್ಶಿ ಕೆ.ಸಿ.ಮಹದೇವಶೆಟ್ಟಿ ಸಮಿತಿ ಸದಸ್ಯರಾದ ಚಿಕ್ಕಣ್ಣ.ಸಿ., ಮಾನಸ, ಚಂದ್ರಶೇಖರಯ್ಯ, ದಾವಣಗೆರೆ ಜನಪದ ತಜ್ಞ ಡಾ.ಎಂ.ಜಿ.ಈಶ್ವರಪ್ಪ, ವಿಶ್ವವಿದ್ಯಾನಿಲಯದ ದೃಶ್ಯ ಕಲಾ ಮಹಾವಿದ್ಯಾಲಯದ ಮಾರ್ಗದರ್ಶಕರಾದ ಡಾ. ಸತೀಶ್‌ಕುಮಾರ್ ಪಂಚಪ್ಪ, ಹಿರಿಯ ಕಲಾವಿದ ನಾ.ರೇವಣ್ಣ, ಎ.ಮಹಾಲಿಂಗಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಏಪ್ರಿಲ್ 18ರಂದು ಮಂಗಳವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ದಾವಣಗೆರೆಯ ವಿಶ್ವವಿದ್ಯಾನಿಲಯದ ದೃಶ್ಯ ಕಲಾ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಈ ವೈಶಿಷ್ಟ ಸಮಾರಂಭದ ಪ್ರಚಾರ ಸಮಿತಿ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಿ ಜವಾಬ್ದಾರಿ ಹಂಚಲಾಯಿತು.

ಈ ಸಭೆಯಲ್ಲಿ ಮಲ್ಲಿಕಾರ್ಜುನ ಕಲಮರಹಳ್ಳಿ, ಸದಾನಂದ ಹೆಗಡೆ, ದತ್ತಾತ್ರೇಯ ಎನ್.ಭಟ್, ಡಾ.ರವೀಂದ್ರ, ಎಸ್.ಕಮ್ಮಾರ, ಸಾಲಿಗ್ರಾಮ ಗಣೇಶ್ ಶೆಣೈ, ಚಂದ್ರಶೇಖರ್ ಎಸ್. ಸಂಗಾ, ರವೀಂದ್ರ.ಎಚ್.ಅರಳಗುಪ್ಪಿ, ಚಂದ್ರಶೇಖರ ತೆಗ್ಗಿನಮಠ, ಸುರೇಶ್ ಡಿ.ಹೆಚ್., ಹರೀಶ್ ಹೆಚ್.ಎಸ್., ಪ್ರಮೋದ್ ಕೆ.ವಿ. ಸುಭಾಷ್ ಬಿ.ಕುಂಬಾರ ಮುಂತಾದವರು ಉಪಸ್ಥಿತರಿದ್ದರು.

ಸಭೆಯ ಪ್ರಾರಂಭದಲ್ಲಿ ಪ್ರತಿಷ್ಥಾನದ ಕಾರ್ಯದರ್ಶಿ ಕೆ.ಸಿ.ಮಹದೇವಶೆಟ್ಟಿ ಸ್ವಾಗತಿಸಿದರು, ಕೊನೆಯಲ್ಲಿ ದೃಶ್ಯ ಕಲಾ ಮಹಾವಿದ್ಯಾಲಯದ ಮಾರ್ಗದರ್ಶಕರಾದ ಡಾ. ಸತೀಶ್‌ಕುಮಾರ್ ಪಂಚಪ್ಪ ವಂದಿಸಿದರು.