ಕೀರ್ತಿ,ಪ್ರಶಸ್ತಿಗಳು ಸಾಧನೆಗೆ ಸಂದ ಫಲ

ವಿಜಯಪುರ.ಏ೪:ಸಾರ್ವಜನಿಕ ಸೇವಾ ಸಂಸ್ಥೆಗಳು ಹಾಗೂ ಸಂಘಗಳಲ್ಲಿ ಎಷ್ಟೇ ನಿಸ್ವಾರ್ಥ ಭಾವನೆಯಿಂದ ಸೇವೆ ಸಲ್ಲಿಸಿದರೂ ಸಹ ಅದನ್ನು ಗುರುತಿಸಿ, ಗೌರವಿಸುವ ಮೂಲಕ ಅವರುಗಳು ಇನ್ನೂ ಹೆಚ್ಚಿನ ಸೇವಾ ಕಾರ್ಯಗಳಲ್ಲಿ ತೊಡಗಿಕೊಳ್ಳುವಂತೆ ಮಾಡುವುದು ಸಾರ್ವಜನಿಕರ ಜವಾಬ್ದಾರಿಯಾಗಿರುವುದೆಂದು, ಇಂಡಿಯನ್ ಸೀನಿಯರ್ ಛೇಂಬರ್‌ನ ರಾಷ್ಟ್ರೀಯ ನಿರ್ದೇಶಕರಾದ ಎಂ.ಆರ್.ಜಯೇಶ್ ತಿಳಿಸಿದರು.
ಅವರು ಇಲ್ಲಿನ ರಾಯಲ್ ಪಬ್ಲಿಕ್ ಶಾಲೆಯಲ್ಲಿ ಇಂಡಿಯನ್ ಸೀನಿಯರ್ ಛೇಂಬರ್‌ನ ವತಿಯಿಂದ ಶುಕ್ರವಾರದಂದು ಏರ್ಪಡಿಸಿದ್ದ “ಪ್ರಶಸ್ತಿಗಳ ಸಂಭ್ರಮ’ ಎಂಬ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡುತ್ತಿದ್ದರು.
ಟೌನ್ ಇಂಡಿಯನ್ ಸೀನಿಯರ್ ಛೇಂಬರ್‌ನ ಅಧ್ಯಕ್ಷ ವಿ.ಎನ್.ರಮೇಶ್ ಮಾತನಾಡಿ, ಕಳೆದ ಒಂದು ವರ್ಷದಲ್ಲಿ ಕೋವಿಡ್-೧೯ ನಡುವೆಯೂ ಜೆ.ಸಿ.ಐ ಮತ್ತು ನಮ್ಮ ಇನ್ನಿತರೆ ಸಂಘ-ಸಂಸ್ಥೆಗಳ ಸಹಕಾರದಿಂದ ನಿರಾಶ್ರಿತ ಹಾಗೂ ಕಡುಬಡವರಿಗೆ ಊಟ ವಿತರಣೆ, ಕಂಬಳಿಗಳ ವಿತರಣೆ, ಹಾಗೂ ಎಲ್ಲಾ ಶಾಲಾ/ಕಾಲೇಜುಗಳ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ಮತ್ತಿತರೆ ಕಲಿಕೋಪಕರಣಗಳ ವಿತರಣೆ, ಸಾರ್ವಜನಿಕರಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು, ತರಭೇತಿ ಕಾರ್ಯಾಗಾರಗಳು, ಮುಂತಾಗಿ ಹತ್ತು-ಹಲವಾರು ಸೇವಾ ಕಾರ್ಯಕ್ರಮಗಳನ್ನು ಗುರುತಿಸಿ, ಇಂಡಿಯನ್ ಸೀನಿಯರ್ ಛೇಂಬರ್ ಪಟ್ಟಣದ ಘಟಕಕ್ಕೆ ೬ ರಾಷ್ಟ್ರೀಯ ಪ್ರಶಸ್ತಿಗಳು, ನಾಲ್ಕು ಪ್ರಾಂತೀಯ ಪ್ರಶಸ್ತಿಗಳನ್ನು ನೀಡಿ, ಗೌರವಿಸಿರುತ್ತಾರೆಂದು ತಿಳಿಸಿದರು,
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಕಟ ಪೂರ್ವ ಅಧ್ಯಕ್ಷ ಸುಬ್ರಮಣ್ಯ ಶೆಟ್ಟಿ ವಹಿಸಿದ್ದು, ಕಾರ್ಯದರ್ಶಿ ವಕೀಲ ಎನ್.ಜಯರಾಂ, ಸೀನಿಯರೇಟ್ ಅಧ್ಯಕ್ಷಿಣಿ ಚಂದ್ರಮುಖಿ ರಮೇಶ್, ಜೆ.ಸಿ.ಐ ಸಂಸ್ಥೆ ಅಧ್ಯಕ್ಷ ವಿ.ರವೀಂದ್ರ, ಮಾಜಿ ಅಧ್ಯಕ್ಷ ವೆಂಕಟೇಶ್, ಜೆ.ಸಿ.ಐ ಮಾಜಿ ಅಧ್ಯಕ್ಷರುಗಳಾದ ಚಿದಾನಂದ ಮೂರ್ತಿ, ಅನೀಸ್-ಊರ್-ರೆಹಮಾನ್, ತ್ಯಾಗರಾಜು, ಜೆ.ಆರ್.ಮುನಿವೀರಣ್ಣ,ಎಸ್.ಆರ್.ಎಸ್.ಬಸವರಾಜು, ಎ.ಮಂಜುನಾಥ್, ಮೇಲೂರು ರವಿಚಂದ್ರ,ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಎಂ.ಶಿವಕುಮಾರ್, ಮಾರ್ಕೆಟ್ ವೆಂಕಟೇಶ್, ಕಸಾಪ ಮಾಜಿ ತಾಲೂಕು ಅಧ್ಯಕ್ಷ ಎಂ.ನಾರಾಯಣಸ್ವಾಮಿ, ಜಿಲ್ಲಾ ಶ.ಸಾ.ಪ ಅಧ್ಯಕ್ಷ ಚಂದ್ರಶೇಖರ್ ಬಿ.ಹಡಪದ್, ಮಹಂತಿನ ಮಠದ ಕಾರ್ಯದರ್ಶಿ ವಿ.ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.