ಕೀಟ ಶಾಸ್ತ್ರಜ್ಞರ ತಂಡ ಬೇಟಿ, ಜನರಲ್ಲಿ ಜಾಗೃತಿ

ಸಿಂಧನೂರು.ಏ.೨೧-ನಗರ ಹಾಗೂ ತಾಲೂಕಿನ ವಿವಿಧ ಗ್ರಾಮಗಳಲ್ಲಿ ರಾಜ್ಯ ಮಟ್ಟದ ಕೀಟ ಶಾಸ್ತ್ರಜ್ಞರ ತಂಡ ಬೇಟಿ ನೀಡಿ ವಿವಿಧ ಪ್ರಭೇದ ಸೊಳ್ಳೆಗಳ ಬಗ್ಗೆ ಅಧ್ಯಯನ ನಡೆಸಿ ಸೊಳ್ಳೆಗಳು ಹರಡದಂತೆ ಹಾಗು ರೋಗಗಳಿಂದ ರಕ್ಷಿಸಿ ಕೊಳ್ಳವಂತೆ ಸಾರ್ವಜನಿಕರಲ್ಲಿ ತಂಡ ಜಾಗೃತಿ ಮೂಡಿಸಿತು.
ನಗರದ ೨೨-೨೩ ವಾರ್ಡ್‌ನಲ್ಲಿ ಕೀಟ ಶಾಸ್ತ್ರಜ್ಞರ ತಂಡ ಮನೆ-ಮನೆಗೆ ಭೇಟಿ ನೀಡಿ ಅನೇಕ ಪ್ರಭೇದಗಳ ಸೊಳ್ಳೆಗಳ ನಿಯಂತ್ರಣ ಸಾದಿಸಲು ಸೊಳ್ಳೆಗಳ ಸಂಗ್ರಹ ನಡೆಸಿ ಅದರ ಅಧ್ಯಯನ ವರದಿ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿದರು.
ಸೊಳ್ಳೆಗಳು ಹರಡಲು ಸಾರ್ವಜನಿಕರ ದೈನಂದಿನ ಜೀವನ ಶೈಲಿ ಕಾರಣ ವಾಗಿದ್ದು ಜೀವನ ಶೈಲಿ ಬದಲಾಹಿಸಿ ಕೊಂಡು ಆರೋಗ್ಯ ಇಲಾಖೆ ನಿರ್ದೇಶನಗಳನ್ನು ಚಾಚು ತಪ್ಪದೆ ಪಾಲಿಸಿದಾಗ ಮಾತ್ರ ಸೊಳ್ಳೆಗಳನ್ನು ನಿಯಂತ್ರಿಸಿ ಅವುಗಳಿಂದ ಹರಡುವ ರೋಗದಿಂದ ನಿಮ್ಮನ್ನು ರಕ್ಷಿಸಿ ಕೊಳ್ಳಿ ಎಂದು ರಾಜ್ಯ ಮಟ್ಟದ ಕೀಟ ಶಾಸ್ತ್ರಜ್ಞರ ತಂಡ ಮುಖ್ಯಸ್ಥರಾದ ಜೋತ್ಸ್ನಾ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.
ಮೂರು ದಿನಗಳ ಕಾಲ ಕೀಟ ಶಾಸ್ತ್ರಜ್ಞರ ತಂಡ ನಗರ ಸೇರಿದಂತೆ ತಾಲೂಕಿನ ಬಳಗನೂರ, ಹಂಚನಾಳ ಕ್ಯಾಂಪ್, ಉಪ್ಪಳ, ಗ್ರಾಮಗಳಿಗೆ ಭೇಟಿ ಕೀಟಗಳ ಬಗ್ಗೆ ಅಧ್ಯಯನ ನಡೆಸಿ ಸೊಳ್ಳೆಗಳ ಸಾಂದ್ರತೆ ಬಗ್ಗೆ ಜನರಲ್ಲಿ ಅರಿವು ಮಾಡಿಸಿ ಆನೆಕಾಲು ರೋಗದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ರಾಜ್ಯ ಮಟ್ಟದ ಕೀಟ ಶಾಸ್ತ್ರಜ್ಞರ ತಂಡದ ಅನ್ನಪೂರ್ಣಮ್ಮ, ಸಹಾಯಕರಾದ ಮಹದೇವ ವಿಕಾಸ ಎಫ್.ಎ ಹಣಿಗಿ, ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕರು ಹಾಗೂ ಆಶಾ ಕಾರ್ಯಕರ್ತರು ತಂಡದಲ್ಲಿದು ಸಾಥ ನೀಡಿದರು.