ಕೀಟನಾಶಕ ಕುಡಿದು ಯುವಕ ಸಾವು

ದಾವಣಗೆರೆ.ಮೇ.೩೧; ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಸಾಸ್ವೆಹಳ್ಳಿ ಹೋಬಳಿಯ ಲಿಂಗಾಪುರದ ಯುವಕನೊರ್ವ ಹೊಟ್ಟೆ ನೋವಿನ ಔಷಧಿವೆಂದು ಭಾವಿಸಿ ಕೀಟನಾಶಕ ಕುಡಿದು ಸಾವನ್ನಪ್ಪಿದ್ದಾನೆ.ಲಿಂಗಾಪುರ ಗ್ರಾಮದ ಶರತ್ (20) ಮೃತಪಟ್ಟ ಯುವಕನಾಗಿದ್ದು, ಕೆಲ ವರ್ಷಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದನು. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಸ್ಪಂದಿಸದೇ ಮೃತಪಟ್ಟಿದ್ದಾನೆ. ಈ ಬಗ್ಗೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.