ಕಿ.ನಾ.ವಿ. ಸಂಘದ ಚುನಾವಣೆ: ಆಯ್ಕೆ


ಚನ್ನಮ್ಮನ ಕಿತ್ತೂರ,ಫೆ.28: ಸ್ಥಳೀಯ ಕಿತ್ತೂರ ನಾಡ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿಗೆ ಗೌರವ ಕಾರ್ಯದರ್ಶಿ ಒಳಗೊಂಡಂತೆ ಒಟ್ಟು 10 ಸದಸ್ಯರ ಸ್ಥಾನಕ್ಕೆ ಚುನಾವಣೆ ಜರುಗಿತು. ಮುಖಂಡರಾದ ರಾಜೇಂದ್ರ ಅಂಕಲಗಿ ಹಾಗೂ ಜಗದೀಶ ವಸ್ತ್ರದ ಪೆನಲ್ ಜಯಗಳಿಸಿತು.
10 ಸದಸ್ಯರ ಸ್ಥಾನಕ್ಕೆ ಪಡೆದ ಮತಗಳು ನಿಂಗಪ್ಪ ತಡಕೋಡ 116, ಮೌಳೇಶ್ವರ ದಳವಾಯಿ 115, ಶಂಕರ(ಬಾಬು) ಒಳಸಂಗ 112, ವಿಶ್ವನಾಥ ಶೆಟ್ಟರ 113, ಜಗದೀಶ ವಸ್ತ್ರದ 105, ಜಗದೀಶ ಗಟನಟ್ಟಿ 110, ಉಮಾಕಾಂತ ಭಾರತಿ 110, ನಿಜಲಿಂಗಯ್ಯಾ ಹಿರೇಮಠ 99, ವಿರುಪಾಕ್ಷಗೌಡ ಪಾಟೀಲ 94, ದೊಡ್ಡಗೌಡ ಪಾಟೀಲ 95, ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಜಗದೀಶ ಬಿಕ್ಕಣ್ಣವರ 88 ಚುನಾಯಿತರಾದರು. ಚುನಾವಣಾಧಿಕಾರಿಯಾಗಿ ಪ್ರೌ. ಜಿ.ಕೆ.ಭುಮನಗೌಡರ, ಮಹೇಶ ಚನ್ನಂಗಿ ಮತಗಟ್ಟೆಯ ಅಧಿಕಾರಿ ಮಲ್ಲಿಕಾರ್ಜುನ ಕದಂಬ ಇತರರು ಕಾರ್ಯನಿರ್ವಹಿಸಿದರು. ಈ ವೇಳೆ ಕೆಪಿಸಿಸಿ ಸದಸ್ಯ ಶಂಕರ ಹೊಳಿ ಸೇರಿದಂತೆ ಹಲವರಿದ್ದರು.