ಕಿಸಿ ಕಾ ಭಾಯಿ ಕಿಸಿ ಕಿ ಜಾನ್ ಫಿಲ್ಮ್ ನ ಟ್ರೇಲರ್‌ನಲ್ಲಿ ಪಾಲಕ್ ತಿವಾರಿ ಅನುಪಸ್ಥಿತಿ: “ಇದು ಸಲ್ಮಾನ್ ಅವರ ಫಿಲ್ಮ್ ಎಂದು ಮೊದಲೇ ಗೊತ್ತಿತ್ತಲ್ಲ ನನಗೆ”

ಕಿರುತೆರೆ ನಟಿ ಶ್ವೇತಾ ತಿವಾರಿ ಅವರ ಪುತ್ರಿ ಪಾಲಕ್ ತಿವಾರಿ ಅವರು ಸಲ್ಮಾನ್ ಖಾನ್ ಅವರ ’ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಫಿಲ್ಮ್ ನ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ. ಈ ನಡುವೆ ಸಂದರ್ಶನವೊಂದರಲ್ಲಿ, ಪ್ರಾಜೆಕ್ಟ್‌ಗೆ ಸಹಿ ಹಾಕುವ ಮೊದಲೇ, ಯಾರೂ ತನ್ನನ್ನು ದೊಡ್ಡ ಪರದೆಯ ಮೇಲೆ ನೋಡಲು ಬರುತ್ತಿಲ್ಲ ಎಂದು ತಿಳಿದಿತ್ತು ಎಂಬ ಸಂಗತಿಯನ್ನೂ ಪಾಲಕ್ ಬಹಿರಂಗಪಡಿಸಿದ್ದಾರೆ. “ಇದು ಸಲ್ಮಾನ್ ಅವರ ಸಿನಿಮಾ ಎಂಬ ಭಾವನೆ ಸದಾ ನನ್ನಲ್ಲಿತ್ತು” ಎಂದು ಪಾಲಕ್ ಸ್ಪಷ್ಟೀಕರಣ ಹೇಳಿದ್ದಾರೆ.
ಈ ಫಿಲ್ಮ್ ನ ಭಾಗವಾಗಿರುವುದಕ್ಕೆ ನನಗೆ ತುಂಬಾ ಖುಷಿಯಾಗಿದೆ:
ಸಂದರ್ಶನದಲ್ಲಿ ಪಾಲಕ್ ತಿವಾರಿ ಅವರನ್ನು ಕಿಸಿ ಕಾ ಭಾಯಿ ಕಿಸಿ ಕಿ ಜಾನ್‌ನ ಟ್ರೇಲರ್‌ನಲ್ಲಿ ಅವರ ಅನುಪಸ್ಥಿತಿ ಇರುವುದರ ಬಗ್ಗೆ ಮತ್ತು ಅದು ನಿಮ್ಮನ್ನು ಕಾಡುತ್ತಿದೆಯೇ? ಎಂದು ಕೇಳಲಾಯಿತು.


ಈ ಬಗ್ಗೆ ಪಾಲಕ್ ಹೇಳಿದರು-
’ಈ ಫಿಲ್ಮ್ ನ ಭಾಗವಾಗಲು ನನಗೆ ತುಂಬಾ ಸಂತೋಷವಾಗಿದೆ .ಆದರೆ ಅದೇ ಸಮಯದಲ್ಲಿ ನನ್ನನ್ನು ನೋಡಲು ಯಾರೂ ಬರುತ್ತಿಲ್ಲ ಎಂದೂ ಕೂಡಾ ನನಗೆ ತಿಳಿದಿತ್ತು. ನಾನು ಫಿಲ್ಮ್ ನಲ್ಲಿ ಇದ್ದೇನೋ ಇಲ್ಲವೋ ಎಂಬುದು ಮುಖ್ಯವಲ್ಲ. ಇದು ಸಲ್ಮಾನ್ ಖಾನ್ ಅವರ ಸಿನಿಮಾ ಆಗಿದೆ”.
ಪಾಲಕ್ ಮತ್ತಷ್ಟು ಹೇಳಿದರು-
ಇದು ಸಲ್ಮಾನ್ ಖಾನ್ ಅವರ ಫಿಲ್ಮ್ .ನಿಜ ಹೇಳಬೇಕೆಂದರೆ ಈ ಫಿಲ್ಮ್ ನಲ್ಲಿ ನಾವು ಪಾತ್ರಗಳಿಗೆ ಹೊಂದಿಕೊಂಡಿದ್ದೇವೆ. ಫಿಲ್ಮ್ ನಲ್ಲಿ ಹೇಗೆ ನಿಲ್ಲಬೇಕು ಎಂದು ಯೋಚಿಸದೆಯೇ ಇದರಲ್ಲಿ ನನ್ನ ಕೊಡುಗೆಯನ್ನು ಯಾವ ರೀತಿ ನೀಡಬಹುದು ಎಂದಷ್ಟೇ ಬಯಸಿದ್ದೇನೆ.” ಎಂದರು.
ಸಲ್ಮಾನ್ ಡ್ರೆಸ್ ನಿಯಮದ ಹೇಳಿಕೆಗೆ ಪಾಲಕ್ ಸ್ಪಷ್ಟನೆ ನೀಡಿದ್ದಾರೆ:
ಪಾಲಕ್ ಅವರು ಸಲ್ಮಾನ್ ಖಾನ್ ಅವರ ಚಲನಚಿತ್ರಗಳ ಸೆಟ್‌ಗಳಲ್ಲಿ ಹುಡುಗಿಯರು ಆಳವಾದ ನೆಕ್‌ಲೈನ್ ಹೊಂದಿರುವ ಉಡುಗೆಗಳನ್ನು ಧರಿಸಲು ಅನುಮತಿಸುವುದಿಲ್ಲ ಎಂದು ಹೇಳಿದ್ದರು. ಇದಕ್ಕೆ ಸಲ್ಮಾನ್ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆಗೆ ಪಾಲಕ್ ಸಾಕಷ್ಟು ಟ್ರೋಲ್ ಆಗಿದ್ದರು.
ಅನಂತರ ಪಾಲಕ್ ಈ ಬಗ್ಗೆ ಸ್ಪಷ್ಟಪಡಿಸಿದ್ದರು – ’ಜನರು ಈ ವಿಷಯವನ್ನು ತಮ್ಮದೇ ಆದ ರೀತಿಯಲ್ಲಿ ತೆಗೆದುಕೊಂಡಿದ್ದಾರೆ. ನನ್ನ ಹಿರಿಯರ ಮುಂದೆ ಹೇಗೆ ಡ್ರೆಸ್ ಮಾಡಬೇಕೆಂಬುದರ ಬಗ್ಗೆ ನಾನು ಕೆಲವು ನಿಯಮಗಳನ್ನು ಮಾಡಿದ್ದೇನೆ ಎಂದು ಹೇಳಲು ಬಯಸುತ್ತೇನೆ. ನಾನು ಈ ಜನರನ್ನು ನೋಡುತ್ತಾ ಬೆಳೆದಿದ್ದೇನೆ, ಅವರು ನನ್ನ ಆರಾಧ್ಯ ದೈವಗಳು. ಅವರಲ್ಲಿ ಸಲ್ಮಾನ್ ಖಾನ್ ಕೂಡ ಒಬ್ಬರು” ಎಂದು ತಿದ್ದಿದರು.
ಈ ಹೇಳಿಕೆಯಿಂದಾಗಿ ಪಾಲಕ್ ಟ್ರೋಲರ್ ಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ:
ಪಾಲಕ್ ತಿವಾರಿ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು – ನಾನು ಸಲ್ಮಾನ್ ಖಾನ್ ಅವರ ಲಾಸ್ಟ್ ಫಿಲ್ಮ್ ನಲ್ಲಿ ಸಹಾಯಕ ನಿರ್ದೇಶಕಳಾಗಿದ್ದೆ. ಇದು ಅನೇಕರಿಗೆ ತಿಳಿದಿಲ್ಲ ಎಂದು ನಾನು ಭಾವಿಸುತ್ತೇನೆ, ಆದರೆ ಸಲ್ಮಾನ್ ಸರ್ ನನ್ನ ಸೆಟ್‌ಗಳಲ್ಲಿ ಹುಡುಗಿಯರು ಡೀಪ್ ನೆಕ್‌ಲೈನ್ ಹೊಂದಿರಬಾರದು ಎಂಬ ನಿಯಮವಿದೆ. ಎಲ್ಲಾ ಹುಡುಗಿಯರು ಚೆನ್ನಾಗಿ ಮೈ ಮುಚ್ಚಬೇಕು ಎಂದಿದ್ದರು.
ಪಾಲಕ್ ಮುಂದುವರಿದು ಹೇಳಿದರು- ’ನಾನು ಸಂಪೂರ್ಣವಾಗಿ ಶರ್ಟ್-ಜೋಗರ್ ಧರಿಸಿ ಸೆಟ್‌ಗೆ ಹೋಗುತ್ತಿರುವುದನ್ನು ನನ್ನ ತಾಯಿ ನೋಡಿದಾಗ, ನೀವು ಇಷ್ಟು ಚೆನ್ನಾಗಿ ಬಟ್ಟೆ ಧರಿಸಿ ಎಲ್ಲಿಗೆ ಹೋಗುತ್ತಿದ್ದೀರಿ ಎಂದು ಕೇಳಿದ್ದರು. ಆಗ ನಾನು “ಸಲ್ಮಾನ್ ಸರ್ ಅವರ ಸೆಟ್ ಗೆ ಹೋಗುತ್ತಿದ್ದೇನೆ” ಅಂದೆ. ತಾಯಿ ಹೇಳಿದರು- ವಾವ್ ಒಳ್ಳೆಯ ಹುಡುಗಿ.
ಸಲ್ಮಾನ್ ನ ಈ ನಿಯಮಕ್ಕೆ ಕಾರಣವನ್ನು ಪಾಲಕ್ ಹೇಳಿದ್ದಾರೆ. ಅಂದರೆ – ಅವರು ಸಂಪ್ರದಾಯವಾದಿ. ನೀವು ಏನು ಧರಿಸಲು ಬಯಸುತ್ತೀರೋ ಅದನ್ನು ಧರಿಸಿ ಎಂದು ಅವರು ಹೇಳುತ್ತಾರೆ, ಆದರೆ ಅವರೊಂದಿಗೆ ಕೆಲಸ ಮಾಡುವ ಹುಡುಗಿಯರು ಸುರಕ್ಷಿತವಾಗಿರಬೇಕು ಎಂದು ಅವರು ಯಾವಾಗಲೂ ಭಾವಿಸುತ್ತಾರೆ” ಎಂದರು.

ಉರ್ಫಿ ಜಾವೇದ್‌ಗೆ ಹತ್ಯೆಯ ಬೆದರಿಕೆಯಂತೆ!

ನಟಿ ಉರ್ಫಿ ಜಾವೇದ್ ಉದ್ಯಮದಲ್ಲಿ ಬಹಳ ಜನಪ್ರಿಯ ನಟಿ. ಆಕೆ ಜನಪ್ರಿಯವಾಗಿದ್ದರೂ ಅದು ಅವರ ನಟನೆಯಿಂದಲ್ಲ, ಬದಲಿಗೆ ಅವರ ಡ್ರೆಸ್ಸಿಂಗ್ ಶೈಲಿಯಿಂದ. ಉರ್ಫಿ ಜಾವೇದ್ ಇಂದು ಉದ್ಯಮದಲ್ಲಿ ಚಿರಪರಿಚಿತ ಹೆಸರಾಗಿದ್ದಾರೆ. ಕಿರುತೆರೆಯಿಂದ ಬಾಲಿವುಡ್‌ವರೆಗೆ ಉರ್ಫಿ ಜಾವೇದ್‌ರ ಪರಿಚಯವಿಲ್ಲದವರೇ ಇಲ್ಲ ಎನ್ನಬಹುದೇನೋ.
ಅಂತಹ ಉರ್ಫಿ ಜಾವೇದ್‌ಗೆ ಇದೀಗ ಜೀವ ಬೆದರಿಕೆ ಬಂದಿದೆಯಂತೆ.


ವಾಸ್ತವವಾಗಿ, ಉರ್ಫಿ ಜಾವೇದ್ ಯಾವುದೇ ಶೈಲಿಯ ಡ್ರೆಸ್ ಹೊಂದಿದ್ದರೂ ಅದು ಚರ್ಚೆಯ ವಿಷಯವಾಗುತ್ತದೆ. ಎಲ್ಲರೂ ಉರ್ಫಿ ಜಾವೇದ್ ರನ್ನು ಟ್ರೋಲ್ ಮಾಡಲು ಪ್ರಾರಂಭಿಸುತ್ತಾರೆ. ಅಷ್ಟೇ ಅಲ್ಲ, ಉರ್ಫಿ ಜಾವೇದ್ ವಿರುದ್ಧ ಹಲವು ಬಾರಿ ದೂರುಗಳು ಕೂಡ ದಾಖಲಾಗಿವೆ. ಉರ್ಫಿ ತನ್ನ ದಿಟ್ಟ ಅವತಾರದಿಂದ ಆಗಾಗ್ಗೆ ಸುದ್ದಿಯ ನಡುವೆ ಮುಳುಗಿ ಹೋಗುತ್ತಾರೆ. ಅಂಥದ್ದೇ ಒಂದು ಘಟನೆ ಮತ್ತೊಮ್ಮೆ ನಡೆದಿದೆ.
ಯಾರೋ ಉರ್ಫಿ ಜಾವೇದ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರಂತೆ, ಇದನ್ನು ಸ್ವತಃ ಉರ್ಫಿ ಜಾವೇದ್ ಬಹಿರಂಗಪಡಿಸಿದ್ದಾರೆ. ಅಪರಿಚಿತ ಕರೆ ಮಾಡಿದವರಿಂದ ತನಗೆ ಕೊಲೆ ಬೆದರಿಕೆ ಇದೆ ಎಂದು ಉರ್ಫಿ ಜಾವೇದ್ ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗಪಡಿಸಿದ್ದಾರೆ. ಬಳಿಕ ಉರ್ಫಿ ಜಾವೇದ್ ಪೊಲೀಸರಿಗೂ ದೂರು ನೀಡಿದ್ದಾರೆ.
ನಟಿಗೆ ಕೊಲೆ ಬೆದರಿಕೆ ಹಾಕಿದ್ದಾರೆ:
ಈ ಬಗ್ಗೆ ಉರ್ಫಿ ಜಾವೇದ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿ ಮೂಲಕ ತಿಳಿಸಿದ್ದಾರೆ. ತನಗೆ ಕೊಲೆ ಬೆದರಿಕೆಗಳು ಬಂದಿದ್ದವು ಎಂದು ಕಥೆಯ ಮೂಲಕ ಹೇಳಿಕೊಂಡಿದ್ದಾರೆ.
ನಟಿ ಬರೆದಿದ್ದಾರೆ- ’ನನ್ನ ಜೀವನದ ಇನ್ನೊಂದು ದಿನ. ಇನ್ನೊಂದು ಬಾರಿ ನನಗೆ ಬೆದರಿಕೆಯನ್ನು ಹಾಕಲಾಗಿದೆ. ಅನಾರೋಗ್ಯದ ಸಂದರ್ಭದಲ್ಲೂ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದೇನೆ. ಆತನ ಬಳಿ ನನ್ನ ಕಾರಿನ ನಂಬರ್ ಇದ್ದು, ಆ ವ್ಯಕ್ತಿ ನನಗೆ ಕೊಲೆ ಬೆದರಿಕೆ ಹಾಕುತ್ತಿದ್ದಾನೆ” ಎಂದಿದ್ದಾರೆ.
ಇದರ ನಂತರ, ಮುಂದಿನ ಕಥೆಯಲ್ಲಿ ಉರ್ಫಿ ಜಾವೇದ್ ಹೀಗೆ ಬರೆದಿದ್ದಾರೆ- ”ಯಾರೋ ನೀರಜ್ ಪಾಂಡೆ ಅವರ ಕಚೇರಿಯಿಂದ ನನಗೆ ಕರೆ ಮಾಡಿದರು, ಆತ ಅವರ ಸಹಾಯಕ ಮತ್ತು “ಸರ್ ನನ್ನನ್ನು ಭೇಟಿಯಾಗಲು ಬಯಸುತ್ತಾರೆ” ಎಂದು ಹೇಳಿದ್ದರು.ಆದರೆ ”ಅದಕ್ಕಾಗಿ ನಾನು ಪ್ರಾಜೆಕ್ಟ್ ನ ಮೊದಲು ಯೋಜನೆಗಳ ಎಲ್ಲಾ ವಿವರಗಳನ್ನು ತಿಳಿದುಕೊಳ್ಳಬೇಕು” ಎಂದು ಹೇಳಿದ್ದೆ. ಇದರಿಂದ ಆ ಸಹಾಯಕ ನಿಜವಾಗಿಯೂ ಕೋಪಗೊಂಡನು ಕಾಣುತ್ತೆ. ಮತ್ತು ನೀರಜ್ ಪಾಂಡೆಯನ್ನು ಅವಮಾನಿಸಲು ನಿಮಗೆ ಎಷ್ಟು ಧೈರ್ಯವಿದೆ? ಎಂದು ಕೋಪದಿಂದ ಹೇಳಿದರು.ಆತನಿಗೆ ನನ್ನ ಕಾರಿನ ನಂಬರ್ ಮತ್ತು ಎಲ್ಲವೂ ತಿಳಿದಿದೆ ಮತ್ತು ನಾನು ಧರಿಸುವ ಬಟ್ಟೆಗಾಗಿ ನನ್ನನ್ನು ಹೊಡೆದು ಸಾಯಿಸಬೇಕು ಎಂದೂ ಹೇಳಿದ್ದಾನೆ. ಸರಿಯಾದ ವಿವರಗಳಿಲ್ಲದೆ ನಾನು ಪ್ರಾಜೆಕ್ಟ್ ನ ಮೀಟಿಂಗ್ ಗೆ ಹಾಜರಾಗಲು ನಿರಾಕರಿಸಿದ್ದರಿಂದ ಅವರು ಇಷ್ಟೆಲ್ಲ ಬೆದರಿಕೆ ಹೇಳಿದ್ದಿರಬಹುದು ಎನ್ನುತ್ತಾರೆ ಉರ್ಫಿ.