ಕಿಸಾನ್ ಕಾಂಗ್ರೆಸ್ ನಿಂದ ಚನ್ನಗಿರಿಗೆ ಉಚಿತ ಆಂಬ್ಯೂಲೆನ್ಸ್

ದಾವಣಗೆರೆ.ಜೂ.೭; ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜು ವಿ ಶಿವಗಂಗಾ _ ಅವರು ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿ ಮುಂಭಾಗದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರಿಂದ ಚನ್ನಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ 3 ಉಚಿತ ಅಂಬ್ಯುಲೆನ್ಸ್ ಹಾಗೂ ರೈತರಿಂದ ಖರೀದಿ ಮಾಡಿದ ತರಕಾರಿ ವಿತರಣೆ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು. ಬಸವರಾಜು ವಿ ಶಿವಗಂಗಾ ರವರು ಕೋವಿಡ್ ಹಿನ್ನೆಲೆ ಚನ್ನಗಿರಿ ಕ್ಷೇತ್ರ ದ ಜನತೆಗೆ ಅನುಕೂಲವಾಗಲೆಂದು ಉಚಿತ ಅಂಬ್ಯುಲೆನ್ಸ್ ಬಿಡಲಾಗಿದ್ದು ಇದರ ಉಪಯೋಗವನ್ನ ಜನರು ಪಡೆದುಕೊಳ್ಳಬೇಕಿದೆ. 9141100999  ನಂಬರ್ ಕಿಸಾನ್ ಕಾಂಗ್ರೆಸ್ ರೈತ ಆರೋಗ್ಯ ಸಂಜೀವಿನಿ ಗೆ ಸಾರ್ವಜನಿಕರು ಕರೆ ಮಾಡಬಹುದಾಗಿದೆ ಎಂದು ತಿಳಿಸಲಾಯಿತು. ಈ ಸಂದರ್ಭದಲ್ಲಿ ಕಿಸಾನ್ ಕಾಂಗ್ರೆಸ್ ರಾಜ್ಯಧ್ಯಕ್ಷರಾದ ಸಚಿನ್ ಮಿಗಾ, ಉಪಾಧ್ಯಕ್ಷರಾದ ಮಂಜುನಾಥ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.