‘ಕಿಸಾನ್’ ಕಲಾಕೃತಿಗೆ ಸ್ವರ್ಣ ಪದಕ ಪಡೆದ ಹಾಜಿ ಮಲಂಗ

ಕಲಬುರಗಿ:ನ.7:ನಗರದ ಚಿತ್ರಕಲಾವಿದರಾದ ಹಾಜಿ ಮಲಂಗ ಅವರಿಗೆ ಉತ್ತರ ಪ್ರದೇಶದ ಭೋರ ಬೈರೇಲಿಯ ಜ್ಯೋತಿ ಪೈನ್ ಆರ್ಟ್ ಸಂಸ್ಥೆ ಆಯೋಜಿಸಿದ ಪ್ರಸ್ತಕ ಸಾಲಿನ ಆನ್‍ಲೈನ್ ರಾಷ್ಟ್ರೀಯ ಚಿತ್ರಕಲಾ ಸ್ಪರ್ಧೆಯಲ್ಲಿ ಇವರ ರಚಿತ ‘ಕಿಸಾನ್’ ಎಂಬ ಶೀರ್ಷಿಕೆಯ ಕಲಾಕೃತಿಗೆ ಸ್ವರ್ಣ ಪದಕ ಲಭಿಸಿದೆ.

‘ಕಿಸಾನ್’ ಶೀರ್ಷಿಕೆಯ ಕಲಾಕೃತಿ ಮೂಲ ಪ್ರೇರಣೆ ಎಂದರೆ ಪ್ರಸ್ತುತ ರೈತರು ಅನುಭವಿಸುತ್ತಿರುವ ಅನೇಕ ಸಮಸ್ಯೆಗಳ ಸಂಕೋಲೆಯಲ್ಲಿ ನರಳುತ್ತಾ ಇರುವುದು. ಆಧುನಿಕತೆಯಿಂದ ರೈತರು ಬಿಡುಗಡೆ ಹೊಂದಬೇಕಾಗಿರುವುದು ತೀರಾ ಅವಶ್ಯಕವಾಗಿದೆ ರೈತರು ದೇಶದ ಬೆನ್ನೆಲುಬು ಅವರ ರಕ್ಷಣೆ ಮುಖ್ಯ ಧ್ಯೇಯವಾಗಬೇಕೆಂದು ಕಲಾವಿದ ಹಾಜಿ ಮಲಂಗರು ಅಭಿಪ್ರಾಯ ಪಡುತ್ತಾರೆ. ಇದು ಇಂದಿನ ತಾಂತ್ರಿಕಯುಗದಲ್ಲಿ ರೈತರನ್ನು ಕಾಡುತ್ತಿರುವ ಮೂಲಭೂತ ಸಮಸ್ಯೆಗಳನ್ನು ಹಾಗೂ ಯಂತ್ರಗಳ ಕಾಟವನ್ನು ಅತ್ಯಂತ ಪರಿಣಾಮಕಾರಿಯಾಗಿ ಕಲಾಕೃತಿಯಲ್ಲಿ ರಚಿಸಿರುವ ಹಾಜಿ ಮಲಂಗ ಅವರು ರೈತರ ಸಮಸ್ಯೆಯನ್ನು ಪ್ರತಿಬಿಂಬಿಸಿದ್ದಾರೆ. ರೈತರ ಬವಣೆಯನ್ನು ಅತ್ಯಂತ ಸೂಕ್ಷ್ಮವಾಗಿ, ಕಲಾತ್ಮಕವಾಗಿ ರಚಿಸಿರುವುದರಿಂದ ಅವರ ಕಲಾಕೃತಿಗೆ ಸ್ವರ್ಣ ಪದಕ ಲಭಿಸಿದೆ.

ಹಾಜಿ ಮಲಂಗರ ಕಲಾ ಕುಂಚದಿಂದ ಅನೇಕ ಕಲಾಕೃತಿಗಳು ಇದೇ ರೀತಿ ಉತ್ತಮವಾದ ಸಂದೇಶವನ್ನು ಸಾರುತ್ತವೆ. ಅವು ಎಂದಿಗೂ ಸ್ಮರಣೀಯವಾಗಿಸುತ್ತವೆ. ತಮ್ಮ ಕಲಾಸೇವೆಯಿಂದ ಅನೇಕ ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದಿರುವ ಹಾಜಿ ಮಂಲಗರು ಸಂದರ್ಭಕ್ಕೆ ಅನುಸಾರವಾಗಿ ಗಂಭೀರ ಹಾಗೂ ಸೂಕ್ಷ್ಮ ರೀತಿಯಲ್ಲಿ ಕಲಾಕೃತಿಗಳ ಮೂಲಕ ಜನಮನ ಸೆಳೆಯುತ್ತಿರುವುದು ಈ ಸಂದರ್ಭದಲ್ಲಿ ನೆನಪಿಸಬಹುದು.