ಕಿಷ್ಕಿಂದೆಯ ಪ್ರದೇಶ ಅಧ್ಯಯನಕ್ಕೆ ಮಧ್ಯಪ್ರದೇಶದ ತಂಡ


ಸಂಜೆವಾಣಿ ವಾರ್ತೆ
ಹೊಸಪೇಟೆ ಜ25: ಅಯೋಧ್ಯೆ ಮತ್ತು ಕಿಷ್ಕಿಂದೆಯ ನಡುವೆ ಅವಿನಾಭಾವ ಸಂಬಂದ ಇರೋದು ಎಲ್ಲರಿಗೂ ತಿಳಿದ ವಿಚಾರವೇ..ಅಯೋಧ್ಯೆಯಲ್ಲಿ ಪ್ರಾಣಪ್ರತಿಷ್ಠಾಪನೆಯ ನಂತರ ಅಲ್ಲಿಯ ತಂಡ ಹನುಮನ ನಾಡು ಕಿಷ್ಕಿಂದೆಯ ಪ್ರದೇಶದಲ್ಲಿ ಅಧ್ಯಯನ ನಡೆಸಲು ಹಾಗೂ ಈ ನೆಲದಲ್ಲಿ ಸಂವಾದ ನಡೆಸಲು ಆಗಮಿಸಿದೆ.
ಹಂಪಿಯ ಮಾಲ್ಯವಂತ ಪ್ರದೇಶದಲ್ಲಿ ಪರಿಸರ ವೀಕ್ಷಣೆ ಹಾಗೂ ಇಂದು ಸಂಜೆ 5 ಗಂಟೆಗೆ ಇತಿಹಾಸಗಾರರು, ಪುರಾಣ ತಜ್ಞರು, ಕ್ಷೇತ್ರ ಮಾಹಿತಿ ಉಳ್ಳ ವ್ಯಕ್ತಿಗಳೊಂದಿಗೆ ಅಯೋಧ್ಯೆಯ ತಂಡ ತಮ್ಮ ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ರಮದ ಮಾಹಿತಿ ಹಂಚಿಕೊಳ್ಳಲಿದ್ದಾರೆ. ಮಾಲ್ಯವಂತದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುವಂತೆ ಆಯೋಜಕರು ಕೋರಿದ್ದಾರೆ.