ಸಂಜೆವಾಣಿ ವಾರ್ತೆ
ಗಂಗಾವತಿ, ಜೂ.29: ನೂತನ ಕಿಷ್ಕಿಂದಾ (ಗಂಗಾವತಿ) ಜಿಲ್ಲೆಯನ್ನಾಗಿ ಮಾಡಬೇಕು ಎಂದು ಸಮಾನ ಮನಸ್ಕರರು ನೇತೃತ್ವದಲ್ಲಿ ಕಿಷ್ಕಿಂದಾ (ಗಂಗಾವತಿ) ಜಿಲ್ಲೆ ಹೋರಾಟ ಸಮಿತಿಯನ್ನು ಅಸ್ತಿತ್ಕ್ಕೆ ತರಲಾಗಿದ್ದು, ಜುಲೈ 1 ರಂದು ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದು ಎಚ್.ಎಂ ಮಂಜುನಾಥ ಹೇಳಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ನೂತನ ಕಿಷ್ಕಿಂದಾ (ಗಂಗಾವತಿ) ಜಿಲ್ಲೆಯನ್ನಾಗಿ ಮಾಡಬೇಕು ಎನ್ನುವ ಉದ್ದೇಶ ಹಿನ್ನಲೆ ಹಮ್ಮಿಕೊಂಡಿದ್ದ ಸಭೆಯಲ್ಲಿ ತಿರ್ಮಾನಿಸಲಾಯಿತು.
ಶನಿವಾರ ಸಂಜೆ ವೇಳೆಗೆ ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಈ ಸಭೆಯನ್ನು ಹಮ್ಮಿಕೊಂಡಿದ್ದು, ಎಲ್ಲಾ ಸಂಘ ಸಂಸ್ಥೆಯ ಪದಾಧಿಕಾರಿಗಳು, ಸಮಾನ ಮನಸ್ಕರ ಈ ಸಭೆಯಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯ ತಿಳಿಸಬೇಕು ಎಂದರು.
ಗಂಗಾವತಿಯನ್ನು ಕೇಂದ್ರವನ್ನಾಗಿ ಇಟ್ಟುಕೊಂಡು ಕಂಪ್ಲಿ, ಕಾರಟಗಿ, ಕನಕಗಿರಿ, ಸಿಂಧನೂರು ತಾಲೂಕು ಒಳಗೊಂಡಂತೆ ನೂತನ ಕಿಷ್ಕಿಂದಾ ರಚನೆಯನ್ನು ಪ್ರಸ್ತಾಪಿಸಿ ಅಭಿಪ್ರಾಯ ಸಂಗ್ರಹಿಸಿ ಹೋರಾಟದ ಬಗ್ಗೆ ಚರ್ಚಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಸಮಾನಮನಸ್ಕರಾದ ಪ್ರಾಣೇಶ್ ಬಿಚಿ, ಅಶೋಕ್ ಸ್ವಾಮಿ ಹೆರೂರ್ , ದೇವೇಂದ್ರಪ್ಪ ಜಾಜಿ , ಶೈಲಜಾ ಎಚ್ ಎಂ, ವಿ ಎನ್ ಪಾಟೀಲ್ , ರಮೇಶ್ ಗಬ್ಬುರ್, ಸದಾನಂದ ಶೇಟ್, ಪವನ್ ಗುಂಡೂರ್, ಶಿವಕುಮಾರ್ ಮಾಲಿಪಾಟೀಲ್ ,ಅಮರೇಶ್ ಪಾಟೀಲ್, ಮಂಜುನಾಥ ಕಟ್ಟಿಮನಿ, ರಘುನಾಥ ಪವಾರ ಸೇರಿದಂತೆ ಅನೇಕರು ಇದ್ದರು.