ಕಿಷ್ಕಿಂದಾ ಅಂಜನಾದ್ರಿಯೇ ಹನುಮಂತ ಜನಿಸಿದ ಸ್ಥಳ

ಗಂಗಾವತಿ, ಏ.23: ಕಿಷ್ಕಿಂದಾ ಅಂಜನಾದ್ರಿ ಹನುಮಂತ ಜನಿಸಿದ ಸ್ಥಳವಾಗಿದೆ. ವಾಲ್ಮೀಕಿ , ರಾಮಾಯಣ‌ ಸೇರಿ ಹಲವು ದಾಖಲೆ ಇವೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ಆಂಧ್ರಪ್ರದೇಶದ ತಿರುಪತಿಯಲ್ಲಿ ಆಂಜನೇಯ ಹುಟ್ಟಿದ್ದಾನೆ ಎಂದು ಅಲ್ಲಿಯ ಟಿಡಿಬಿ ಹೇಳಿಕೆ ನೀಡಿದ ಹಿನ್ನೆಲೆ ನಗರದ ಶಾಸಕರ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅಗತ್ಯ ದಾಖಲೆ ಬಿಡುಗಡೆ ಮಾಡಿ ಅವರು ಮಾತನಾಡಿದರು.
ವಿಜಯ ನಗರ ಸಾಮ್ರಾಜ್ಯದ ರಾಜಧಾನಿ ಆನೆಗೊಂದಿಯ ಕಿಷ್ಕಿಂದಾ ಅಂಜನಾದ್ರಿ ಪರ್ವತವನ್ನು ಹನುಮ ಜನ್ಮಸ್ಥಳ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಉಲ್ಲೇಖ ಇದೆ. ಸಾವಿರಾರು ವರ್ಷಗಳ ಹಿಂದೆ ಬರೆದ ಶ್ರೀ ಮಹರ್ಷಿ ವಾಲ್ಮೀಕಿ ರಾಮಾಯಣದಲ್ಲಿ ಹನುಮ ಜನಿಸಿದ ನಾಡು ಕಿಷ್ಕಿಂದಾ ಅಂಜನಾದ್ರಿ ಬೆಟ್ಟ. ಇದಕ್ಕೆ ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಮನವಿ ಮಾಡಿದರು.
ಇತಿಹಾಸ ತಜ್ಞ ,ಸಂಶೋದಕ ಡಾ.ಶರಣಬಸಪ್ಪ ಕೋಲ್ಕಾರ್ ಮಾತನಾಡಿ,ಟಿಡಿಬಿ ಅವರು ಸುಮ್ಮನೆ ಇತಿಹಾಸ ತಿರುಚಲು ಹೊರಟ್ಡಿದೆ.ಟಿಟಿಬಿ ಹೇಳಿಕೆ ಬಾಲಿಶತನದಿಂದ ಕೂಡಿದೆ ಎಂದರು.
ತಜ್ಞರ ಸಮಿತಿ ರಚಿಸಿ ಆಂಜನೇಯ ಜನ್ಮಸ್ಥಳ,ಕಿಷ್ಕಿಂದಾ ಗೆ ಸಂಬಂಧಿಸಿದಂತೆ ಅಧ್ಯಯನ ನಡೆಯಬೇಕಾಗಿದೆ. ಎಲ್ಲಾ ದಾಖಲೆ ಸಂಗ್ರಹಿಸಿ ಒಂದು ಸಂಶೋಧನಾತ್ಮಕ ಗ್ರಂಥ ರಚಿಸುವುದು ಅಗತ್ಯವಿದೆ. ಶಾಸಕ ಪರಣ್ಣ ಮುನವಳ್ಳಿ ಅವರು ಈ ಕುರಿತು ಗಮನ ನೀಡಿ ಸರ್ಕಾರದ ಮೇಲೆ ಒತ್ತಡ ಹೇರಿ ಶೀಘ್ರದಲ್ಲೇ ಸಮಿತಿ ರಚಿಸಬೇಕು ಎಂದು ಮನವಿ ಮಾಡಿದರಹ
ಸಾಹಿತಿ ಪವನ ಕುಮಾರ ಗುಂಡೂರು ಮಾತನಾಡಿ, ತಿರುಪತಿಯಲ್ಲಿ ಹನುಮ ಹುಟ್ಟಿದ್ದಾನೆ ಎಂಬ ಬಗ್ಗೆ ಟಿಟಿಬಿ ಹತ್ತಿರ ಅಗತ್ಯ ದಾಖಲೆ ಇಲ್ಲ ಎಂದರು.
ಈ ವೇಳೆ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಜಿ.ಪಂ. ಮಾಜಿ ಸದಸ್ಯ ಸಿದ್ದರಾಮಸ್ವಾಮಿ, ಪ್ರಮುಖರಾದ ಚನ್ನಪ್ಪ ಮಳಗಿ,ಕಾಶೀನಾಥ್ ಚಿತ್ರಗಾರ, ಸಂತೋಷ ಕೆಲೋಜಿ ಸೇರಿದಂತೆ ಇತರರಿದ್ದರು.