ಕಿಶೋರ್ ಕುಮಾರ್ ಹುಟ್ಟುಹಬ್ಬ ಆಚರಣೆ

ಕಲಬುರಗಿ ಆ 5: ನಗರದ ಮರಾಠಿ ಸಾಹಿತ್ಯ ಮಂಡಳ ಸಭಾಭವನದಲ್ಲಿ ಕಲಬುರಗಿಯ ಲೆಜೆಂಡ್ ಕಿಶೋರ್ ಕುಮಾರ್ ಫ್ಯಾನ್ಸ್ ಕ್ಲಬ್ ವತಿಯಿಂದ ಹಿನ್ನೆಲೆಗಾಯಕ ಕಿಶೋರ್ ಕುಮಾರ್ ಅವರು 93 ನೆಯ ಹುಟ್ಟುಹಬ್ಬ ಆಚರಿಸಲಾಯಿತು.
ಅತಿಥಿಗಳಾಗಿ ಸೂರಜ್ ತಿವಾರಿ, ಟ್ರಾಫಿಕ್ ಪಿಎಸ್‍ಐ ಭಾರತಿಬಾಯಿ ಧನ್ನಿ, ಎಂ.ಜಿ ಘನಾತೆ ,ಲಕ್ಷ್ಮೀಕಾಂತ ಮೈಲಾಪುರ ಅವರು ಆಗಮಿಸಿದ್ದರು.
ವಾಲ್ಮಿಕ ಕಾಂಬಳೆ,ರಮೇಶ ಜೋಶಿ,ರತ್ನಾಕರ ದೇಶಮುಖ,ಶಿವಾನಂದ ನಂದಿಮಠ,ರಮೇಶ ಮಯೂರ,ಅನಿರುದ್ಧ ದೇಶಮುಖ,ಸಂಜಯ ಮುರುಡಕರ್ ಅವರು ಕಿಶೋರ್ ಕುಮಾರ್ ಗೀತೆಗಳನ್ನು ಹಾಡಿದರು.ನಯೀಂ,ಮಾಲಾಶ್ರೀ,ಕಲ್ಪನಾ ಗೋಲ್ಡ್‍ಸ್ಮಿತ್ ಅವರು ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.