
ಅರಕೇರಾ,ಜು.೦೨-
ಗುಣಮಟ್ಟ ಆರೋಗ್ಯ ಮತ್ತು ಶಿಕ್ಷಣವನ್ನು ಕಿಶೋರಿಯರಿಗೆ ನೀಡುವ ಗುರಿ ಹೊಂದಿದ್ದೇವೆ ಎಂದು ಶೃತಿ ಸಂಸ್ಕೃತಿ ಸಂಸ್ಥೆ ತಾಲೂಕು ಅಧ್ಯಕ್ಷ ರಾಮಣ್ಣ ಎನ್ ಗಣೇಕಲ್ ಹೇಳಿದರು.
ತಾಲೂಕಿನ ಶಿವಂಗಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಶೃತಿ ಸಂಸ್ಕೃತಿ ಸಂಸ್ಥೆ ವತಿಯಿಂದ ಕಿಶೋರಿಯರ ಸಂಶೋಧನಾ ಕೇಂದ್ರವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
೧೧ ರಿಂದ ೧೮ ವರ್ಷದೊಳಗಿನ ಹೆಣ್ಣು ಮಕ್ಕಳನ್ನು ಕಿಶೋರಿಯರು ಎಂದು ಗುರ್ತಿಸಲಾಗುತ್ತದೆ. ದೈಹಿಕ, ಮಾನಸಿಕ ಸಾಮಾರ್ಥ್ಯದ ಬೆಳವಣಿಗೆ ಈ ವಯಸ್ಸಿನ ಮಕ್ಕಳಲ್ಲಿ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಾ ಇರುತ್ತದೆ. ಇಂತಹ ವಯಸ್ಕರ ಹೆಣ್ಣು ಮಕ್ಕಳ ಆರೋಗ್ಯ ಮತ್ತು ಶಿಕ್ಷಣದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಿದೆ. ಇದರಿಂದಾಗಿ ಶಿವಂಗಿ ಪ್ರೌಢ ಶಾಲೆ ಮತ್ತು ಜಾಗೀರ ಜಾಡಲದಿನ್ನಿ ಬಾಲಕಿಯರ ವಸತಿ ನಿಲಯದಲ್ಲಿನ ಕಿಶೋರಿಯರಿಗೆ ಒಂದಲ್ಲ ಒಂದು ಚಟುವಟಿಕೆಗಳನ್ನು ಹಾಕಿಕೊಳ್ಳುವ ಮೂಲಕ ಅವರ ಸಾಮರ್ಥ್ಯವನ್ನು ಹೆಚ್ಚಿಸುವ ಕೆಲಸ ಮಾಡುವುದಕ್ಕೆ ಸಂಪನ್ಮೂಲ ವ್ಯಕ್ತಿಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದರು.
ಬಳಿಕ ಸಿಆರ್‌ಪಿ ಶ್ರೀಶೈಲ ತಳವಾರ ಮಾತನಾಡಿ, ಶೃತಿ ಸಂಸ್ಕೃತಿ ಸಂಸ್ಥೆ ಶೈಕ್ಷಣಿಕ ಕ್ಷೇತ್ರಕ್ಕೆ ವಿವಿಧ ಕೊಡುಗೆಗಳನ್ನು ನೀಡುತ್ತಿದೆ. ಕೋವಿಡ್ ಸಂದರ್ಭದಲ್ಲಿ ಟ್ಯೂಷನ್ ತೆರೆಯುವ ಮೂಲಕ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ನೀಡಿದ್ದಾರೆ ಎಂದರು.
ಈ ವೇಳೆ ಸಿಆರ್‌ಪಿ ಶ್ರೀಶೈಲ ತಳವಾರ, ಮುಖ್ಯ ಶಿಕ್ಷಕರಾದ ಶಿವಜಾತಪ್ಪ, ಮಹಿಬೂಬ, ಎಸ್ಡಿಎಂಸಿ ಅಧ್ಯಕ್ಷರಾದ ಹನುಮಯ್ಯ ಪೆದ್ದ, ಶರಣಗೌಡ ಹಾಲಂ, ಸಹ ಶಿಕ್ಷಕರಾದ ರಂಗನಾಥ, ಯೋಗೇಶ, ವಿಜಯಕುಮಾರ, ಸಂಯೋಜಕಿ ವೀರಮ್ಮ ಅಗಳಕೇರಾ, ಅಂಗನವಾಡಿ ಕಾರ್ಯಕರ್ತೆ ರೇಣುಕಾ, ಸಂಪನ್ಮೂಲ ವ್ಯಕ್ತಿಗಳಾದ ರೇಣುಕಾ, ಸವಿತಾ ಇತರರಿದ್ದರು.