ಕಲಬುರಗಿ,ಜೂ.7-ಕಳೆದ 20 ವರ್ಷಗಳಿಂದ ಮಕ್ಕಳ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಮಾರ್ಗದರ್ಶಿ ಸಂಸ್ಥೆಯು ಶಾಲೆಯಿಂದ ಹೊರಗೆ ಉಳಿದ ಮಕ್ಕಳು, ಶಾಲೆಗೆ ಸತತವಾಗಿ ಗೈರು ಹಾಜರಿರುವ ಮಕ್ಕಳು, ಶಾಲೆ ಬಿಟ್ಟು ಹೋಗುವ ಮಕ್ಕಳು ಮತ್ತು ಶಾಲೆಗಳ ಉನ್ನತಿಕರಣ ಇಲ್ಲದಿರುವ ಮಕ್ಕಳು, ಶಾಲೆಯಿಂದ ವಂಚಿತರಾದ ಮಕ್ಕಳನ್ನು ಸಂಪರ್ಕಿಸಿ ಅವರ ಪಾಲಕರಿಗೆ ತಿಳುವಳಿಕೆ ನೀಡಿ ಮರಳಿ ಶಾಲೆಗೆ ಸೇರಿಸುವ ಕೆಲಸವನ್ನು ಮಾಡುತ್ತಿದೆ, ಅಂಥಹ ಮಕ್ಕಳಿಗೆ ಆಟದಿಂದ ಪಾಠದ ಕಡೆಗೆ ಗಮನ ಹರಿಸಲು ನಗರದ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಬೆಂಗಳೂರಿನ ಅಜೀಂ ಪ್ರೇಮಜಿ ಫೌಂಡೆಷನ್ ಸಹಯೋಗದಲ್ಲಿ 2023 ನೇ ಸಾಲಿನ ಕಿಶೋರಿಯರ ಒಲಿಂಪಿಕ್ ಆಯೋಜಿಸಲಾಗಿತ್ತು.
14 ರಿಂದ 17 ವರ್ಷದವರಿಗಾಗಿ ಖೋ ಖೋ, ಉದ್ದ ಜಿಗಿತ, 11 ರಿಂದ 13 ವರ್ಷದವರಿಗಾಗಿ 200 ಮಿ.ಟರ್ ಓಟ, ರಿಲೆ, ಕುರ್ಚಿ ಆಟ, ಹಗ್ಗದಾಟ, ನಿಂಬೆ ಹಣ್ಣು ಚಮವ ಆಟ ಆಯೋಜಿಸಲಾಗಿತ್ತು.
ಕ್ರೀಡಾಕೂಟವನ್ನು ಕಲಬುರಗಿ ದಕ್ಷಿಣ ವಲಯದ ತಾಲ್ಲೂಕ ದೈಹಿಕ ಶಿಕ್ಷರ್ಣಾಧಿಕಾರಿ ಶಿವಶರಣಪ್ಪ ಮಂಠಾಳೆ ಉದ್ಘಾಟಿಸಿದರು. ಮಾರ್ಗದರ್ಶಿ ಸಂಸ್ಥೆ ನಿರ್ದೇಶಕ ಆನಂದರಾಜ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ರಾಜು.ಎಮ್ ದೊಡ್ಡಮನಿ, ಕಲಬುರಗಿ ದಕ್ಷಿಣ ವಲಯದ ತಾಲ್ಲೂಕ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪುತ್ರ ಹೂಗಾರ, ಜಿಲ್ಲಾ ಸಂಯೋಜಕ ರಾಹುಲ ಮಾಳಗೆ, ಮಾರ್ಗದರ್ಶಿ ಸಂಸ್ಥೆ ಲೆಕ್ಕಾಧಿಕಾರಿ ಭಿಮರಾಯ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಅಜೀಂ ಪ್ರೇಮಜಿ ಫೌಂಡೇಶನ್ ವಿಭಾಗೀಯ ಅಧಿಕಾರಿ ಮಹದೇವಪ್ಪ ಅವರು ಆಗಮಿಸಿದ್ದರು. ಮಾರ್ಗದರ್ಶಿ ಸಂಸ್ಥೆ ಅಧ್ಯಕ್ಷ ಡಾ.ಮಲ್ಹಾರಾವ್ ಮಲ್ಲೆ ಅಧ್ಯಕ್ಷತೆ ವಹಿಸಿದ್ದರು. ಪಂದ್ಯಾವಳಿಗÀಳಲ್ಲಿ ವಿಜೇತರಾದವರಿಗೆ ಬಹುಮಾನವಾಗಿ, ಪ್ರಶಸ್ತಿ ಪತ್ರ ಹಾಗೂ ಶಿಲ್ಡಗಳನ್ನು ವಿತರಣೆಯನ್ನು ಮಾಡಲಾಯಿತು.
ಆನಂದರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಹುಲ್ ಮಾಳಗೆ ಸ್ವಾಗತಿಸಿದರು. ಆಶೋಕ ಕಾರ್ಯಕ್ರಮ ನಿರೂಪಿಸಿದರು. ಮಾರ್ಗದರ್ಶಿ ಸಂಸ್ಥೆಯ ಸಮೂದಾಯ ಸಂಘಟಕೀಯರಾದ ಜಯಮಾಲ ಯಶೋಧಾ, ಮರಳಮ್ಮ, ಕುಮಾರಿ ರತ್ನಾಬಾಯಿ, ವಿಜಯಲಕ್ಷ್ಮೀ, ಕು. ಮಲ್ಲಮ್ಮ ಕು. ಸುರೇಖಾ ಉಪಸ್ಥಿತರಿದ್ದರು. ಸುಮಾರು 40 ಹಳ್ಳಿಗಳಿಂದ 200 ಮಕ್ಕಳು ಭಾಗವಹಿಸಿದ್ದರು.