ಕಿಶೋರಿಯರು ಆರೋಗ್ಯ ಸುರಕ್ಷತೆ ಕಾಳಜಿ ವಹಿಸಿ

ಚಿತ್ರದುರ್ಗ.ನ.೬; ಕಿಶೋರಿಯರು ತಮ್ಮ ಆರೋಗ್ಯ ಸುರಕ್ಷತೆಯ ಜೊತೆಗೆ ನಿಮ್ಮ ಕುಟುಂಬದ ಎಲ್ಲಾ ಸದಸ್ಯರಿಗೂ ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆಯ ಕೋ ಬ್ರಾಂಡೆಡ್ ಕಾರ್ಡ್ ಮಾಡಿಸುವಂತೆ ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಆರ್.ರೂಪ ಕರೆ ನೀಡಿದರು.ಚಿತ್ರದುರ್ಗ ತಾಲ್ಲೂಕಿನ ಮೆದೇಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶನಿವಾರ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಸಹಯೋಗದಲ್ಲಿ “ಕಿಶೋರಿಯರಿಗೊಂದು ಕಿವಿ ಮಾತು” ಕಾರ್ಯಕ್ರಮದಲ್ಲಿ ಅವರು  ಮಾತನಾಡಿದರು.ಕಿಶೋರಿಯರಿಗೊಂದು ಕಿವಿ ಮಾತು” ಇದು ಒಂದು ರಾಷ್ಟ್ರೀಯ ಕಿಶೋರಿ ಸ್ವಾಸ್ಥ್ಯ ಕಾರ್ಯಕ್ರಮವಾಗಿದ್ದು, ಹದಿ ಹರೆಯದ ಹೆಣ್ಣುಮಕ್ಕಳು ಋತುಚಕ್ರ ಪ್ರಾರಂಭದಲ್ಲಿ ದೈಹಿಕ ಮಾನಸಿಕವಾಗಿ ಉಂಟಾಗುವ ಪರಿಣಾಮಗಳನ್ನು ಹೇಗೆ ಎದುರಿಸಬೇಕು ಎಂಬುದರ ಬಗ್ಗೆ ಆರೋಗ್ಯ ಶಿಕ್ಷಣ ಕಾರ್ಯಕ್ರಮ. ಹೆಣ್ಣು ಮಕ್ಕಳು ಋತುಮತಿ ರಜಸ್ವಲೆಯಾಗುವುದು ಪ್ರಕೃತಿಯ ಸಹಜ ಕ್ರಿಯೆ. ಮಜುಗರ ಸಂಕೋಜ ಬೇಡ. ವೈಯಕ್ತಿಕ ಸ್ವಚ್ಛತೆ ಪೌಷ್ಟಿಕಾಹಾರದ ಕಡೆ ಗಮನ ಹರಿಸಿ ಎಂದು ಹೇಳಿದರು.ಕಿಶೋರಿಯರು ತಮ್ಮ ಆರೋಗ್ಯ ಸುರಕ್ಷತೆಯ ಜೊತೆಗೆ ನಿಮ್ಮ ಕುಟುಂಬದ ಎಲ್ಲಾ ಸದಸ್ಯರಿಗೂ ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆಯ ಕೋ ಬ್ರಾಂಡೆಡ್ ಕಾರ್ಡ್ ಮಾಡಿಸಿ ಉಚಿತವಾಗಿ ಗ್ರಾಮ ಒನ್ ಸೆಂಟರ್‍ನಲ್ಲಿ ಮಾಡಿಸಿ ಬಿ.ಪಿ.ಎಲ್ ಕುಟುಂಬಕ್ಕೆ ರೂ.5ಲಕ್ಷ ಗಳವರೆಗೆ ಉನ್ನತಮಟ್ಟದ ವೈದ್ಯಕೀಯ ಸೇವಾ ವೆಚ್ಚ, ಎ.ಪಿ.ಎಲ್ ಕುಟುಂಬಕ್ಕೂ ರೂ.1.50ಲಕ್ಷಗಳ ಉನ್ನತ ಮಟ್ಟದ ವೈದ್ಯಕೀಯ ಸೇವಾ ವೆಚ್ಚವನ್ನು ಸರ್ಕಾರ ಉಚಿತವಾಗಿ ನೀಡುತ್ತಿದೆ ಎಂದರು.