ಕಿವುಡ , ಮೂಕರಿಗಾಗಿ ಪಂದ್ಯಾವಳಿ

ಕೋಲಾರ,ನ.೭; ಕೋಲಾರ ಜಲ್ಲಾ ಮೂಗರ ಸಂಘ ಮತ್ತು ಅಖಿಲ ಭಾರತ ಕ್ರೀಡಾ ಮಂಡಳಿ (ಕಿವುಡ ಮತ್ತು ಮೂಗರು) ನವದೆಹಲಿ ಇವರ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ಕ್ರೀಡಾ ಒಕ್ಕೂಟ ಕಿವುಡ ಮತ್ತು ಮೂಕರಿಗಾಗಿ ಬೆಂಗಳೂರು ಇವರ ಸಹಯೋಗದಲ್ಲಿ ಬಿಎಎಂಎಲ್ ನಗರ ಕ್ರೀಡಾ ಸಂಕೀರ್ಣ ಕೆ.ಜಿ.ಎಫ್‌ನಲ್ಲಿ ಟಿ-೨೦ ಕ್ರಿಕೇಟ್ ಪಂದ್ಯಾವಳಿಗಳು ನಡೆದವು.
ಟೂರ್ನಿಯಲ್ಲಿ ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಕೇರಳ, ಪುದುಚೇರಿ, ತಮಳುನಾಡು, ತೆಲಂಗಾಣ ರಾಜ್ಯಗಳಿಂದ ೫ ತಂಡಗಳು ಭಾಗವಹಿಸಿದ್ದವು. ಕೇರಳ ಮೊದಲ ಸ್ಥಾನ, ಕರ್ನಾಟಕ ದ್ವಿತೀಯ ಸ್ಥಾನ, ಪುದುಚೇರಿ ತೃತೀಯ ಸ್ಥಾನ, ತಮಿಳುನಾಡು ನಾಲ್ಕನೇ ಸ್ಥಾನ ಗಳಿಸಿರುತ್ತಾರೆ.
ಕೇರಳ ತಂಡದ ಪ್ರಥೀವ್ ಉತ್ತಮ ಆಟಗಾರ, ಉತ್ತಮ ಬೌಲರ್ ಆಗಿ ಕರ್ನಾಟಕ ತಂಡದ ಚರಣ್ ಎಂ, ಸರಣಿ ಶ್ರೇಷ್ಟ ಕೇರಳ ತಂಡದ ರವೀಶ್ ಪಡೆದುಕೊಂಡಿರುತ್ತಾರೆ.ಬಿಇಎಂಎಲ್ ಲಿಮಿಟೆಡ್ ಮುಖ್ಯ ಪ್ರಧಾನ ವ್ಯವಸ್ಥಾಪಕ ಈಶ್ವರ್‍ಭಟ್ ವಿಜೇತರಾದ ತಂಡಗಳಿಗೆ ಬಹುಮಾನ ವಿತರಿಸಿದರು.
ಎಐಎಸ್‌ಸಿ ಗಣೇಶರಾವ್, ಕೆಡಿಡಿಅ ಅಧ್ಯಕ್ಷ ನವೀನ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಕೆ.ಎಸ್ ಉಮಾಶಂಕರ್ ಉಪಸ್ಥಿತರಿದ್ದರು.