ಕಿವೀಸ್ ಫೈನಲ್ ಗೆ ಲಗ್ಗೆ, ಕೊಹ್ಲಿ ಕನಸು ಭಗ್ನ

ಅಬುಧಾಬಿ, ನ.7- ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಆಫ್ಘಾನಿಸ್ತಾನದ ವಿರುದ್ದ ಗೆಲುವು ಸಾಧಿಸಿದ ನ್ಯೂಜಿಲೆಂಡ್ ಫೈನಲ್ ಗೆ ಲಗ್ಗೆ ಹಾಕಿದೆ. ಈ ಮೂಲಕ ಸೆಮಿಫೈನಲ್‌ ತಲುಪುವ ಭಾರತದ
ಕನಸು ಭಗ್ನಗೊಂಡಿದೆ.
ಆಪ್ಘನ್ ಸೆಮಿಫೈನಲ್‌ ಪ್ರವೇಶಿಸಲು ಕಿವೀಸ್ ವಿರುದ್ದ ಬೃಹತ್ ಜಯ ಸಾಧಿಸಬೇಕಾಗಿತ್ತು.
ಇಂದು ನಡೆದ ಸೂಪರ್- 12 ಹಂತದ ಎರಡನೇ ಗುಂಪಿನ ಪಂದ್ಯದಲ್ಲಿ ಆಫ್ಘನ್ ಒಡ್ಡಿದ 125 ರನ್ ಗೆಲುವಿನ ಗುರಿಯನ್ನು , ನ್ಯೂಜಿಲೆಂಡ್ 18.1 ಓವರ್ ಗಳಲ್ಲಿ ಕೇವಲ ಎರಡು ವಿಕೆಟ್‌ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಈ ಸೋಲಿನೊಂದಿಗೆ ಆಫ್ಘನ್ ಹೋರಾಟ ಅಂತ್ಯಗೊಂಡಿತು.‌
ನಾಯಕ ಕೆವಿನ್ ವಿಲಿಯಮ್ಸ್ ಅಜೇಯ 40 ಹಾಗೂ ಡೆವೂನ್ ಕಾ‌ನ್ವೆ ಔಟಾಗದೆ 36 ಹಾಗೂ ಮಾರ್ಟಿನ್ ಗುಪ್ತಿಲ್ ಉಪಯುಕ್ತ 28 ರನ್ ಗಳಿಸುವ ಮೂಲಕ ಕಿವೀಸ್‌ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು. ಡರೀಲ್ ಮಿಚೆಲ್ 17 ರನ್ ಗಳಿಸಿದರು.
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಫ್ಘನ್ ನಜೀಬ್ ಉಲ್ಲ ಜದ್ರಾನ್,73 ರನ್ ಬಾರಿಸಿದರೂ, 20 ಓವರ್‌ಗಳಲ್ಲಿ 124 ರನ್ ಗಳಿಸಲಷ್ಟೇ ಸಾಧ್ಯವಾಯಿತು.
ಕಿವೀಸ್ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಲು ಆಫ್ಘನ್ ಬ್ಯಾಟರ್ ಗಳು ವಿಪಲರಾದರು. ಬೋಲ್ಟ್ 3 ಹಾಗೂ ಸೌಧೀ ಎರಡು ವಿಕೆಟ್ ಪಡೆದರು.
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ಟಿ-20 ವಿಶ್ವಕಪ್ ಗೆಲ್ಲಬೇಕೆಂಬ ಕನಸು ನುಚ್ಚುನೂರಾಗಿದೆ. ಈಗ ನಡೆಯುತ್ತಿರುವ ಟಿ-20 ವಿಶ್ವಕಪ್ ಟೂರ್ನಿಯ ನಂತರ ನ್ಯಾಯಕತ್ವ ತ್ಯಜಿಸುವುದಾಗಿ ಕೊಹ್ಲಿ ಘೋಷಿಸಿದ್ದರು.
ನಾಳೆ ನಡೆಯಲಿರುವ ಭಾರತ ಮತ್ತು ನಮೀಬಿಯಾ ವಿರುದ್ಧದ ಪಂದ್ಯ ಕೇವಲ ಔಪಚಾರಿಕ ಮಾತ್ರ.