ಕಿವಿ ನೋವಿಗೆ ಮನೆ ಮದ್ದು

ಮಾನ್ಯವಾದ ಕಿವಿನೋವನ್ನು ಮನೆ ಮದ್ದಿನ ಮೂಲಕ ನಿಯಂತ್ರಿಸಬಹುದು. ಮುಖ್ಯವಾಗಿ ನೋವಿರುವ ಕಿವಿಗೆ ಬಿಸಿ ನೀರಿನ ಬಾಟಲ್ ಅಥವಾ ಪ್ಯಾಡ್‌ನಿಂದ ಕಿವಿಯ ಮೇಲೆ ಒತ್ತಿ ಹಿಡಿಯುವುದು, ಬಿಸಿ ನೀರಿನಲ್ಲಿ ಸ್ವಚ್ಛವಾದ ಬಟ್ಟೆಯನ್ನು ಮುಳುಗಿಸಿ ನೀರನ್ನು ಹಿಂಡಿ ಆ ಬಟ್ಟೆಯನ್ನು ಕಿವಿಯ ಮೇಲಿರಿಸಬಹುದು. ಬೆಳ್ಳುಳ್ಳಿ ರಸದ ಒಂದೆರಡು ಹನಿಯನ್ನು ನೋವಿರುವ ಕಿವಿಗೆ ಹಾಕುವುದು.

ಈರುಳ್ಳಿಯನ್ನು ಕತ್ತರಿಸಿ ಸ್ವಲ್ಪ ಬಿಸಿ ಮಾಡಿ ತಣ್ಣಗಾದ ಬಳಿಕ ಅದರ ರಸ ತೆಗೆದು ಒಂದೆರಡು ಹನಿ ಕಿವಿಗೆ ಬಿಡಬಹುದು. ಉಪ್ಪನ್ನು ಸ್ವಲ್ಪ ಬಿಸಿ ಮಾಡಿ ದಪ್ಪನೆಯ ಕಾಲು ಚೀಲದಲ್ಲಿ ಹಾಕಿ ನೋವಿರುವ ಕಿವಿಯ ಅಡಿಯಲ್ಲಿ ೮- ೧೦ ಬಾರಿ ಇಡುವುದರಿಂದಲೂ ಕಿವಿನೋವು ಶಮನವಾಗುವುದು.

ಮಾವಿನ ಎಲೆಯನ್ನು ಜಜ್ಜಿ ರಸ ತೆಗೆದು ಬಿಸಿ ಮಾಡಿ ೩- ೪ ಹನಿ ಕಿವಿಗೆ ಹಾಕುವುದರಿಂದ ನೋವು ನಿವಾರಣೆ ಸಾಧ್ಯವಿದೆ.

ಇಯರ್ ಫೋನ್ ಅಥವಾ ಹೆಡ್ ಫೋನ್‌ನಲ್ಲಿ ಜೋರಾಗಿ ನಿರಂತರ ಹಾಡು ಕೇಳು ವುದರಿಂದ ಕಿವಿಯ ಡ್ರಮ್ ಛಿದ್ರವಾಗುವ ಅಥವಾ ತಲೆನೋವು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಅದ್ದರಿಂದ ಶಬ್ದವನ್ನು ಕಡಿಮೆ ಮಾಡಿ ಹಾಡು ಕೇಳಿ. ಇಯರ್ ಫೋನ್‌ಗಳ ಬಳಕೆ ಕಡಿಮೆ ಮಾಡುವುದು ಉತ್ತಮ.

ಕಿವಿಯ ಮೇಣವು ತುಂಬಾ ಲಾಭಕಾರಿ ಯಾಗಿದೆ. ಕಿವಿಯು ತನ್ನಿಂದ ತಾನೇ ಸ್ವಚ್ಛವಾಗುತ್ತಾ ಹೋಗುತ್ತದೆ. ಕಿವಿಯ ಮೇಣವನ್ನು ಸ್ವಚ್ಛ ಮಾಡಿಕೊಳ್ಳುವ ಅಗತ್ಯವೇ ಇಲ್ಲ. ಯಾಕೆಂದರೆ ಕಿವಿಗೆ ಎಷ್ಟು ಬೇಕೋ ಅಷ್ಟು ಮೇಣವನ್ನು ಮಾತ್ರ ಕಿವಿ ಉತ್ಪಾದಿಸುತ್ತದೆ. ಇದು ಅಗತ್ಯಕ್ಕಿಂತ ಹೆಚ್ಚು ಮೇಣವನ್ನು ಉತ್ಪಾದಿಸುವುದಿಲ್ಲ. ಆದರೆ ಅದನ್ನು ಬಲವಂತವಾಗಿ ತೆಗೆಯುವಾಗ ಎಚ್ಚರ ವಹಿಸಬೇಕು.

ಚೂಪಾದ ವಸ್ತುಗಳನ್ನು ಕಿವಿ ಯೊಳಗೆ ಹಾಕುವುದು ಅಪಾಯಕಾರಿ. ಇದರಿಂದ ಶಾಶ್ವತವಾಗಿ ಟೈಂಪನಿಕ್ ಮೆಂಬರೆನ್ಸ್‌ಗೆಹಾನಿಯಾಗ ಬಹುದು. ಚೂಪಾದ ವಸ್ತುಗಳಿಂದ ಕಿವಿಯ ಒಳಗಿನ ಭಾಗದಲ್ಲಿ ಹಾನಿಯಾಗಬಹುದು. ಇದರಿಂದ ಸೋಂಕು ಕಾಣಿಸಿ ಕೊಳ್ಳಬಹುದು.