ಕಿಲ್ಲಾರಟ್ಟಿ ಗ್ರಾಮದಲ್ಲಿ ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ

ಲಿಂಗಸುಗೂರು.ಡಿ.೦೭-ಲಿಂಗಸುಗೂರು ತಾಲೂಕಿನ ಮುದಗಲ್ ಹೋಬಳಿ ವ್ಯಾಪ್ತಿಯಲ್ಲಿ ಬರುವ ಕಿಲ್ಲರ್ ಹಟ್ಟಿ ಗ್ರಾಮದಲ್ಲಿ ೬೫ನೇ ಯ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪರಿನಿರ್ವಾಣ ಕಾರ್ಯಕ್ರಮವನ್ನು ಆಚರಿಸಲಾಯಿತು. ಬಾಬಾಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಅರ್ಚನೆ ಮಾಡಲಾಯಿತು.
ಹುಲಗಪ್ಪ ಕೆಸರಟ್ಟಿ, ಸಿದ್ದಪ್ಪಕಲಳಾಬಡ್ಡಿ, ಕುಷ್ಟಗಿ, ಸಂಗಡಿಗರೊಂದಿಗೆ ಜೈ ಭೀಮ್ ಭೀಮ ಗೀತೆ ಹಾಡಿದರು. ಡಿಎಸ್‌ಎಸ್ ಲಿಂಗಸುಗೂರು ತಾಲೂಕು ಸಂಘಟನಾ ಸಂಚಾಲಕರಾದ ಶರಣಪ್ಪ ಕಟ್ಟಿಮನಿ ಮುದುಗಲ್ ಮಾತನಾಡಿದರು. ಅಂಬೇಡ್ಕರ್ ಅವರು ನಮ್ಮನ್ನೆಲ್ಲ ಅಗಲದಂತೆ ದಿನವಿದ್ದು ನಮ್ಮ ಜ್ಯೋತಿ ನಂದಿದ ದಿನ. ಅವರು ನಮ್ಮೊಂದಿಗೆ ಸದಾ ಇದ್ದಾರೆ ಎಂದು ಮಾತನಾಡಿದರು. ಈ ಸಂದರ್ಭದಲ್ಲಿ ಲಿಂಗಸುಗೂರು ತಾಲೂಕಿನ ಪತ್ರಿಕೆ ವರದಿಗಾರರಾದ ಅಮರಯ್ಯ ಘಂಟ್ಟಿ ಮಾತನಾಡಿ
ತತ್ವಾರ್ದಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಅಂದಾಗ ಮಾತ್ರ ಶೋಷಣೆಯಿಂದ ಮುಕ್ತಿ ಪಡೆಯಲು ಸಾಧ್ಯ.
ತಮ್ಮ ಕೊನೆ ಘಳಿಗೆಯಲ್ಲಿ ತನ್ನ ಆಪ್ತ ಸಹಾಯಕ ರತ್ನು ರವರನ್ನು ಕರೆದು ಆಳುತ ತನ್ನ ದುಃಖವನ್ನು ತೋಡಿಕೊಳ್ಳುತ್ತಾ ನನ್ನ ಸಮುದಾಯದ ಶಿಕ್ಷಣ ಪಡೆದ ಶಿಕ್ಷಿತರು ಅನಕ್ಷರಸ್ಥರಿಗೆ ದಾರಿ ದೀಪವಾಗುತ್ತಾರೆಂದು ನಂಬಿದೆ ಆದರೆ ಅವರು ಸ್ವಾರ್ಥಿಗಳಾಗಿದ್ದಾರೆ. ನಾನು ನಡೆಸಿಕೊಂಡ ಹೋರಾಟದ ರಥವನ್ನು ಇಲ್ಲಿಯವರಿಗೆ ತಂದಿರುವೆ ಅದನ್ನು ಮುಂದೆ ತೆಗೆದುಕೊಂಡು ಹೋಗುವ ಒಬ್ಬ ನಾಯಕರು ಮುಂದೆ ಬರುತ್ತಿಲ್ಲ. ಈ ಹೊರಾಟದ ರಥವನ್ನು ಮುಂದೆ ತೆಗೆದುಕೊಂಡು ಹೋಗುವ ತಾಕತ್ತು ಇದ್ದರೆ ತೆಗೆದು ಕೊಂಡು ಹೋಗ ಹಿಂದೆ ಮಾತ್ರ ತಳ್ಳಬೇಡಿ ಎಂದರು.
ಅವರು ಪರಿನಿರ್ವಾಣ ಹೊಂದಿ ೬ ದಶಕ ಕಳೆದ ಮೇಲೆ ಕೀಲಾರ ಹಚ್ಚಿಯಲ್ಲಿ ಇದೇ ಪ್ರಥಮ ಬಾರಿಗೆ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಇಂತಹ ಕಾರ್ಯಕ್ರಮದಲ್ಲಿ ಆಯೋಜನೆ ಮಾಡಿ ಜನರಲ್ಲಿ ಅರಿವು ಮೂಡಿಸಿದ್ದಾರೆ.
ಈ ಸಂದರ್ಭದಲ್ಲಿ ಮಾದಿಗ ಮಹಾಸಭಾ ತಾಲೂಕು ಅಧ್ಯಕ್ಷರು ರಮೇಶ್, ಗೋಸ್ಲಿ, ದೇವೇಂದ್ರ ಕರಡಕಲ್ ಪ್ರೇಮ ಜೀವಿ ಗೊರೆಬಾಳ ಅಮರೇಶ್ ಗೋಸ್ಲಿ, ಚಂದ್ರಕಾಂತ್ ಮೋಹನ್, ಗೋಸ್ಲಿ, ಅರುಣ್ ಚಿಕ್ಕ ಹೆಸರು, ಕುಬೇರಗುಡ್ಡ ಹನುಮಂತ ಆಶಾಹಾಳ ಇನ್ನು ಇತರರು ಭಾಗವಹಿಸಿದ್ದರು.