ಕಿಲಗೆರೆ ಗ್ರಾಮದಲ್ಲಿ ವಿಜೃಂಭಣೆಯ ಸಿದ್ದಪ್ಪಾಜಿ ಕೊಂಡೋತ್ಸವ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಮಾ.31- ತಾಲೂಕಿನ ಕಿಲಗೆರೆ ಗ್ರಾಮದಲ್ಲಿ 16 ನೇ ವರ್ಷದ ಶ್ರೀ ಸಿದ್ದಪ್ಪಾಜಿ ಕೊಂಡೋತ್ಸವವು ವಿಜೃಂಭಣೆಯಿಂದ ಜರುಗಿತು.
ಕೊಂಡೋತ್ಸವದ ಅಂಗವಾಗಿ ಗುರುವಾರ ಸಂಜೆಕೊಂಡದ ಸೌದೆ ಗಾಡಿಗಳನ್ನು ತರಲಾಯಿತು. ಗ್ರಾಮದಲ್ಲಿ ಮಂಗಳವಾದ್ಯ, ತಮಟೆ, ಸತ್ತಿಗೆ, ಸುರಿಪಾನಿಗಳೊಂದಿಗೆ ಪೂಜೆ ಸಲ್ಲಿಸಿ ತರಲಾಯಿತು. ತಡರಾತ್ರಿ ಅಗ್ನಿಸ್ಪರ್ಶ ಮಾಡಲಾಯಿತು.
ಶುಕ್ರವಾರ ಬೆಳಗಿನ ಜಾವಗ್ರಾಮದ ಹೊರವಲಯದಲ್ಲಿರುವ ಶ್ರೀ ದೊಡ್ಡಮ್ಮತಾಯಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಕಂಡಾಯಗಳನ್ನು ಮೆರವಣಿಗೆಗಳನ್ನು ತರಲಾಯಿತು. ಈ ವೇಳೆ ಬಾಯಿ ಬೀಗ ಹರಕೆ ಹೊತ್ತಿದ್ದ ಭಕ್ತಾದಿಗಳು ಬಂದು ದೇವರಿಗೆ ಪೂಜೆ ಸಲ್ಲಿಸಿದರು.
ಬಳಿಕ ಮಂಟೇಸ್ವಾಮಿ ದೇವಸ್ಥಾನದ ಮುಂಭಾಗಕೊಂಡವನ್ನು ದೇವರ ಗುಡ್ಡರು ಹಾಯ್ದರು. ವಿವಿದೆಡೆಯಿಂದ ಆಗಮಿಸಿದ್ದ ಸಾವಿರಾರು ಭಕ್ತರು ಭಕ್ತಿಯಿಂದ ಪೂಜೆ ಸಲ್ಲಿಸಿ ಕೊಂಡೋತ್ಸವವನ್ನು ಕಣ್ತುಂಬಿಕೊಂಡರು.