“ಕಿರು ಹಣ್ಣುಗಳ ಮಹತ್ವ ಮತ್ತು ಅವುಗಳ ನಿರ್ವಹಣೆ” ಕುರಿತು ತರಬೇತಿ

ಬೀದರ:ನ.18:ಬದಲಾಗುತ್ತಿರುವ ವಾತವರಣಕ್ಕೆ ಹೊಂದಿಕೊಂಡು ಬೇಳೆಯಬಹುದಾದ ಮತ್ತು ವಾಣಿಜ್ಯವಾಗಿ ಬೆಳೆಯದೆ ಇರುವ ಅನೇಕ ಹಣ್ಣು ಬೆಳೆಗಳಿವೆ. ಅವುಗಳನ್ನು ಕಿರು ಹಣ್ಣುಗಳೆಂದು ಕರೆಯಲಾಗುತ್ತದೆ. ವಾಸ್ತವದಲ್ಲಿ ಅವು ಹೆಚ್ಚು ಪೋಷಕಾಂಶ ಹೊಂದಿರುವ ಹಾಗೂ ಬೆಳೆಗಾರರಿಗೆ ಲಾಭ ತಂದು ಕೊಡಬಹುದಾದ ಸಿರಿ ಹಣ್ಣುಗಳಾಗಿವೆ. ಇವುಗಳನ್ನು ನಮ್ಮ ಜಿಲ್ಲೆಯಲ್ಲಿ ಬೆಳೆಯಬಹುದಾಗಿದೆ. ಈ ನಿಟ್ಟಿನಲ್ಲಿ ಸಿರಿ ಹಣ್ಣುಗಳನ್ನು ಜನಪ್ರೀಯಗೊಳಿಸುವಲ್ಲಿ ಮತ್ತು ಪ್ರಾಯೋಗಿಕವಾಗಿ ಅವುಗಳ ನಿರ್ವಹಣೆ ತಿಳಿಸಿಕೋಡುವ ನಿಟ್ಟಿನಲ್ಲಿ ಜನವಾಡ ಹತ್ತಿರದ ಕೃಷಿ ವಿಜ್ಞಾನ ಕೇಂದ್ರ, ಬೀದರದಲ್ಲಿ “ಕಿರು ಹಣ್ಣುಗಳ ಮಹತ್ವ ಮತ್ತು ಅವುಗಳ ನಿರ್ವಹಣೆ” ಕುರಿತು ದಿನಾಂಕ 21.11.2022 ಸೊಮವಾರ ಬೆಳಗ್ಗೆ 10.30 ಕ್ಕೆ ತರಬೇತಿ ಹಮ್ಮಿಕೊಳ್ಳಲಾಗಿದೆ. ಈ ತರಬೇತಿಯಲ್ಲಿ ಕಿರು ಹಣ್ಣುಗಳ ಮಹತ್ವ, ಅವುಗಳ ಬೇಸಾಯ ಹಾಗು ಮಾರುಕಟ್ಟೆ ಮುಂತಾದ ವಿಷಯಗಳ ಕುರಿತು ಕೃಷಿ ಮಹಾವಿದ್ಯಾಲಯ ರಾಯಚೂರಿನ, ತೋಟಗಾರಿಕೆ ವಿಭಾಗದ ಪ್ರಾಧ್ಯಾಪಕರಾದ ಡಾ. ಎ.ಆರ್.ಕುರುಬರ್ ರವರು ಸಂಪನ್ನೂಲ ವಿಜ್ಞಾನಿಯಾಗಿ ಭಾಗವಹಿಸಿ ಮಾಹಿತಿ ನೀಡಲಿದ್ದಾರೆ. ಜಿಲ್ಲೆಯ ಅನುಭವಿ ರೈತರೊಂದಿಗೆÀ ಚರ್ಚೆ ಆಯೋಜಿಸಲಾಗಿದೆ. ಕಾರಣ ಆಸಕ್ತ ರೈತ ಬಾಂಧವರು ಭಾಗವಹಿಸಿ ತರಬೇತಿಯ ಲಾಭ ಪಡೆಯಲು ಡಾ ಸುನಿಲಕುಮಾರ ಎನ್.ಎಮ್. ಹಿರಿಯ ವಿಜ್ಞಾನಿ ಹಾಗು ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ ಬೀದರ ಇವರು ಕೋರಿರುತ್ತಾರೆ.