ಕಿರು ಸಾಲದ ಸೌಲಭ್ಯ ಪಡೆದುಕೊಳ್ಳಲು ಬೀದಿಬದಿ ವ್ಯಾಪಾರಸ್ಥರಿಗೆ ಸಲಹೆ

ಭಾಲ್ಕಿ:ನ.17:ಪ್ರಧಾನ ಮಂತ್ರಿ ಸೇವಾ ನಿಧಿ ಹಾಗೂ ಆತ್ಮನಿರ್ಭರ ಯೋಜನೆಯಡಿ ಬೀದಿ ಬದಿ ವ್ಯಾಪಾರಸ್ಥರಿಗೆ ಕಿರು ಸಾಲ ನೀಡಲಾಗುತ್ತಿದ್ದು, ಸದುಪಯೋಗ ಪಡೆದು ಕೊಳ್ಳುವಂತೆ ಪುರಸಭೆ ಅಧಿಕಾರಿ ಸ್ವಾಮಿದಾಸ್ ತಿಳಿಸಿದ್ದಾರೆ.

ನೋಂದಾಯಿತ ಬೀದಿಬದಿ ವ್ಯಾಪಾರಸ್ಥರು ಕಿರು ಸಾಲದ ರೂಪದಲ್ಲಿ 10 ಸಾವಿರ ರೂ ವರೆಗೂ ಸಾಲ ಪಡೆದು ಕೊಳ್ಳಬಹುದಾಗಿದೆ. ಆಸಕ್ತರು ಕಿರು ಸಾಲಕ್ಕಾಗಿ ನೋಂದಾಯಿತ ಗುರುತಿನ ಚೀಟಿ, ಆಧಾರ್, ಚುನಾವಣೆ ಗುರುತಿನ ಚೀಟಿ, ಬ್ಯಾಂಕ್ ಪಾಸ್ಬುಕ್ ಸೇರಿ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.